ಗಣಪತಿ ಪೂಜೆ ಮಾಡಿದ ವಿದ್ಯಾರ್ಥಿನಿ ಕೈ ಮುರಿದ ಮುಖ್ಯ ಶಿಕ್ಷಕಿಗೆ ದೇವರೇ ಶಿಕ್ಷೆ ಕೊಟ್ಟ!

By Sathish Kumar KHFirst Published Sep 21, 2023, 1:45 PM IST
Highlights

ಕೋಲಾರ ಜಿಲ್ಲೆಯ ಕೆಜಿಎಫ್‌ ತಾಲೂಕಿನ ಅಲ್ಲಿಕಲ್ಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗಣಪತಿ ಪೂಜೆ ಮಾಡಿದ್ದ ವಿದ್ಯಾರ್ಥಿನಿಯ ಕೈ ಮುರಿದ ಶಿಕ್ಷಕಿಗೆ ದೇವರೇ ಶಿಕ್ಷೆ ಕೊಟ್ಟಿದ್ದಾನೆ.

ಕೋಲಾರ (ಸೆ.21): ಕೆಜಿಎಫ್‍ನ (KGF) ತಾಲೂಕಿಮ ಅಲ್ಲಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯಗೆ ಕೋಲಿನಿಂದ ಹೊಡೆದು ಕೈ ಮುರಿದು ಹಾಕಿದ್ದ ಮುಖ್ಯ ಶಿಕ್ಷಕಿಯ ಸ್ಥಿತಿ ಈಗ ಏನಾಗಿದೆ ಗೊತ್ತಾ.! ದೇವರು ಅವರಿಗೆ ಸರಿಯಾದ ಶಿಕ್ಷೆಯನ್ನೇ ಕೊಟ್ಟಿದ್ದಾನೆ ನೋಡಿ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಅಲ್ಲಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವಾರ ಈ ಘಟನೆ ನಡೆದಿತ್ತು. ಶಾಲೆಯಲ್ಲಿ ಭವ್ಯಶ್ರೀ ಎನ್ನುವ 7ನೇ ತರಗತಿ ವಿದ್ಯಾರ್ಥಿನಿ ಗಣಪತಿಯನ್ನು ಪೂಜೆ ಮಾಡಿದಾದ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ಶಿಕ್ಷಕಿ ಹೇಮಲತಾ ಅವರು, ವಿದ್ಯಾರ್ಥಿನಿಗೆ ಕೋಲಿನಿಂದ ಥಳಿಸಿದ್ದಾರೆ. ಇನ್ನು ಕೋಲಿನಿಂದ ಹೊಡೆಯುವಾಗ ತಪ್ಪಿಸಿಕೊಳ್ಳಲು ಮುಂದಾದಾಗ ವಿದ್ಯಾರ್ಥಿನಿಯ ಎಳೆಯ ಮೂಳೆಗೆ ಬಲವಾದ ಹೊಡೆತ ಬಿದ್ದು, ಮೂಳೆಯೇ ತುಂಡಾಗಿತ್ತು. ಬೆಳಗ್ಗೆ ಶಾಲೆಗೆ ಹೋದ ಮಗಳು ತೀವ್ರ ಗಾಯಗೊಂಡು ಮನೆಗೆ ಅಳುತ್ತಾ ಬಂದಾಗ ಭವ್ಯಶ್ರೀ ತನ್ನ ಎಡಗೈ ಮುರಿದುರುವುದಾಗಿ ತಿಳಿಸಿದ್ದಾಳೆ.

ಕಾವೇರಿ ಪ್ರಾಧಿಕಾರದ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌! ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಲು ಆದೇಶ

ಇನ್ನು ಮಗಳು ಕೈ ಮುರಿದುಕೊಂಡು ಬಂದ ಸುದ್ದಿ ತಿಳಿದಾಕ್ಷಣ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ಮುನ್ನ ಘಟನೆಯತ ಬಗ್ಗೆ ವಿವರಣೆಕೇಳಿದಾಗ ಶಾಲಾ ಮುಖ್ಯ ಶಿಕ್ಷಕಿ ಹಲ್ಲೆ ಮಾಡಿ ಕೈ ಮುರಿದಿದ್ದಾಗಿ ಹೇಳಿದ್ದಾರೆ. ಇದಾದ ನಂತರ ಪೋಷಕರು ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ಸಲ್ಲಿಸಿದ್ದರು. ಜೊತೆಗೆ, ಕೆಜಿಎಫ್ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಪೋಷಕರು ದೂರು ನೀಡಿದ್ದರು. ಮುಖ್ಯ ಶಿಕ್ಷಕಿಯ ಹಲ್ಲೆಯಿಂದ ಕೂ ಮುರಿದುಕೊಂಡು ಬಳಲುತ್ತಿದ್ದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ಶಿಕ್ಷಣಾಧಿಕಾರಿಗಳು ಯೋಗ ಕ್ಷೇಮ ವಿಚಾರಿಸಿದ್ದರು.

ವಿದ್ಯಾರ್ಥಿನಿಗೆ ಚಿಕಿತ್ಸಾ ವೆಚ್ಚ ಭರಿಸುವಂತೆ ಆದೇಶ: ಈ ಕುರಿತಂತೆ ಕೋಲಾರ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಕೃಷ್ಣಮೂರ್ತಿ ಅವರು ಮುಖ್ಯ ಶಿಕ್ಷಕಿ ಹೇಮಲತಾ ಅವರೇ ಬಾಲಕಿಯ ಚಿಕಿತ್ಸೆಗೆ ತಗುಲುವ ಖರ್ಚು ವೆಚ್ಚವನ್ನು ಭರಿಸಬೇಕೆಂದು ಸೂಚನೆ ನೀಡಿದ್ದರು. ಆದರೆ, ವಿದ್ಯಾರ್ಥಿಗಳಿಗೆ ಹಲ್ಲೆ ಮಾಡುವುದಕ್ಕೆ ಯಾವುದೇ ಅವಕಾಶ ಇಲ್ಲದಿದ್ದರೂ ಕೋಲಿನಿಂದ ಥಳಿಸಿ ಕೈ ಮುರಿದ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯ ನೋವನ್ನು ಭರಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ವಿದ್ಯಾರ್ಥಿನಿ ಈಗ ಶಾಲಾ ಪಾಠದಿಂದಲೂ ವಂಚಿತಲಾಗಿ ಮನೆಯಲ್ಲಿ ಕೂರುವಂತಾಗಿದೆ.

ನನ್ನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದೆ: ಎಚ್‌.ಡಿ.ಕುಮಾರಸ್ವಾಮಿ

ಮುಖ್ಯ ಶಿಕ್ಷಕಿಗೆ ಕೊಟ್ಟ ಶಿಕ್ಷೆಯೇನು? 
ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಆಚರಣೆಗೆ ತರಲಾಗಿದ್ದ ಗಣೇಶ ಹಬ್ಬವನ್ನು ಶಾಲೆ- ಕಾಲೇಜು, ಸಂಘ- ಸಂಸ್ಥೆಗಳು ಹಾಗೂ ಪ್ರತಿ ಮನೆ-ಮನೆಗಳಲ್ಲಿಯೂ ಈಗ ಪೂಜಿಸಲಾಗುತ್ತಿದೆ. ಇನ್ನು ಶಾಲೆ-ಕಾಲೇಜುಗಳಲ್ಲಿ ಗಣೇಶ ಹಬ್ಬ ಹಾಗೂ ಸರಸ್ವತಿ ಪೂಜೆ ಮಾಡುವುದು ಸಾಮಾನ್ಯವಾಗಿದೆ. ಆದರೆ, ಗಣೇಶನ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿ ಕೈ ಮುರಿದ ಶಿಕ್ಷಕಿಗೆ ಈಗ ದೇವರೇ ಶಿಕ್ಷೆ ಕೊಟ್ಟಿದ್ದಾನೆ. ಮೊದಲನೆಯದಾಗಿ ಶಿಕ್ಷಕಿಯೇ ವಿದ್ಯಾರ್ಥಿನಿಯ ಚಿಕಿತ್ಸಾವೆಚ್ಚ ಭರಿಸಬೇಕು. ಎರಡನೇಯದಾಗಿ ಮುಖ್ಯ ಶಿಕ್ಷಕಿ ಹೇಮಲತಾ ಅವರನ್ನು ಶಿಕ್ಷಣ ಇಲಾಖೆಯಿಂದ ಅಮಾನತು ಮಾಡಲಾಗಿದೆ. ಮೂರನೇಯದಾಗಿ ಗ್ರಾಮಸ್ಥರೆಲ್ಲರೂ ಸೇರಿ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಊರಿನಲ್ಲಿ ಇರುವುದು ಬೇಡವೆಂದು ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. 

click me!