
ಬಾಗಲಕೋಟೆ, (ಸೆ.04) : ಪ್ರಸಕ್ತ ಸಾಲಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಅರಿವು ಸಾಲ ಯೋಜನೆಯಡಿ ಮತೀಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಗರಿಷ್ಠ 75 ಸಾವಿರ ರೂ.ಗಳವರೆಗೆ ಶೇ.2ರ ಸೇವಾ ಶುಲ್ಕ ಆಧಾರ ಮೇಲೆ ಸಾಲ ಸೌಲಭ್ಯ ಒದಗಿಸಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಿಇಟಿ, ನೀಟ್ ಪರೀಕ್ಷೆಗೆ ಹಾಜರಾದ ವಿವಿಧ ವೃತ್ತಿಪರ ಕೋರ್ಸಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ನಿಗಮದ ವೆಬ್‍ಸೈಟ್ www.kmdc.kar.nic.in/arivu2 ನಲ್ಲಿ ಸೆಪ್ಟೆಂಬರ 18 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್....!
ನಂತರ ವಿದ್ಯಾರ್ಥಿಗಳು ಅರ್ಜಿಯ ಪ್ರಿಂಟ್‍ಔಟ್ ತೆಗೆದುಕೊಂಡು ಕ್ಯೂ.ಆರ್ ಕೋಡ್‍ನೊಂದಿಗೆ ಇತರೆ ಅವಶ್ಯಕ ದಾಖಲಾತಿಗಳೊಂದಿಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂಸಂ.08354-236255ಗೆ ಸಂಪರ್ಕಿಸಬಹುದಾಗಿದೆ.