ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ; ಇವರ ವಾರ್ಷಿಕ ಸಂಬಳವೇ 9.6 ಕೋಟಿ ರೂ.!

By Suvarna News  |  First Published Feb 15, 2024, 10:45 AM IST

ಭಾರತದ ಅತ್ಯಂತ ಶ್ರೀಮಂತ ಟೀಚರ್ ಎಂದ ಕೂಡಲೇ ನೀವು ಬೈಜೂಸ್‌ನ ರವೀಂದ್ರನ್ ಇರಬಹುದು ಎಂದುಕೊಳ್ಳಬಹುದು. ಆದರೆ, ಈ ಬಿರುದನ್ನು ಅಲಂಕರಿಸಿರುವುದು ಹೆಚ್ಚು ಸುದ್ದಿಗಿದ್ದಿ ಮಾಡದ ಅಲಖ್ ಪಾಂಡೆ.


ಶಿಕ್ಷಕರಾದವರು ಎಂಜಿನಿಯರ್, ಡಾಕ್ಟರ್, ವಿಜ್ಞಾನಿಗಳು, ದೊಡ್ಡ ದೊಡ್ಡ ಉದ್ಯಮಿಗಳನ್ನು ಸೃಷ್ಟಿಸುತ್ತಾರೆ, ತಮ್ಮ ಶಿಷ್ಯರು ಲಕ್ಷ, ಕೋಟಿಯಲ್ಲಿ ದುಡಿದು ಜೀವನ ಕಟ್ಟಿಕೊಳ್ಳುವಂತೆ ಮಾಡುತ್ತಾರೆ. ಆದರೆ, ಅವರು ಮಾತ್ರ ಸಣ್ಣ ಸಂಬಳಕ್ಕೆ ತೃಪ್ತಿ ಪಟ್ಟುಕೊಂಡಿರುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಈ ಶಿಕ್ಷಕ ಪಡೆಯುವ ಸಂಬಳ ಕೇಳಿದ್ರೆ, ನಮ್ಮಲ್ಲಿ ಹೇಳಿಕೊಡುವ ಅದ್ಭುತ ಕೌಶಲ್ಯವಿದ್ದರೆ ಶಿಕ್ಷಕ ವೃತ್ತಿಯನ್ನು ಖಂಡಿತವಾಗಿಯೂ ತೃಪ್ತಿಗಾಗಿ ಹಾಗೂ ಸಂಪಾದನೆಗಾಗಿ ಹಿಂದುಮುಂದು ನೋಡದೆ ಆಯ್ದುಕೊಳ್ಳಬಹುದು ಎಂಬ ಪ್ರೇರಣೆ ಹುಟ್ಟುತ್ತದೆ. 

ಹೌದು, ಅಲಖ್ ಪಾಂಡೆ ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇವರು ಪಡೆಯುತ್ತಿದ್ದ ವಾರ್ಷಿಕ ಸಂಬಳ ಬರೋಬ್ಬರಿ 9.6 ಕೋಟಿ ರೂ.ಗಳು. ಆದರೆ, ಅವರು, ಸಂಬಳದಲ್ಲಿ 5 ಕೋಟಿಯಷ್ಟು ಭಾರೀ ಕಡಿತವನ್ನು ಸ್ವತಃ ಮಾಡಿತೊಂಡ ಮೇಲೂ 4 ಕೋಟಿ 57 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ.

Tap to resize

Latest Videos

ಭಾರತದ ಅತ್ಯಂತ ಸುಂದರ ಐಎಎಸ್/ಐಪಿಎಸ್ ಅಧಿಕಾರಿಗಳು

ಫಿಸಿಕ್ಸ್ ವಾಲ್ಲಾ ಎಂಬ ಟ್ಯೂಶನ್ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಅಲಖ್ ಪಾಂಡೆ ಪ್ರಸ್ತುತ ಭಾರತದ ಶ್ರೀಮಂತ ಶಿಕ್ಷಕರಾಗಿದ್ದಾರೆ. ಈ ಶೀರ್ಷಿಕೆಯನ್ನು ಬೈಜು ರವೀಂದ್ರನ್ ಹೊಂದಿದ್ದಾರೆ ಎಂದು ಹಲವರು ವಾದಿಸಬಹುದು, ಆದರೆ ಅದು ನಿಜವಲ್ಲ. ಫೋರ್ಬ್ಸ್ ಪ್ರಕಾರ ಬೈಜುಸ್ ಪತನದ ನಂತರ, ಅದರ ನಿವ್ವಳ ಮೌಲ್ಯವು ರೂ 830 ಕೋಟಿಗೆ ಕುಸಿದಿದೆ. ಅಂದರೆ 2000 ಕೋಟಿ ರೂ.ಗೂ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿರುವ ಅಲಖ್ ಪಾಂಡೆ ಭಾರತದ ಅತ್ಯಂತ ಶ್ರೀಮಂತ ಶಿಕ್ಷಕರಾಗಿದ್ದಾರೆ. 

ಸಾಮಾನ್ಯವಾಗಿ ಸುದ್ದಿ, ಗಿಮಿಕ್ಸ್‌ಗಳಿಂದ ದೂರವಿರುವ ಅಲಖ್ ಪಾಂಡೆ ಸ್ಟಾರ್ಟ್‌ಅಪ್‌ನ ಫೈಲಿಂಗ್‌ನಲ್ಲಿ ಅವರ ವಾರ್ಷಿಕ ಸಂಭಾವನೆಯನ್ನು ಬಹಿರಂಗಪಡಿಸಿರುವುದರಿಂದ ಅವರು ಈಗ ಸುದ್ದಿಯಲ್ಲಿದ್ದಾರೆ.

ಅಲಕ್ ಅವರ ಮೊದಲ ಸಂಬಳ 5000 ರೂ. ಆದರೆ, ಅವರು ಶಿಕ್ಷಣವನ್ನು ಮೋಜಿನಂತೆ ಹೇಳಿಕೊಡುವ ಕಲೆಯಿಂದ ಅಪಾರ ವಿದ್ಯಾರ್ಥಿಗಳನ್ನು ಹಾಗೂ ಜನಪ್ರಿಯತೆಯನ್ನು ಗಳಿಸಿದರು. ಬಳಿಕ ತಮ್ಮದೇ ಸಂಸ್ಥೆ ಫಿಸಿಕ್ ವಾಲ್ಲಾ ಹುಟ್ಟು ಹಾಕಿದರು. 

ನಟನಾಗಲು ಬಯಸಿದ್ದರು..
ಅಲಹಾಬಾದ್‌ನಲ್ಲಿ ಜನಿಸಿದ ಅಲಖ್ ಪಾಂಡೆ ಅವರು ನಟನಾಗಲು ಬಯಸಿದ್ದರಿಂದ ನುಕ್ಕಡ್ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಆದಾಗ್ಯೂ, ಮನೆಯ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ, ಅವರು 8ನೇ ತರಗತಿಯಲ್ಲಿದ್ದಾಗಲೇ ಇತರ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಲು ಪ್ರಾರಂಭಿಸಿದರು. ಅಲಖ್ ಪಾಂಡೆ ಅವರ ಪೋಷಕರು ತಮ್ಮ ಮತ್ತು ಅವರ ಸಹೋದರಿ ಅದಿತಿಯ ಶಿಕ್ಷಣಕ್ಕಾಗಿ ತಮ್ಮ ಮನೆಯನ್ನು ಮಾರಿದ್ದರು. ಇಷ್ಟೆಲ್ಲ ಕಷ್ಟದ ಜೀವನದ ನಡುವೆಯೂ ಅಲಖ್ 12ನೇ ತರಗತಿಯಲ್ಲಿ ಶೇ.93.5ರಷ್ಟು ಅಂಕ ಗಳಿಸಿದ್ದರು. 

ವ್ಹೀಲ್‌ಚೇರ್ ಬಳಸುವುದು ದುರ್ಬಲತೆಯ ಸಂಕೇತವಲ್ಲ; ಹೃತಿಕ್ ರೋಶನ್‌

ಕಾಲೇಜ್ ಡ್ರಾಪೌಟ್
ಐಐಟಿ ಆಕಾಂಕ್ಷಿಯಾಗಿದ್ದ ಅಲಖ್ ಪಾಂಡೆ ಕಾನ್ಪುರದ ಹಾರ್ಕೋರ್ಟ್ ಬಟ್ಲರ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡಿದರು. ಆದಾಗ್ಯೂ, ಅವರು ಮೂರನೇ ವರ್ಷದ ನಂತರ ಕಾಲೇಜು ಬಿಟ್ಟರು. ಅಲಖ್ ಪಾಂಡೆ 2017ರಲ್ಲಿ ಯುಪಿಯಲ್ಲಿನ ಸಣ್ಣ ಕೊಠಡಿಯಿಂದ ಯೂಟ್ಯೂಬ್ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಅವರ ವೀಡಿಯೊಗಳು ಬಹಳ ಯಶಸ್ವಿಯಾದವು. ಎಷ್ಟರಮಟ್ಟಿಗೆ ಎಂದರೆ ಅವರು ಎಡ್-ಟೆಕ್ ಕಂಪನಿಯನ್ನು ಪ್ರಾರಂಭಿಸಿದರು. ಅದು ಈಗ 500ಕ್ಕೂ ಹೆಚ್ಚು ಶಿಕ್ಷಕರು ಮತ್ತು 100 ತಾಂತ್ರಿಕ ಜನರನ್ನು ನೇಮಿಸಿಕೊಂಡಿದೆ. ಅವರು ಯೂಟ್ಯೂಬ್‌ನಲ್ಲಿ 1 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.

Inc42 ರ ವರದಿಯಲ್ಲಿ ಉಲ್ಲೇಖಿಸಿರುವಂತೆ, ಅಲಖ್ ಪಾಂಡೆ ಅವರು ತಮ್ಮ FY2022 ರ ವೇತನದಿಂದ 5,00,00,000 ರೂ.ಗಳನ್ನು ಕಡಿತಗೊಳಿಸಿದರು. ಅಂದರೆ, ಮುಂಚೆ ಅವರ ವೇತನ 9.6 ಕೋಟಿಯಷ್ಟಿತ್ತು. ಇದೀಗ ಅವರ ಸಂಬಳ 4.57 ಕೋಟಿ ರೂಗಳಾಗಿವೆ.
 

click me!