IGNOU Online Journalism Courses: ಆನ್‌ಲೈನ್ ಪತ್ರಿಕೋದ್ಯಮ ಕೋರ್ಸ್ ಆರಂಭಿಸಿದ ಇಗ್ನೋ

By Suvarna NewsFirst Published Jan 15, 2022, 4:21 PM IST
Highlights

*ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಆನ್‌ಲೈನ್ ಪತ್ರಿಕೋಧ್ಯಮ ಕೋರ್ಸ್ ಆರಂಭ
*ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಆನ್ಲೈನ್ ಕೋರ್ಸ್ ಲಭ್ಯವಿದೆ, ವಿದ್ಯಾರ್ಥಿಗಳು ಅಪ್ಲೈ ಮಾಡಬಹುದು
* ಇಂಗ್ಲಿಷ್ ಮಾತ್ರವಲ್ಲದೇ ಹಿಂದಿ ಸೇರಿ ದೇಶದ ಪ್ರಾದೇಶಿಕ ಭಾಷೆಗಳಲ್ಲೂ ಈ ಆನ್‌ಲೈನ್ ಕೋರ್ಸ್ ಶೀಘ್ರವೇ ಲಭ್ಯವಾಗಲಿದೆ 

ನವದೆಹಲಿ(ಜ.15): ಪತ್ರಿಕೋದ್ಯಮ (Journalism) ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಅತ್ಯಾಕರ್ಷಕವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಕೋದ್ಯಮಗಳ ಕೋರ್ಸುಗಳಿಗೆ  ಬೇಡಿಕೆಯು ಉಂಟಾಗುತ್ತಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳೇ ಅಸಾಧ್ಯವಾಗುತ್ತಿವೆ. ಹಾಗಾಗಿ ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಿ (The Indira Gandhi National Open University-IGNOU) ಆನ್‌ಲೈನ್ ನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (MA in Journalism and Mass Communication) ಕೋರ್ಸ್ ಆಫರ್ ಮಾಡಲು ಹೊರಟಿದೆ.

ಎರಡು ವರ್ಷಗಳ ಅವಧಿಯ ಕೋರ್ಸ್ ಇದಾಗಿದೆ. ಆನ್‌ಲೈನ್ ಮೂಲಕವೇ ಪತ್ರಿಕೋದ್ಯಮ ಕಲಿಯಬೇಕೆಂದು ಕೊಂಡಿರುವವರಿಗೆ ಇದೊಂದು ಅತ್ಯುತ್ತಮ ಅವಕಾಶವೇ ಎಂದು ಹೇಳಬೇಕು. ಈ ಕೋರ್ಸ್ 2022ರ ಜನವರಿಯಿಂದ ಆರಂಭವಾಗುತ್ತಿದೆ.  ಇಗ್ನೋದ ಈ ಆನ್‌ಲೈನ್ ಪತ್ರಿಕೋದ್ಯಮ ಕೋರ್ಸ್‌ಗೆ ಪ್ರೊಫೆಸರ್ ನಾಗೇಶ್ವರ್ ರಾವ್ (Professor Nageswhar Rao) ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಈ ವೇಳೆ, ಪತ್ರಿಕೋದ್ಯಮದ ಖ್ಯಾತನಾಮರೂ ಕೂಡ ಭಾಗಿಯಾಗಿದ್ದರು. 

ಕೋರ್ಸ್ ಉದ್ಘಾಟನೆ ವೇಳೆ ಮಾತನಾಡಿದ ವಿಸಿ, ಪ್ರೊಫೆಸರ್ ನಾಗೇಶ್ವರ್ ರಾವ್ ಅವರು, IGNOUನಿಂದ ಪತ್ರಿಕೋದ್ಯಮ ಶಿಕ್ಷಣದ ಗುಣಮಟ್ಟವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿದೆ. MA JMC ಆನ್‌ಲೈನ್ ಕಾರ್ಯಕ್ರಮವು ಭವಿಷ್ಯದ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಎಲ್ಲಾ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. ಇಂಗ್ಲಿಷ್ ಹೊರತುಪಡಿಸಿ, ವಿಶ್ವವಿದ್ಯಾಲಯವು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ MAJMC ಅನ್ನು ಶೀಘ್ರವೇ ಪ್ರಾರಂಭಿಸುತ್ತದೆ ಎಂದು ತಿಳಿಸಿದರು. 

Karnataka Guest Lecturer Salary Hike: ಸಂಕ್ರಾಂತಿ ಕೊಡುಗೆ, ಅತಿಥಿ ಉಪನ್ಯಾಸಕರ ವೇತನ ದುಪ್ಪಟ್ಟು ಹೆಚ್ಚಿಸಿದ ಸರಕಾರ

ಇಗ್ನೋದ ಸ್ಕೂಲ್ ಆಫ್ ಜರ್ನಲಿಸಮ್ ಮತ್ತು ನ್ಯೂ ಮೀಡಿಯಾ ಸ್ಟಡೀಸ್ ‌ಮೂಲಕ ಈ ಎರಡು ವರ್ಷಗಳ ಎಂಎ ಕೋರ್ಸ್ ಅನ್ನು ಆನ್‌ಲೈನ್ ಮೂಲಕ ಕಲಿಸಲಾಗುತ್ತದೆ. ಪತ್ರಿಕೋದ್ಯಮತ್ತು ಸಮೂಹ ಮಾಧ್ಯಮಗಳಿಗೆ ಸಂಬಂಧಿಸಿದಂದೆ ಈ ಕೋರ್ಸ್ ನಿಮಗೆ ಅಗತ್ಯವಾದ ಜ್ಞಾನ, ಕೌಶಲ್ಯ, ವರ್ತನೆಗಳು ಮತ್ತು ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸಲು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನಕ್ಕೆ ಸಂಬಂಧಿಸಿದ ವಿವಿಧ ಅಂಶಗಳಿಗೆ ಸಮಗ್ರವಾದ ಮಾನ್ಯತೆಯನ್ನು ಒದಗಿಸುತ್ತದೆ. ಬದಲಾವಣೆ ಮತ್ತು ಅಭಿವೃದ್ಧಿಯ ಸಾಧನವಾಗಿ ಮಾಧ್ಯಮದ ಸಮಗ್ರ ಮೆಚ್ಚುಗೆಯೊಂದಿಗೆ ಮಾಧ್ಯಮ ಮತ್ತು ಸಂವಹನದಲ್ಲಿ ನುರಿತ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಪ್ರೋಗ್ರಾಂ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RRB NTPC RESULT ANNOUNCED: ರೈಲ್ವೆ ನೇಮಕಾತಿಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಪ್ರಕಟ

ಸೂಕ್ತ ಕಾಲದಲ್ಲಿ ಆನ್‌ಲೈನ್ MA MCJ ಪ್ರೋಗ್ರಾಮ್ ಲಾಂಚ್ ಮಾಡುವ ಮೂಲಕ ಇಗ್ನೋ ಸೂಕ್ತ ನಿರ್ಧಾರ ಕೈಗೊಂಡಿದೆ. ಮತ್ತು ಈ ಕ್ರಮವನ್ನು ಇತರ ಶೈಕ್ಷಣಿಕ ಸಂಸ್ಥೆಗಳು ಕೂಡ ಅನುಸರಿಸಬಹುದು. ಈ ಪತ್ರಿಕೋದ್ಯಮದ ಪ್ರೋಗ್ರಾಮ್ ಅನ್ನು ಪ್ರಾದೇಶಿಕ ಭಾಷೆಗಳಲ್ಲಿ ನೀಡಬೇಕಾದ ಅಗತ್ಯ ಈಗ ಹೆಚ್ಚಾಗಿದೆ ಎಂದು ಐಐಎಂಸಿ (IIMC) ಪ್ರಧಾನ ನಿರ್ದೇಶಕ ಪ್ರೊ. ಸಂಜಯ್ ದ್ವಿವೇದಿ (Prof. Sanjay Dwivedi)  ಅವರು ಇದೇ ವೇಳೆ ಹೇಳಿದರು. IGNOU ಆರಂಭಿಸಿರುವ ಈ MAJMC ಆನ್‌ಲೈನ್ ಕೋರ್ಸಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಲು majmc.ignouonline.ac.in ಜಾಲತಾಣಕ್ಕೆ ಭೇಟಿ ನೀಡಬಹುದು. ಹಾಗೆಯೇ ಕೋರ್ಸ್‌ಗೆ ವಿದ್ಯಾರ್ಥಿಗಳು  ignouiop.samarth.edu.in ಮೂಲಕ ಅಪ್ಲೈ ಮಾಡಬಹುದು.

BALLARI SCHOOLS CLOSED: ಬಳ್ಳಾರಿಯಲ್ಲಿ ಶಾಲೆಗಳು ಕಾಲೇಜುಗಳು ಬಂದ್, ರಾತ್ರಿ 8 ರಿಂದಲೇ ನೈಟ್ ಕರ್ಫ್ಯೂ

click me!