ಅತಿಥಿ ಉಪನ್ಯಾಸಕರಿಗೆ ಬಂಪರ್ ಗಿಫ್ಟ್ ಕೊಟ್ಟ ಸರ್ಕಾರ: ನೇಮಕಾತಿಯಲ್ಲಿ ಶೇ.5 ಕೃಪಾಂಕ ನೀಡಲು ತೀರ್ಮಾನ

By Sathish Kumar KH  |  First Published Feb 13, 2024, 2:57 PM IST

ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಲು ನಿಯಮದಲ್ಲಿ ಅವಕಾಶವಿಲ್ಲ. ಆದರೆ, ಮುಂಬರುವ ನೇಮಕಾತಿಗಳಲ್ಲಿ ಶೇ.5 ಕೃಪಾಂಕ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ತಿಳಿಸಿದರು.


ವಿಧಾನ ಪರಿಷತ್ (ಫೆ.13): ರಾಜ್ಯದಲ್ಲಿ 16 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಕಾಯಂ ಮಾಡಿಕೊಳ್ಳುವುದಕ್ಕೆ ಕಾನೂನಿನಡಿ ನಿಯಮಗಳೇ ಇಲ್ಲ. ಆದರೆ, ಮುಂದಿನ ಉಪನ್ಯಾಸಕರ ನೇಮಕಾತಿಯಲ್ಲಿ ಶೇ.5 ಕೃಪಾಂಕವನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ವಿಧಾನ ಪರಿಷತ್ ಸದನಕ್ಕೆ ತಿಳಿಸಿದ್ದಾರೆ.

ಬಿಜೆಪಿ ವಿಧಾನ ಪರಿಷತ್ ಸದಸ್ಯ ಅ.‌ದೇವೇಗೌಡ ಮಾತನಾಡಿ, ರಾಜ್ಯದಲ್ಲಿನ 16 ಸಾವಿರ ಅತಿಥಿ ಉಪನ್ಯಾಸಕರ ಖಾಯಂಗೊಳಿಸುವ ವಿಚಾರ ಪ್ರಸ್ತಾಪ ಮಾಡಿದರು. ಪ್ರಶ್ನೆಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು, ಅತಿಥಿ ಉಪನ್ಯಾಸಕರನ್ನ ಖಾಯಂಗೊಳಿಸಲು ನಿಯಮದಲ್ಲಿ ಅವಕಾಶ ಇಲ್ಲ. ಅತಿಥಿ ಉಪನ್ಯಾಸಕರನ್ನ ಖಾಯಂಗೊಳಿಸುವ ಬದಲು ತಾತ್ಕಾಲಿಕವಾಗಿ ನೇಮಕ ಮಾತ್ರ ಮಾಡಿಕೊಳ್ಳಲು ಅವಕಾಶ ಇದೆ. ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಮಾಡುವ ತೀರ್ಮಾನ ಸರ್ಕಾರ ಕೈಗೊಂಡಿದೆ. ಮುಂದೆ ಆಗುವ ನೇಮಕಾತಿ ಪ್ರಕರಣಗಳಲ್ಲಿ ಶೇ.5% ಕೃಪಾಂಕ ನೀಡುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

Tap to resize

Latest Videos

undefined

ಅತಿಥಿ ಉಪನ್ಯಾಸಕರಿಗೆ 8000 ರೂ. ಗೌರವ ಧನ ಹೆಚ್ಚಳ ಮಾಡ್ತೇವೆಂದ ಸಿಎಂ ಸಿದ್ದರಾಮಯ್ಯ!

ಇನ್ನು ರಾಜ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 26 ಸಾವಿರ ರೂ.ಗಳಿಂದ 32 ಸಾವಿರ ರೂ.ವರೆಗೆ ಗೌರವ ಧನವನ್ನು ನೀಡಲಾಗುತ್ತಿದೆ. ಸದ್ಯ ಇರುವ ಪರಿಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರನ್ನ ಖಾಯಂ ಮಾಡುವ ಅವಕಾಶ ನಿಯಮಗಳಲ್ಲಿ ಇಲ್ಲ. ಇಷ್ಟು ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಸರ್ಕಾರ ಕೈ ಬಿಡುವುದಿಲ್ಲ ಎಂಬ ಭರವಸೆಯ ಮೂಲ ಕೃಪಾಂಕವನ್ನು ನೀಡುವುದಾಗಿ ತಿಳಿಸಿದರು.

ಅತಿಥಿ ಉಪನ್ಯಾಸಕರ ಸೇವೆ ಕಾಯಂ ಅಸಾಧ್ಯ: ಸಚಿವ ಸುಧಾಕರ್‌

ಈ ಮೂಲಕ ಕಳೆದ ಕೆಲವು ತಿಂಗಳ ಹಿಂದೆ ತಮ್ಮ ಸೇವೆಯನ್ನು ಖಾಯಂ ಮಾಡುವಂತೆ ಆಗ್ರಹಿಸಿ ಪಾದಯಾತ್ರೆ ಬಂದಿದ್ದ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳದ ಭರವಸೆಯನ್ನು ನೀಡಲಾಗಿತ್ತು. ಈಗ ಪುನಃ ಸರ್ಕಾರವು ಶೇ.5 ಕೃಪಾಂಕ ನೀಡುವ ಭರವಸೆಯನ್ನು ನೀಡಿದ್ದು, ಎಲ್ಲ ಅತಿಥಿ ಉಪನ್ಯಾಸಕರು ನೇಮಕಾತಿಗೆ ಎದುರು ನೋಡುತ್ತಿದ್ದಾರೆ. ಆದರೆ, ಸರ್ಕಾರ ಪ್ರತಿಬಾರಿ ಖಾಲಿ ಹುದ್ದೆಗಳಿಂತ ಕಡಿಮೆ ನೇಮಕಾತಿ ಮಾಡಿಕೊಳ್ಳುವುದರಿಂದ ಉದ್ಯೋಗ ಆಕಾಂಕ್ಷಿಗಳಿಗೆ ತೀವ್ರ ಸ್ಪರ್ಧೆ ಏರ್ಪಡುತ್ತದೆ. ಬಹುತೇಕರಿಗೆ ಕೆಲಸ ಸಿಗದೇ ನಿರಾಸೆಗೊಳಗಾಗಬೇಕಾಗುತ್ತದೆ.

click me!