2nd PUC ಜಿಲ್ಲಾವಾರು ಲಿಸ್ಟ್, ಕಳೆದ ಬಾರಿ ಕೊನೆ ಸ್ಥಾನದಲ್ಲಿದ್ದು ಉಗಿಸಿಕೊಂಡ ಚಿತ್ರದುರ್ಗಕ್ಕೆ ಎಷ್ಟನೇ ಸ್ಥಾನ?

By Gowthami K  |  First Published Apr 21, 2023, 11:26 AM IST

ಕಳೆದ ಬಾರಿಯ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನ ಪಡೆದಿತ್ತು. ಹೀಗಾಗಿ ಚಿತ್ರದುರ್ಗಕ್ಕೆ ಈ ಸ್ಥಿತಿ ಬರಲು ಅಧಿಕಾರಿಗಳೇ ಕಾರಣ ಎಂದು ದೂರಲಾಗಿತ್ತು. ಆತ್ಮಾವಲೋಕನ ಸಭೆ ಮಾಡಲಾಗಿತ್ತು. ಈ ಬಾರಿ ಚಿತ್ರದುರ್ಗ 28ನೇ ಸ್ಥಾನ ಪಡೆದು ಕಳೆದ ಬಾರಿಗಿಂತ ಸುಧಾರಣೆ ಕಂಡಿದೆ.


ಬೆಂಗಳೂರು (ಏ.21): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾರ್ಚ್ ನಲ್ಲಿ ನಡೆಸಿದ್ದ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ  ಪ್ರಕಟಗೊಂಡಿದೆ.  ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಎರಡನೇ ಸ್ಥಾನ ಪಡೆದಿದೆ. ಕೊಡಗು ತೃತೀಯ ಸ್ಥಾನ ಪಡೆದಿದೆ.  ಇಲ್ಲಿ ಜಿಲ್ಲಾವಾರು ಫಲಿತಾಂಶದ ಸಂಫೂರ್ಣ ವಿವರ ನೀಡಲಾಗಿದೆ. ವಿಶೇಷವೆಂದರೆ ಕಳೆದ ಬಾರಿಯ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನ ಪಡೆದಿತ್ತು. ಹೀಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಗೊಂಡಿದ್ದರು. ಮಾತ್ರವಲ್ಲ ಶೈಕ್ಷಣಿಕ ಸಾಧನೆ ಕುಸಿತದ ಬಗ್ಗೆ ಪಿ.ಯು. ಕಾಲೇಜು ಪ್ರಾಂಶುಪಾಲರ ಆತ್ಮಾವಲೋಕ ಸಭೆ ನಡೆಸಿ ಫಲಿತಾಂಶ ಸುಧಾರಣೆ ಮಾರ್ಗೋಪಾಯಗಳ ಬಗ್ಗೆ ಮಾತುಕತೆ ಕೂಡ ನಡೆಸಿದ್ದರು. ಈ ಬಾರಿ ಚಿತ್ರದುರ್ಗ 28ನೇ ಸ್ಥಾನ ಪಡೆದು ಕಳೆದ ಬಾರಿಗಿಂತ ಸುಧಾರಣೆ ಕಂಡಿದೆ.

ಇಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ ಪಡೆದಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
1.ದಕ್ಷಿಣ ಕನ್ನಡ((95.34%)
2.ಉಡುಪಿ(95.24%)
3.ಕೊಡಗು (90.55%)
4.ಉತ್ತರ ಕನ್ನಡ (90%)
5.ವಿಜಯಪುರ (84.69%)
6. ಚಿಕ್ಕಮಗಳೂರು(83.28%)
7. ಹಾಸನ(83.14 %)
8. ಶಿವಮೊಗ್ಗ (83.13%)
9. ಬೆಂಗಳೂರು ಗ್ರಾಮಾಂತರ(83.04%)
10.ಬೆಂಗಳೂರು ದಕ್ಷಿಣ(82.03%)
11.ಬೆಂಗಳೂರು ಉತ್ತರ(82.25%)
12. ಚಾಮರಾಜನಗರ (81.82%)
13.ಮೈಸೂರು (79.89%)
14.ಕೋಲಾರ (79.02%)
15. ಬಾಗಲಕೋಟೆ (78.79%)
16. ಚಿಕ್ಕೋಡಿ (78.76%)
17. ರಾಮನಗರ (78.12%)
18. ಬೀದರ್ (78%)
19. ಚಿಕ್ಕಬಳ್ಳಾಪುರ (77.77 %)
20. ಮಂಡ್ಯ (77.47%)
21. ದಾವಣಗೆರೆ (75.72%)
22. ಕೊಪ್ಪಳ (74.08%)
23. ತುಮಕೂರು (74.05%)
24. ಹಾವೇರಿ (74.13%)
25. ಬೆಳಗಾವಿ (73.98%)
26. ಧಾರವಾಡ (73.54%)
27. ಬಳ್ಳಾರಿ (69.55%)
28. ಚಿತ್ರದುರ್ಗ (69.5%)
29. ಕಲಬುರಗಿ (69.37%)
30 ಗದಗ (66.91%)
31. ರಾಯಚೂರು (66.21%)
32. ಯಾದಗಿರಿ(  62.98%)

Tap to resize

Latest Videos

ಈ ಬಾರಿ  ನಿರೀಕ್ಷೆಗಿಂತ ಎರಡು ವಾರದ ಮೊದಲೇ ಫಲಿತಾಂಶ ಪ್ರಕಟಿಸಲಾಗಿದೆ. ಮಲ್ಲೇಶ್ವರದಲ್ಲಿರುವ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ  ಫಲಿತಾಂಶ ಪ್ರಕಟಿಸಲಾಗಿದೆ.  ಬೆಳಗ್ಗೆ 11 ಗಂಟೆಯಿಂದ  ವಿದ್ಯಾರ್ಥಿಗಳು  https://karresults.nic.in/ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಕೂಡ ಫಲಿತಾಂಶ ಕಳುಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ತಬಸ್ಸಮ್ ಶಾಹಿಕ್ - 593 ಪ್ರಥಮ ರ‍್ಯಾಂಕ್- NMKRV ಜಯನಗರ
ಕುಶ ನಾಯ್ಕ್ -592- ಎರಡನೇ ರ‍್ಯಾಂಕ್  ಇಂದು ಇನೋವೇಟಿವ್ ಪಿಯು ಕಾಲೇಜು, ಬಳ್ಳಾರಿ
ದಡ್ಡಿ ಕರೀಬಸಮ್ಮ- 592 ಎರಡನೇ ರ‍್ಯಾಂಕ್  ಇಂದು ಇನೋವೇಟಿವ್ ಪಿಯು ಕಾಲೇಜು, ಬಳ್ಳಾರಿ
ಸಹನಾ- 591- ಮೂರನೇ ರ‍್ಯಾಂಕ್  ಸರ್ಕಾರಿ ಪಿಯು ಕಾಲೇಜು ಬೆಳಗಾವಿ 

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ಅನನ್ಯಾ - 600 - ಪ್ರಥಮ ರ‍್ಯಾಂಕ್  ಅಳ್ವಾಸ್  ಪಿಯು ಕಾಲೇಜು ಮೂಡುಬಿದರೆ 
ಅನ್ವಿತ ಡಿಎನ್ 596 - ಎರಡನೇ ರ‍್ಯಾಂಕ್ - ವಿಕಾಸ್ ಕಾಂಪೋಸಿಟ್ ಪಿಯು ಕಾಲೇಜು 
ಶುಭಶ್ರೀ ಎಂ- 595 - ಮೂರನೇ ರ‍್ಯಾಂಕ್  ರಾಜಾಜಿನಗರ ಎಎಸ್ ಸ್ಸಿ ಪಿಯು ಕಾಲೇಜು

BREAKING: ದ್ವಿತೀಯ ಪಿಯುಸಿ ಫಲಿತಾಂಶ, ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ

ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ಎಸ್.ಎಂ.ಕೌಶಿಕ್ 596 -  ಪ್ರಥಮ ರ‍್ಯಾಂಕ್ ಕೋಲಾರ, ಗಂಗೋತ್ರಿ ಪಿಯು ಕಾಲೇಜು
ಕಟ್ಟೋಜು ಜೈಶಿಕ್ - 595 - ಎರಡನೇ ರ‍್ಯಾಂಕ್-  Rv Pu ಕಾಲೇಜು ಬೆಂಗಳೂರು ಜಯನಗರ 
ಹರ್ಷಿತ ಆರ್ -594 - ಮೂರನೇ ರ‍್ಯಾಂಕ್ ನಾರಾಯಣ ಪಿಯು ಕಾಲೇಜು ಬೆಂಗಳೂರು

click me!