ICAI ISA AT Exam 2022: ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ

By Suvarna News  |  First Published Jan 9, 2022, 7:21 PM IST

ICAI ISA AT Exam 2022 ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಮುಂದಕ್ಕೆ ಹಾಕಲು ಸಂಸ್ಥೆ ನಿರ್ಧರಿಸಿದೆ. 


ಬೆಂಗಳೂರು(ಜ.9): ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು  ISA AT Exam 2022 ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಯನ್ನು ಬಿಡುಗಡೆ ಮಾಡಿದೆ. ಜನವರಿ 8, 2022 ರಂದು ನಡೆಸಲಾದ ISA AT ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಮುಂದಕ್ಕೆ ಹಾಕಲು ಸಂಸ್ಥೆ ನಿರ್ಧರಿಸಿದೆ. ಅಧಿಕೃತ ಸೂಚನೆಯು ICAI (Institute of Chartered Accountants of India) ನ ಅಧಿಕೃತ ವೆಬ್‌ಸೈಟ್ https://www.icai.org/ ನಲ್ಲಿ ಲಭ್ಯವಿದೆ.

ಭಾರತದಲ್ಲಿ  ದಿನದಿಂದ ದಿನಕ್ಕೆ ಹೆಚ್ಚುತ್ತಿರುವ COVID 19 ಪರಿಸ್ಥಿತಿ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳು ಮತ್ತು ಅಭ್ಯರ್ಥಿಗಳ ಒಟ್ಟಾರೆ ಆಸಕ್ತಿ ಮತ್ತು ಯೋಗಕ್ಷೇಮವನ್ನು ಅರಿತು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜನವರಿ 8ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ISA (Industry Standard Architecture ) AT ಪರೀಕ್ಷೆ ನಡೆಸಲಾಯಿತು. 

Tap to resize

Latest Videos

undefined

ಭಾರತದಲ್ಲಿ  COVID 19 ಪರಿಸ್ಥಿತಿಯನ್ನು ಪರಿಗಣಿಸಿ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳು ಮತ್ತು ಜನವರಿ 8ರಂದು ನಡೆದ ISA AT ಪರೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳ ಒಟ್ಟಾರೆ ಆಸಕ್ತಿ ಮತ್ತು ಯೋಗಕ್ಷೇಮವನ್ನು ರಕ್ಷಿಸಲು, ಪರಿಕ್ಷೆ ಬರೆಯಲು ಸಾಧ್ಯವಾಗದ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ತಕ್ಷಣದ ಮುಂದಿನ ISA-AT ಪರೀಕ್ಷೆಗೆ ಮುಂದೂಡಲು ನಿರ್ಧರಿಸಲಾಗಿದೆ.

MINISTRY OF DEFENCE RECRUITMENT 2022: 97 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಕ್ಷಣಾ ಸಚಿವಾಲಯ

ಯಾವುದೇ ಅಭ್ಯರ್ಥಿಯು ಇನ್‌ಸ್ಟಿಟ್ಯೂಟ್‌ನ ಸದಸ್ಯರಾಗಿ ದಾಖಲಾಗದ ಹೊರತು ಮತ್ತು ಮಾಹಿತಿ ತಂತ್ರಜ್ಞಾನ / ಡಿಜಿಟಲ್ ಅಕೌಂಟಿಂಗ್ ಮತ್ತು ಅಶ್ಯೂರೆನ್ಸ್ ಬೋರ್ಡ್‌ನ ಸಮಿತಿಯು ನಡೆಸಿದ ISA ಅರ್ಹತಾ ಪರೀಕ್ಷೆಯಲ್ಲಿ "ಪಾಸ್" ಎಂದು ಘೋಷಿಸದ ಹೊರತು ಯಾವುದೇ ಅಭ್ಯರ್ಥಿಯನ್ನು ISA ಕೋರ್ಸ್ ಮೌಲ್ಯಮಾಪನ ಪರೀಕ್ಷೆಗೆ ಸೇರಿಸಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಪರೀಕ್ಷೆಯಲ್ಲಿ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಉತ್ತೀರ್ಣ ಎಂದು ಘೋಷಿಸಲಾಗುತ್ತದೆ. "ಐಎಸ್ಎ ಮೌಲ್ಯಮಾಪನ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಫಲಿತಾಂಶದ ಘೋಷಣೆಯ ದಿನಾಂಕದಿಂದ ಎರಡು ವಾರಗಳ ನಂತರ ಅಂಕಗಳ ಮಾಹಿತಿಯನ್ನು ನೀಡಲಾಗುತ್ತದೆ, ಆದರೆ ಅರ್ಹ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಮೂರು ತಿಂಗಳ ಅವಧಿಯಲ್ಲಿ ಪಾಸ್ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ" ಎಂದು ಸಂಸ್ಥೆ ತಿಳಿಸಿದೆ. 

CAT Topper Chirag Gupta: ಕೋಚಿಂಗ್ ಇಲ್ಲದೇ, ಯುಟ್ಯೂಬ್ ನೋಡಿಯೇ CAT ರ‍್ಯಾಂಕ್

UCEED ಅಡ್ಮಿಟ್ ಕಾರ್ಡ್ 2022 ಬಿಡುಗಡೆ ದಿನಾಂಕ ಮುಂದೂಡಿಕೆ: ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology -IIT), ಬಾಂಬೆಯು  UCEED ಅಡ್ಮಿಟ್ ಕಾರ್ಡ್ 2022 ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಜನವರಿ 8 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದ ಪ್ರವೇಶ ಕಾರ್ಡ್‌ಗಾಗಿ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಈಗ ಜನವರಿ 12, 2022 ಕ್ಕೆ ಮುಂದೂಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು UCEED IITB ಯ ಅಧಿಕೃತ ವೆಬ್‌ಸೈಟ್ ಮೂಲಕ http://www.uceed.iitb.ac.in/2022/ ನಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಸಾಮಾನ್ಯ ಪ್ರವೇಶ ಪರೀಕ್ಷೆಯು ಜನವರಿ 23, 2022 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. UCEED (Undergraduate Common Entrance Examination for Design) ಪರೀಕ್ಷೆಯು ಎರಡು ಭಾಗಗಳನ್ನು ಹೊಂದಿದೆ. ಭಾಗ-A ಕಂಪ್ಯೂಟರ್ ಆಧಾರಿತವಾಗಿದೆ ಮತ್ತು ಭಾಗ-B ಒದಗಿಸಿದ ಹಾಳೆಯಲ್ಲಿ ಪ್ರಯತ್ನಿಸಬೇಕಾದ ಸ್ಕೆಚಿಂಗ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿದೆ. ನಿಗದಿತ ಸಮಯದಲ್ಲಿ ಅಭ್ಯರ್ಥಿಗಳು ಎರಡೂ ಭಾಗಗಳನ್ನು ಪ್ರಯತ್ನಿಸುವುದು ಕಡ್ಡಾಯವಾಗಿದೆ. UCEED 2022 ಅನ್ನು ಭಾರತದ 24 ನಗರಗಳಲ್ಲಿ ನಡೆಸಲಾಗುತ್ತದೆ. 

click me!