ಏರ್ ಹೋಸ್ಟೆಸ್ ಆಗಬಯಸುವ ಮನಸ್ಸು ಗಳಿಗೆ ಇಲ್ಲಿದೆ ಹೆಚ್ಚುವರಿ ಮಾಹಿತಿ. ಏರ್ ಹೋಸ್ಟೆಸ್ ಆಗುವುದು ಸಾಮಾನ್ಯ ಸಂಗತಿ ಅಲ್ಲ. ಇದೊಂದು ಜವಾಬ್ದಾರಿಯುತ ಹುದ್ದೆಯಾಗಿದೆ. ಚಾಕಚಕ್ಯೆತೆಯಿಂದ ಕೆಲಸ ನಿಭಾಯಿಸಬೇಕಾಗುತ್ತದೆ.
ಆಕರ್ಷಕ ಸಂಬಳ ಮತ್ತು ಸೌಲಭ್ಯಗಳ ಕಾರಣದಿಂದಾಗಿ ಅನೇಕ ಯುವಜನರು ಅದರಲ್ಲೂ ಯುವತಿಯರು ಏರ್ ಹೋಸ್ಟೆಸ್ ಆಗಲು ಬಯಸುತ್ತಾರೆ. ಇದೊಂದು ಆತಿಥ್ಯ ನೀಡುವ ಉದ್ಯೋಗವಾಗಿದ್ದು ಹೆಚ್ಚಾಗಿ ಯುವತಿಯರನ್ನೇ ಈ ಕೆಲಸಕ್ಕೆ ಪರಿಗಣಿಸಲಾಗುತ್ತದೆ.
ಆತಿಥ್ಯ ಉದ್ಯಮದಲ್ಲಿ ನೀವು ಆಯ್ಕೆ ಮಾಡಬಹುದಾದ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದು ಸ್ಟೀವರ್ಡ್/ಏರ್ ಹೋಸ್ಟೆಸ್ ಆಗಿರುವುದು. ಇದು ಅನೇಕ ಯುವತಿಯರ ಕನಸು. ನೀವು ಪ್ರಪಂಚದಾದ್ಯಂತದ ವಿವಿಧ ಜನರನ್ನು ಭೇಟಿಯಾಗಬಹುದು, ಪ್ರಪಂಚದಾದ್ಯಂತ ಪ್ರಯಾಣಿಸಬಹುದು ಮತ್ತು ಕೆಲವು ಸೆಲೆಬ್ರಿಟಿಗಳನ್ನು ಭೇಟಿಯಾಗಬಹುದು.
undefined
ಏರ್ ಹೋಸ್ಟೆಸ್ ಅಥವಾ ಗಗನಸಖಿ ಎಂದರೆ ವಿಮಾನಯಾನ ಉದ್ಯಮದಲ್ಲಿ ಫ್ಲೈಟ್ ಅಟೆಂಡೆಂಟ್ ಅಥವಾ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುವ ವ್ಯಕ್ತಿ. ಗಗನಸಖಿಯಾಗಲು ಅರ್ಹತೆಗಳು ದೇಶದಿಂದ ದೇಶಕ್ಕೆ ಬದಲಾಗಬಹುದಾದರೂ ಇಲ್ಲಿ ಕೆಲವು ಸಾಮಾನ್ಯ ಅರ್ಹತೆಗಳ ಬಗ್ಗೆ ಚರ್ಚಿಸಲಾಗಿದೆ.
ಏರ್ ಹೋಸ್ಟೆಸ್ ಕೆಲಸವು ನೋಡಲು ಆರಾಮದಾಯಕವಾಗಿ ಕಂಡರೂ ಇದು ತುಂಬಾ ಜವಾಬ್ದಾರಿಯುತ ವಾಗಿರುತ್ತದೆ. ವಿಮಾನ ಪ್ರಯಾಣಿಕರ ಸಂಪೂರ್ಣ ಜವಾಬ್ದಾರಿ ಏರ್ ಹೋಸ್ಟೆಸ್‍ದ್ದಾಗಿರುತ್ತದೆ.
ಸಾಮಾನ್ಯ ಅರ್ಹತೆಗಳು:
• ಆಕರ್ಷಕ ವ್ಯಕ್ತಿತ್ವ ಹೊಂದಿದ್ದು ನೋಡಲು ಅಂದವಾಗಿರಬೇಕು.
•ಪಿಯುಸಿ, ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
• ವಯಸ್ಸು 18 ಅಥವಾ ಮೇಲ್ಪಟ್ಟಿರಬೇಕು.
•ವಯಸ್ಸು ಹಾಗೂ ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು.
• ಪಾಸ್ ಪೋರ್ಟ್ ಹೊಂದಿರಬೇಕು.
• ಯಾವುದೇ ಅಪರಾಧದ ಹಿನ್ನೆಲೆ ಹೊಂದಿರಬಾರದು.
• ಯಾವುದೇ ಪರಿಸ್ಥಿತಿಯಲ್ಲಿ ಶಾಂತ ಮತ್ತು ತಾಳ್ಮೆ ತುಂಬಾ ಅಗತ್ಯ.
• ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರಬೇಕು.
• ವಿವಾಹಿತ ಅಥವಾ ಅವಿವಾಹಿತ (ನೀವು ಅರ್ಜಿ ಸಲ್ಲಿಸುವ ವಿಮಾನಯಾನ ಸಂಸ್ಥೆಯನ್ನು ಅವಲಂಬಿಸಿರುತ್ತದೆ).
• ಒಬ್ಬ ಗಗನಸಖಿಯು ಆರಂಭದಲ್ಲಿ ತಿಂಗಳಿಗೆ ಸುಮಾರು ರೂ. 45000 ಕ್ಕಿಂತ ಹೆಚ್ಚು ವೇತನವನ್ನು ಪಡೆಯಬಹುದಾಗಿದ್ದು. ವಿಮಾನಯಾನ ಸಂಸ್ಥೆ ಹಾಗೂ ರಾಷ್ಟ್ರಗಳಿಗೆ ತಕ್ಕಂತೆ ಇದು ವ್ಯತ್ಯಾಸವಾಗಬಹುದಾಗಿದೆ.
• ಪ್ರಯಾಣಿಕರೊಂದಿಗೆ ಸುಲಭವಾಗಿ ಸಂವಹನ ನಡೆಸುವ ಸಾಮರ್ಥ್ಯವಿದ್ದು, ಸ್ಥಳೀಯ ಭಾಷೆಗಳೊಂದಿಗೆ ಹಿಂದಿ, ಇಂಗ್ಲಿಷ್ ಭಾಷೆಯನ್ನು ಬಲ್ಲವರಾಗಿರಬೇಕು.
• ಈ ವ್ಯಕ್ತಿತ್ವದ ಗುಣಲಕ್ಷಣಗಳ ಹೊರತಾಗಿ, ದಿನದ 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು. ನಿಯೋಜಿಸಲಾದ ಪ್ರತಿಯೊಂದು ಕೆಲಸವನ್ನು ಮಾಡಲು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು.
ನೇಮಕಾತಿ ಪ್ರಕ್ರಿಯೆ:
•ಏರ್ ಹೋಸ್ಟೆಸ್ ಆಗಲು, ನೀವು ಹಲವಾರು ಸುತ್ತಿನ ಸಂದರ್ಶನಗಳು ಮತ್ತು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.
•ನೇಮಕಾತಿ ಪ್ರಕ್ರಿಯೆಯ ಮೊದಲ ಹಂತವು ಲಿಖಿತ ಪರೀಕ್ಷೆಯಾಗಿದ್ದು ಅದು ತರ್ಕ ಮತ್ತು ತಾರ್ಕಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಹೊಂದಿರುತ್ತದೆ.
•ನೀವು ಮೊದಲ ಸುತ್ತಿಗೆ ಅರ್ಹತೆ ಪಡೆದ ನಂತರ, ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಜನಸಂದಣಿಯೊಂದಿಗೆ ಮಾತನಾಡುವ ನಿಮ್ಮ ಸಾಮರ್ಥ್ಯ, ಗಮನ, ಆತ್ಮವಿಶ್ವಾಸ, ತಂಡದ ಕೆಲಸ ಮತ್ತು ನಾಯಕತ್ವ ಕೌಶಲ್ಯ ಇತ್ಯಾದಿಗಳ ಮೇಲೆ ನಿಮ್ಮನ್ನು ಮೌಲ್ಯಮಾಪನ ಮಾಡಲಾಗುತ್ತದೆ.
•ನೀವು ಗುಂಪು ಚರ್ಚೆಯ ಸುತ್ತಿಗೆ ಅರ್ಹತೆ ಪಡೆದರೆ, ನಿಮ್ಮನ್ನು ವೈಯಕ್ತಿಕ ಸಂದರ್ಶನಕ್ಕಾಗಿ ಪರಿಗಣಿಸಲಾಗುತ್ತದೆ. ಅದರ ನಂತರ ನೀವು ಏರ್ ಹೋಸ್ಟೆಸ್ ಆಗಲು ತರಬೇತಿಗೆ ನೇಮಿಸಲಾಗುತ್ತದೆ.
ಏರ್ ಹೋಸ್ಟೆಸ್‍ಗಳ ಪ್ರಮುಖ ಜವಾಬ್ದಾರಿಗಳು:
• ವಿಮಾನ ಹೊರಡುವ ಮುನ್ನ ಶುಚಿತ್ವ ಮತ್ತು ಸುರಕ್ಷತಾ ಸಾಧನಗಳ ಬಗ್ಗೆ ಪರಿಶೀಲಿಸುವುದು, ಊಟದ ಕಿಟ್‍ಗಳು ಮತ್ತು ಸೀಟ್ ಪಾಕೆಟ್‍ಗಳಿಗೆ ಮ್ಯಾಗಜಿನ್‍ಗಳು ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳುವುದು.
• ತಮ್ಮ ಗೊತ್ತುಪಡಿಸಿದ ಆಸನಗಳಲ್ಲಿ ಕುಳಿತುಕೊಳ್ಳಲು ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವುದು.
• ಪ್ರಯಾಣಿಕರಿಗೆ ಊಟ ಮತ್ತು ಉಪಹಾರಗಳನ್ನು ನೀಡುವುದು.
• ವಿಮಾನ ಹೊರಡುವ ಮೋದಲು ಹಾಗೂ ಇಳಿಯುವ ಮೊದಲು ಪ್ರಯಾಣಿಕರಿಗೆ ಸೂಕ್ತ ಪ್ರಕಟಣೆಗಳನ್ನು ನೀಡುವುದು.
• ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸುವುದು.
• ಎಲ್ಲಾ ಪ್ರಯಾಣಿಕರು ತಮ್ಮ ಸೀಟ್ ಬೆಲ್ಟ್ ಗಳನ್ನು ಹಾಕಿಕೊಂಡಿದ್ದಾರೆಯೇ ಮತ್ತು ಓವರ್ ಹೆಡ್ ಬಿನ್‍ಗಳನ್ನು ಮುಚ್ಚಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
• ತುರ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು.