CSIR UGC NET 2021 Correction Window: ಜನವರಿ 9 ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದ NTA

By Suvarna News  |  First Published Jan 6, 2022, 3:46 PM IST
ಜೂನ್ 2021ರ CSIR-ಯುಜಿಸಿ NET ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಗಳಿಗೆ ಜನವರಿ 9, 2022 ರವರೆಗೆ ತಿದ್ದುಪಡಿಗಳನ್ನು ಮಾಡಬಹುದು. ತಿದ್ದುಪಡಿ ಮಾಡುವ ಸೌಲಭ್ಯವು ಅಧಿಕೃತ NTA ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ

ಬೆಂಗಳೂರು(ಜ.6): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 2021ರ CSIR-ಯುಜಿಸಿ NET ಪರೀಕ್ಷೆಗೆ  ಹೆಸರು ನೋಂದಾಯಿಸಿದ ಎಲ್ಲಾ ಅಭ್ಯರ್ಥಿಗಳಿಗಾಗಿ ತಿದ್ದುಪಡಿ ವಿಂಡೋವನ್ನು ತೆರೆದಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಗಳಿಗೆ ಜನವರಿ 9, 2022 ರವರೆಗೆ ತಿದ್ದುಪಡಿಗಳನ್ನು ಮಾಡಬಹುದು. ತಿದ್ದುಪಡಿ ಮಾಡುವ ಸೌಲಭ್ಯವು ಅಧಿಕೃತ NTA ವೆಬ್‌ಸೈಟ್ csirnet.nta.nic.in ನಲ್ಲಿ ಲಭ್ಯವಿರಲಿದೆ.

ಗಮನದಲ್ಲಿರಲಿ, ಈ ತಿದ್ದುಪಡಿ ಸೌಲಭ್ಯವು ಜನವರಿ 8, 2021ಕ್ಕೂ  ಮೊದಲು ಅಗತ್ಯವಿರುವ ಶುಲ್ಕದೊಂದಿಗೆ ತಮ್ಮ ಅರ್ಜಿ ನಮೂನೆಯನ್ನು ಯಶಸ್ವಿಯಾಗಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ. 

Tap to resize

Latest Videos

undefined

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (National Testing Agency) ಎಲ್ಲಾ ನೋಂದಾಯಿತ ಅಭ್ಯರ್ಥಿಗಳಿಗೆ ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಲು  ನೀಡಿರುವ ಕೇವಲ ಒಂದು ಅವಕಾಶವಿದು.  ಅಭ್ಯರ್ಥಿಗಳು ತಮ್ಮ ವಿವರಗಳಲ್ಲಿ ವ್ಯತ್ಯಾಸವಿದ್ದಲ್ಲಿ, ತಿದ್ದುಪಡಿಗಳನ್ನು ಮಾಡಬಹುದು.

BCWD NEET JEE Pre Examination Coaching 2022: ಉಚಿತ ನೀಟ್‌, ಜೆಇಇ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಆನ್‌ಲೈನ್ ತಿದ್ದುಪಡಿಯ ಸಮಯದಲ್ಲಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಿದ್ದಲ್ಲಿ ಸಂಬಂಧಪಟ್ಟ ಅಭ್ಯರ್ಥಿಯು ಕ್ರೆಡಿಟ್/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/UPI ಅಥವಾ Paytm ವ್ಯಾಲೆಟ್ ಮೂಲಕ ಪಾವತಿಸಲು ಕೋರಲಾಗಿದೆ.

ಜೂನ್ 2021 ರ ಜಂಟಿ CSIR-UGC NET ಪರೀಕ್ಷೆಯ ಅರ್ಜಿ ನಮೂನೆಯ ಯಾವುದೇ ತಿದ್ದುಪಡಿಗಳನ್ನು  ಜನವರಿ 9, 2022 ರ ನಂತರ ಸಂಸ್ಥೆಯು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

Karnataka schools self defence training: ರಾಜ್ಯದ ವಿದ್ಯಾರ್ಥಿನಿಯರಿಗೆ 'ಸ್ವಯಂ ರಕ್ಷಣಾ' ಕೌಶಲ್ಯ ತರಬೇತಿ

CSIR (Council of Scientific & Industrial Research) & UGC NET ಪರೀಕ್ಷೆಯು ಜನವರಿ 29, 2022 ಮತ್ತು ಫೆಬ್ರುವರಿ 15 ರಿಂದ 18, 2022 ಎರಡು ಪಾಳಿಗಳಲ್ಲಿ ನಡೆಯಲಿದೆ. ಎನ್‌ಟಿಎ'ಯು ಈ ಹಿಂದೆ ಸಿಎಸ್‌ಐಆರ್‌ ಎನ್‌ಇಟಿ ಪರೀಕ್ಷೆಯನ್ನು ಜನವರಿ 29, ಫೆಬ್ರವರಿ 05, 06, 2022 ರಂದು ನಿಗದಿಪಡಿಸಿತ್ತು. 

ಡಿಸೆಂಬರ್ ಕೊನೆಗೆ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು, "CSIR-UGC (University Grants Commission) NET ಜೂನ್-2021 ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳಲ್ಲಿ ಹಲವರು ಫೆಬ್ರುವರಿ 05, 06, 2022 ರಂದು ಇತರೆ ಪ್ರಮುಖ ಪರೀಕ್ಷೆಗಳನ್ನು ನಿಗದಿ ಮಾಡಲಾಗಿದೆ. ಆದ್ದರಿಂದ ಪರೀಕ್ಷೆ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇವರ ಮನವಿ ಮೇರೆಗೆ ಪರಿಷ್ಕೃತ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ," ಎಂದಿತ್ತು.

Prize Money Scholarship: ಪ್ರೋತ್ಸಾಹಧನಕ್ಕಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ SC/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಇತರೆ ಹೆಚ್ಚಿನ ಮಾಹಿತಿಗೆ ಎನ್‌ಟಿಎ ಸಹಾಯವಾಣಿ 01140759000 ಗೆ ಕರೆ ಮಾಡಬಹುದು. ಅಥವಾ ಎನ್‌ಟಿಎ ಇ-ಮೇಲ್‌ ವಿಳಾಸ csirnet@nta.ac.in ಗೆ ಸಂದೇಶ ಕಳುಹಿಸಬಹುದು.

ವಿಜ್ಞಾನ ವಿಭಾಗ ಮತ್ತು ಗಣಿತ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಾಸ್‌ ಮಾಡಿರುವ ಮತ್ತು ಪ್ರಸ್ತುತ ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು CSIR-UGC NET (National Eligibility Test) ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರು. ಸದರಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಮಾಡಿದ ಅಭ್ಯರ್ಥಿಗಳು, ಅಸಿಸ್ಟಂಟ್ ಪ್ರೊಫೆಸರ್ ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್‌ ಗೆ ಅರ್ಹತೆ ಗಿಟ್ಟಿಸಬಹುದು.

CBSE Merit Scholarship Scheme: ಒಬ್ಬಳೇ ಹೆಣ್ಣು ಮಗಳಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ

click me!