ನೀಟ್, ಜೆಇಇ ಪರೀಕ್ಷೆ ವಿವಾದಕ್ಕೆ ಸುಪ್ರೀಂ ಕೋರ್ಟ್ ಅಂತಿಮವಾಗಿ ತೆರೆ ಎಳೆದಿದೆ. ಈ ಮೂಲಕ ಬಿಜೆಪಿಯೇತರ ಆರು ರಾಜ್ಯಗಳಿಗೆ ಮುಖಭಂಗವಾಗಿದೆ.
ನವದೆಹಲಿ, (ಸೆ.04) : ಕೊರೋನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ 2020ನೇ ಸಾಲಿನ NEET ಮತ್ತು JEE ಪರೀಕ್ಷೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದರಿಂದ ಬಿಜೆಪಿಯೇತರ ರಾಜ್ಯಗಳಿಗೆ ಮುಖಭಂಗವಾಗಿದೆ.
ಶುಕ್ರವಾರ ನ್ಯಾಯಮೂರ್ತಿ ಅಶೋಕ್ ಭೂಷಣ್, ನ್ಯಾ. ಬಿ.ಆರ್. ಗಾವೈ ಮತ್ತು ನ್ಯಾ.ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠವು ಮರುಪರಿಶೀಲನಾ ಅರ್ಜಿಯನ್ನು ಆಗಸ್ಟ್ 17ರಂದು ತಿರಸ್ಕರಿಸಿತ್ತು. ಈ ತೀರ್ಪನ್ನ ಮರುಪರಿಶೀಲನೆ ಮಾಡಬೇಕೆಂದು 6 ಬಿಜೆಪಿಯೇತರ ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.
undefined
ಇಂದು (ಶುಕ್ರವಾರ) ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರ ನ್ಯಾಯಪೀಠವು ಮರುಪರಿಶೀಲನೆ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ನಿಗದಿಯಂತೆ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಪ್ರವೇಶಕ್ಕಾಗಿ ನಡೆಸುವಂತ ಎನ್‌ಇಇಟಿ ಪರೀಕ್ಷೆ ಇದೇ ಸೆಪ್ಟೆಂಬರ್.13ಕ್ಕೆ ನಡೆದರೆ, 1 ರಿಂದ 6ರವರೆಗೆ ಜೆಇಇ (ಮೈನ್) ಪರೀಕ್ಷೆ ನಡೆಯಲಿದೆ.
JEE-NEET ವಿಚಾರದಲ್ಲೂ ರಾಜಕೀಯ ಮಾಡುತ್ತಿರುವವರು ಯಾರು? ಮೋದಿಗೆ ಬಂದ ಪತ್ರ
ಜೆಇಇ ಮುಖ್ಯ ಪರೀಕ್ಷಗಳನ್ನು ಸಪ್ಟೆಂಬರ್ 1 ರಿಂದ 6ರವರೆಗೆ ನಡೆಯಲಿದ್ದು, 9.53 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸಪ್ಟೆಂಬರ್.13ರಂದು ನೀಟ್ ಪರೀಕ್ಷೆಗಾಗಿ 15.97 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 8.58 ಲಕ್ಷ ಅಭ್ಯರ್ಥಿಗಳ ಪೈಕಿ 7.5 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದ್ದಾರೆ.
ನೀಟ್‌ನಲ್ಲಿ 24 ಗಂಟೆಗಳಲ್ಲಿ 15.97 ಲಕ್ಷ ಅಭ್ಯರ್ಥಿಗಳ ಪೈಕಿ 10 ಲಕ್ಷ ಮಂದಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದ್ದಾರೆ. ಇದರ ನಡುವೆ ಜೆಇಇ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 570ರಿಂದ 660ಕ್ಕೆ ಏರಿಕೆ ಮಾಡಲಾಗಿದೆ. 3842 ನೀಟ್ ಪರೀಕ್ಷಾ ಕೇಂದ್ರಗಳಿವೆ.
ಬಿಜೆಪಿಯೇತರ ರಾಜ್ಯಗಳಿಂದ ಅರ್ಜಿ
ಸಪ್ಟೆಂಬರ್ ತಿಂಗಳಿನಲ್ಲೇ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಬಾರದು. ಬದಲಿಗೆ ಈ ದಿನಾಂಕವನ್ನು ಮುಂದೂಡುವಂತೆ ಆಗಸ್ಟ್ 28ರಂದು ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು. ಬಿಜೆಪಿ ಸರ್ಕಾರೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಜಾರ್ಖಂಡ್ ರಾಜ್ಯಗಳು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದವು. ಕೊವಿಡ್-19 ಆತಂಕದ ನಡುವೆ ಪರೀಕ್ಷೆಗಳನ್ನು ಮುಂದೂಡಬೇಕೆಂದು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದವು.
ವಿದ್ಯಾರ್ಥಿಗಳ ನೆರವಿಗೂ ಬಂದ ಸೋನು ಸೂದ್: ಕೇಂದ್ರ ಸರ್ಕಾರ ಸ್ಪಂದಿಸುತ್ತಾ..?
ಹಲವು ಸ್ಟಾರ್ಸ್‌ಗಳ ಬೆಂಬಲ
ಹೌದು.. ಈ ಪರೀಕ್ಷೆಗಳನ್ನು ಮುಂದೂಡವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿತ್ತು. ಇದಕ್ಕೆ ನಟ ಸೋನು ಸೂದ್ ಸೇರಿದಂತೆ ಹಲವು ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಸ್ವಿಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಧ್ವನಿಗೂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.