ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಇಲ್ಲಿನ ಪ್ರತಿಷ್ಠಿತ ಶ್ರೀರಾಮನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು 5 ಸಾವಿರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸದ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದು, ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಪ್ರವಾಸ ಶುರುವಾಗಲಿದೆ.
ರಾಮಮೂರ್ತಿ ನವಲಿ
ಗಂಗಾವತಿ (ಡಿ.2) : ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಇಲ್ಲಿನ ಪ್ರತಿಷ್ಠಿತ ಶ್ರೀರಾಮನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು 5 ಸಾವಿರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸದ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದು, ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಪ್ರವಾಸ ಶುರುವಾಗಲಿದೆ.
ಆರಂಭದಲ್ಲಿ ಗ್ರಾಮೀಣ ಪ್ರದೇಶದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವಾಸದ ಅವಕಾಶ ದೊರೆಯಲಿದೆ. ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಸರ್ಕಾರಿ ಶಾಲೆಗಳ 5 ಸಾವಿರ ಮಕ್ಕಳಿಗೆ ಪ್ರವಾಸ ಮಾಡುವ ಹೊಸ ಯೋಜನೆ ‘ವಿ ಪ್ರವಾಸ’ (ವಿದ್ಯಾರ್ಥಿ ಪ್ರವಾಸ ಅಥವಾ ವಿದ್ಯಾನಿಕೇತನ ಪ್ರವಾಸ) ಕೈಗೊಳ್ಳಲಾಗುತ್ತದೆ. ತಾಲೂಕಿನಲ್ಲಿರುವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರ 20 ಶಾಲಾ ಬಸ್‌ಗಳನ್ನು ಬಿಡಲಾಗುತ್ತಿದ್ದು, ಶಿಕ್ಷಣ ಇಲಾಖೆಯ ಅನುಮತಿ ಪಡೆದು ಪ್ರವಾಸ ಕೈಗೊಳ್ಳಲಾಗುತ್ತದೆ. ತಾಲೂಕಿನಲ್ಲಿ 25 ಕಿಮೀ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲೆಯ ಮುಖ್ಯಸ್ಥರ ನೇತೃತ್ವ ಮತ್ತು ಸ್ಥಳಿಯ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಪ್ರವಾಸಕ್ಕೆ ತೆರಳಬಹುದು. ಪ್ರವಾಸಕ್ಕೆ ತಗಲುವ ಖರ್ಚು ವೆಚ್ಚವನ್ನು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯವರೇ ಭರಿಸಲಿದ್ದಾರೆ.
KARNATAKA POLITICS : ಕನಕಗಿರಿ ಕದನಕ್ಕೆ ಟಿಕೆಟ್ ಗೆಲ್ಲುವ ಕಲಿ ಯಾರು?
ಎಲ್ಲೆಲ್ಲಿ ಪ್ರವಾಸ?:
ತಾಲೂಕಿನಲ್ಲಿ ಬಹಳಷ್ಟುಐತಿಹಾಸಿಕ ಸ್ಥಳಗಳಿವೆ. ಈ ಸ್ಥಳಗಳಲ್ಲಿ ಬಹಳಷ್ಟುವಿದ್ಯಾರ್ಥಿಗಳು ವೀಕ್ಷಿಸಿಲ್ಲ. ಪ್ರಮುಖವಾಗಿ ಹಿರೇಬೆಣಕಲ್ ಮೌರ್ಯರ ಬೆಟ್ಟ, ಕುಮಾರರಾಮನ ಕುಮ್ಮಟ ದುರ್ಗ, ಹೇಮಗುಡ್ಡ, ಕನಕಗಿರಿ, ಪುರದ ಕೋಟೆ ಲಿಂಗ, ಅಂಜನಾದ್ರಿ ಬೆಟ್ಟಸೇರಿದಂತೆ ವಿವಿಧ ಪ್ರವಾಸ ತಾಣಗಳನ್ನು ನೋಡಬಹುದಾಗಿದೆ. ಪ್ರತಿ ಭಾನುವಾರ ವಿವಿಧ ಶಾಲೆಗಳಲ್ಲಿ ಆಯ್ಕೆ ಮಾಡಿದ ವಿದ್ಯಾರ್ಥಿಗಳ ತಕ್ಕಂತೆ 20 ಬಸ್‌ಗಳನ್ನು ಬಿಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಊಟ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ರವಾಸಿ ತಾಣದ ಮಾಹಿತಿ ನೀಡುವ ತಂಡದ ನೇತೃತ್ವವನ್ನು ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ, ಪವನಕುಮಾರ ಗುಂಡೂರು ಮತ್ತು ಚಾರಣ ಬಳಗದವರು ವಹಿಸಿಕೊಳ್ಳಲಿದ್ದಾರೆ. ಬೆಳಗ್ಗೆ ಪ್ರವಾಸಿ ತಾಣಗಳಿಗೆ ತೆರಳಿ ಅದೇ ದಿನ ಸಂಜೆ ವೇಳೆಗೆ ಮರಳಿ ಸ್ಥಳಕ್ಕೆ ಕರೆದುಕೊಂಡು ಬರಲಾಗುವುದು. ಗಂಗಾವತಿ: ‘ಅಂಜನಾದ್ರಿಯಲ್ಲಿ ಅನ್ಯ ಧರ್ಮದವರಿಗೆ ವ್ಯಾಪಾರ ನಿಷೇಧ’ ನಾಮಫಲಕ ತೆರವು
ತಾಲೂಕಿನಲ್ಲಿರುವ ಗ್ರಾಮೀಣ ಪ್ರದೇಶದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವಾಸ ಕೈಗೊಳ್ಳುವುದಕ್ಕಾಗಿ ನಮ್ಮ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಿಂದ ‘ವಿ ಪ್ರವಾಸ’ ಎನ್ನುವ ಶಿರೋನಾಮೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ತೀರಾ ಹಿಂದುಳಿದ ಮಕ್ಕಳಿಗೆ ಅನುಕೂಲವಾಗಲಿದೆ. 5 ಸಾವಿರ ಮಕ್ಕಳಿಗೆ 20 ಬಸ್‌ಗಳನ್ನು ಬಿಡಲಾಗುತ್ತಿದ್ದು, ಪ್ರತಿ ಭಾನುವಾರ ಪ್ರವಾಸ ಕೈಗೊಳ್ಳಲು ಶಿಕ್ಷಣ ಇಲಾಖೆ ಅನುಮತಿ ಪಡೆಯಲಾಗುತ್ತದೆ.
ನೆಕ್ಕಂಟಿ ಸೂರಿಬಾಬು, ಅಧ್ಯಕ್ಷರು, ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಗಂಗಾವತಿ
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯವರು ಪ್ರವಾಸದ ಬಗ್ಗೆ ಪತ್ರ ಬರೆದಿದ್ದಾರೆ. ಇದನ್ನು ಪರಿಶೀಲಿಸಿ ಮೇಲಧಿಕಾರಿಗಳ ಜತೆ ಚರ್ಚಿಸಲಾಗುತ್ತದೆ. ಇದೊಂದು ಒಳ್ಳೆಯ ಯೋಜನೆಯಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪಾಲಕರ ಜತೆ ಚರ್ಚಿಸಲಾಗುತ್ತದೆ.
ಸೋಮಶೇಖರಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ