Heavy Rainfall ಹಾಸನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

By Suvarna News  |  First Published May 18, 2022, 4:12 PM IST

ಹಾಸನ ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್  1 ರಿಂದ 10 ನೇ ತರಗತಿಯವರೆಗೆ ಶಾಲಾ ಮಕ್ಕಳಿಗೆ ರಜರ ಘೋಷಿಸಿದ್ದಾರೆ.


ಹಾಸನ (ಮೇ.18): ಕಳೆದ ಎರಡು ವಾರಗಳಿಂದ ರಾಜ್ಯದ ಹಲವೆಡೆ ತೀವ್ರವಾದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಾಸನ ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್  1 ರಿಂದ 10 ನೇ ತರಗತಿಯವರೆಗೆ ಶಾಲಾ ಮಕ್ಕಳಿಗೆ ರಜರ ಘೋಷಿಸಿದ್ದಾರೆ. 2ನೇ ಪಿಯು ಪರೀಕ್ಷೆ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯಿರುವುದರಿಂದ ಶಾಲೆಗಳಿಗೆ ರಜೆ  ನೀಡಲಾಗಿದೆ ಎಂದಿದ್ದಾರೆ.

ಮೇ 17ರ ರಾತ್ರಿಯಿಂದ ಹಾಸನದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.  ಹೀಗಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.  ಮುಂದಿನ ಐದು ದಿನಗಳ ಕಾಲ ಕರ್ನಾಟಕದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ  ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

Latest Videos

undefined

BALLARI ಗೋವಿನ ಅಂತ್ಯಸಂಸ್ಕಾರಕ್ಕೆ ಸಾವಿರಾರು ಮಂದಿ, ಕಣ್ಣೀರಾದ ಜನತೆ

ರಾಜ್ಯದ ಹಲವೆಡೆ ಅಲರ್ಟ್: ನೈಋತ್ಯ ಮಾನ್ಸೂನ್ ಕಳೆದ ಸೋಮವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಅಪ್ಪಳಿಸಿದ್ದು, ಹವಾಮಾನ ತಜ್ಞರ ಪ್ರಕಾರ ಈ ಬಾರಿ ರಾಜ್ಯಕ್ಕೆ ಮುಂಗಾರು ಪ್ರವೇಶ ಬೇಗನೆ ಆಗಲಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ,  ಕರಾವಳಿ ಕರ್ನಾಟಕ ಭಾಗದಲ್ಲಿ ಆರೆಂಜ್ ಅಲರ್ಟ್ ಮತ್ತು   ರೆಡ್ ಅಲರ್ಟ್ ಅನ್ನು ಘೋಷಿಸಲಾಗಿದೆ. 

ಮಾನ್ಸೂನ್ ಸೋಮವಾರ ನೈಋತ್ಯ ಬಂಗಾಳ ಕೊಲ್ಲಿಯ ಭಾಗಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹೆಚ್ಚಿನ ಭಾಗಗಳು ಮತ್ತು ಅಂಡಮಾನ್ ಸಮುದ್ರಕ್ಕೆ ಪ್ರವೇಶಿಸಿದೆ. ಮುಂದಿನ 2-3 ದಿನಗಳಲ್ಲಿ ಮಾನ್ಸೂನ್ ನೈಋತ್ಯ ಬಂಗಾಳ ಕೊಲ್ಲಿ, ಸಂಪೂರ್ಣ ಅಂಡಮಾನ್ ಸಮುದ್ರ, ಅಂಡಮಾನ್ ದ್ವೀಪಗಳು ಮತ್ತು ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಸಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Chitradurga ಈರುಳ್ಳಿ ಬೆಲೆ ಕುಸಿತಕ್ಕೆ ಕಂಗಾಲಾದ ರೈತರು

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಗುತ್ತಿರುವ ಮಳೆಯು ಮುಂಗಾರು ಪೂರ್ವದ ಮಳೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹವಾಮಾನ ವ್ಯವಸ್ಥೆಗಳ ರಚನೆಯಿಂದಲೂ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಭಾರಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ಹೇಳುತ್ತಾರೆ.

ಈಶಾನ್ಯ ಮಧ್ಯಪ್ರದೇಶದಿಂದ ಉತ್ತರ ಒಳಭಾಗದ ತಮಿಳುನಾಡು ವಿದರ್ಭ ಮತ್ತು ಒಳಾಂಗಣ ಕರ್ನಾಟಕದಾದ್ಯಂತ ಉತ್ತರ-ದಕ್ಷಿಣ ತೊಟ್ಟಿ ಇದೆ. ಉತ್ತರ ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಸಹ ಚಂಡಮಾರುತದ ಪರಿಚಲನೆ ಇದೆ. ಲಕ್ಷ್ವದೀಪ ಪ್ರದೇಶ ಮತ್ತು ಪಕ್ಕದ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆ ಇದೆ. ದಕ್ಷಿಣ ಕನ್ನಡದಲ್ಲಿ 100ಮಿಲಿ ಮೀಟರ್ ನಿಂದ 150 ಮಿಲಿ ಮೀಟರ್ ಗಿಂತ ಹೆಚ್ಚು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Chikkamagaluru ಕಿರುಕುಳಕ್ಕೆ ತಳ್ಳುವ ಗಾಡಿ ಸುಟ್ಟಪ್ರಕರಣ, ವ್ಯಾಪಾರಿ ಪರ ನಿಂತ ಜೆಡಿಎಸ್ 

ಬೆಂಗಳೂರು ತತ್ತರ: ಮಂಗಳವಾರ ಸಾಯಂಕಾಲದಿಂದ ರಾಜಧಾನಿ ಬೆಂಗಳೂರಲ್ಲಿ (Bengaluru) ಸುರಿದ ದಿಢೀರ್ ಭಾರೀ ಮಳೆಗೆ (Rain) ಆದ ಅವಾಂತರಗಳು ಒಂದೆರಡಲ್ಲ.  ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. 

ಉಲ್ಲಾಳ ಉಪನಗರದ ಉಪಕಾರ್ ಲೇಔಟ್‌ನಲ್ಲಿ (Upakar Layout) ಪೈಪ್‌ ಲೈನ್ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ. ಅವಘಡ ಸಂಭವಿಸಿದೆ. ಪೈಪ್‌ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಕೆಲಸ ಮಾಡುತ್ತಾ ಇದ್ದರು. ಅದೃಷ್ಟವಶಾತ್ ಓರ್ವ ಅಲ್ಲಿಂದ ಪಾರಾಗಿ, ಇಬ್ಬರು ಮೃತಪಟ್ಟಿದ್ದಾರೆ.

click me!