ಹಂದಿ ಮೆದುಳು ತಿನ್ನಿ.. ಶಿಕ್ಷಕನ ಈ ಮಾತಿಗೆ ಶಿಕ್ಷೆ ಆಗದೇ ಇರುತ್ತಾ?

By Suvarna NewsFirst Published Oct 19, 2023, 3:26 PM IST
Highlights

ಶಿಕ್ಷಕರು ಮಕ್ಕಳಿಗೆ ದಾರಿದೀಪ. ಅವರು ಮಾತನಾಡುವಾಗ, ಬೈಯ್ಯುವಾಗ ನಾಲಿಗೆ ಹಿಡಿತದಲ್ಲಿರಬೇಕು. ಮಿತಿ ಮೀರಿದ್ರೆ ಚೀನಾ ಟೀಚರ್ ಹಾಗೆ ಮನೆಯಲ್ಲಿ ಇರ್ಬೇಕಾಗುತ್ತದೆ. ಬಾಯಿಗೆ ಬಂದಂತೆ ಬೈದು ಈಗ ಟೀಚರ್ ವಜಾಗೊಂಡಿದ್ದಾರೆ. 

ಮಕ್ಕಳಿಗೆ ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿಸುವವರು ಗುರು. ಶಿಕ್ಷಕ ಹಾದಿ ತಪ್ಪಿದ್ರೆ ಈಡೀ ವಿದ್ಯಾರ್ಥಿ ವೃಂದವೇ ದಾರಿ ತಪ್ಪುತ್ತದೆ. ಹಾಗಾಗಿ ಶಿಕ್ಷಕನ ಜವಾಬ್ದಾರಿ ಹೆಚ್ಚಿರುತ್ತದೆ. ಆತ ಧರಿಸುವ ಬಟ್ಟೆಯಿಂದ ಹಿಡಿದು, ಪಾಲಿಸುವ ನೀತಿ, ಜೀವನಶೈಲಿ, ಆಡುವ ಮಾತು ಎಲ್ಲವೂ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಕನಾದವನು ಮಕ್ಕಳ ತಪ್ಪನ್ನು ತಿದ್ದಬೇಕು. ಮಕ್ಕಳನ್ನು ನಯವಾಗಿ ದಾರಿಗೆ ತರಬೇಕು. ಅದೇ ಅವರಿಗೆ ಹೊಡೆದು, ಬಾಯಿಗೆ ಬಂದಂತೆ ಬೈದ್ರೆ ಮಕ್ಕಳು ಮತ್ತಷ್ಟು ಹದಗೆಡ್ತಾರೆ. ಇದು ಯೋಗ್ಯ ಶಿಕ್ಷಕನಿಗೆ ಶೋಭೆಯಲ್ಲ. ಆದ್ರೆ ಕೆಲವು ಕಡೆ ರಾಕ್ಷಸನಂತೆ ವರ್ತಿಸುವ ಶಿಕ್ಷಕರಿದ್ದಾರೆ. ಈಗ ಚೀನಾ ಶಿಕ್ಷಕ ಸುದ್ದಿಗೆ ಬಂದಿದ್ದಾನೆ. 

ಚೀನಾ (China) ದ ವೃತ್ತಿಪರ ಶಾಲೆಯೊಂದರಲ್ಲಿ ಶಿಕ್ಷಕ (Teacher) ನೊಬ್ಬನನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಿದ್ಯಾರ್ಥಿಗಳ ಜೊತೆ ಆತನ ನಡೆದುಕೊಳ್ತಿದ್ದ ರೀತಿ ಹಾಗೂ ಆತನ ವರ್ತನೆಯೇ ಆತ ಕೆಲಸ ಕಳೆದುಕೊಳ್ಳಲು ಕಾರಣವಾಗಿದೆ. ಸುನ್ ಎಂಬ ಈ ಶಿಕ್ಷಕ ವಜಾಗೊಂಡಿದ್ದಾರೆ. ಸುನ್, ಆಗ್ನೇಯ ಚೀನಾದ ಅನ್ಹುಯಿ ಪ್ರಾಂತ್ಯದ ನುರಿತ ಕಾರ್ಮಿಕರಿಗಾಗಿ ನಡೆಸುವ  ಅನ್ಹುಯಿ ಹಿರಿಯ ಕೈಗಾರಿಕಾ ತಾಂತ್ರಿಕ ಶಾಲೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ (Student) ಗಳಿಗೆ ಸಲಹೆಗಾರರಾಗಿ ಕೆಲಸ ಮಾಡ್ತಿದ್ದರು.

ರೈಲಿನ ಕಿಚನ್‌ನಲ್ಲಿ ಇಲಿಗಳ ಬಿಂದಾಸ್ ಆಟ: ಆಹಾರದ ಮೇಲೆಲ್ಲಾ ಓಡಾಟ: ವೀಡಿಯೋ

ಅಸೈನ್ಮೆಂಟ್ ಪೂರ್ಣಗೊಳಿಸದ ವಿದ್ಯಾರ್ಥಿಗಳು : ಮಕ್ಕಳು ಹೋಮ್ ವರ್ಕ್ ಮಾಡ್ದೆ ಶಾಲೆಗೆ ಬರೋದು ಕಾಮನ್. ಆದ್ರೆ ಇದೇ ಅಸೈನ್ಮೆಂಟ್ ಸುನ್ ಗೆ ಕೋತರಿಸಿದೆ. ಸುನ್ ಹೇಳಿದ್ದ ಅಸೈನ್ಮೆಂಟನ್ನು ವಿದ್ಯಾರ್ಥಿಗಳು ಮಾಡಿರಲಿಲ್ಲ. ಇದು ಸುನ್ ಕೋಪಕ್ಕೆ ಕಾರಣವಾಗಿತ್ತು. ಫೋಟೋ ಸಿದ್ಧಪಡಿಸಿ ಪೇಪರ್‌ನಲ್ಲಿ ಅಂಟಿಸುವಂತೆ ವಿದ್ಯಾರ್ಥಿಗಳಿಗೆ ಸುನ್ ಹೇಳಿದ್ದರು. ಆದರೆ ಹಲವು ವಿದ್ಯಾರ್ಥಿಗಳು ಗಡುವಿನ ನಂತರವೂ ಅದನ್ನು ಮಾಡಿರಲಿಲ್ಲ. 

ಕೆಟ್ಟ ಬೈಗುಳ ಬೈದ ಟೀಚರ್ : ವಿದ್ಯಾರ್ಥಿಗಳು ಗಡುವು ಮುಗಿದ್ರೂ ಅಸೈನ್ಮೆಂಟ್ ಪೂರ್ಣಗೊಳಿಸಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ಶಿಕ್ಷಕ, ವಿದ್ಯಾರ್ಥಿಗಳ ಮೊಬೈಲ್ ಗೆ ಮೆಸ್ಸೇಜ್ ಕಳುಹಿಸಲು ಶುರು ಮಾಡಿದ್ದಾರೆ. ನಿಮ್ಮ ತಲೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಬೇರೆ ಏನಾದ್ರೂ ಇದ್ಯಾ? ನೀವು ಏನೂ ಮಾಡಲು ಸಾಧ್ಯವಿಲ್ಲ. ಈ ಸಣ್ಣ ವಿಷ್ಯವನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ಆದ್ರೆ ನೀವ್ಯಾರು ಇದನ್ನು ಮಾಡಿಲ್ಲ. ನೀವ್ಯಾಕೆ ಅಸೈನ್ಮೆಂಟ್ ಕಳುಹಿಸಿಲ್ಲ ಎನ್ನುವುದು ನನಗೆ ಗೊತ್ತಾಗಿದೆ. ನಿಮ್ಮ ಮೆದುಳನ್ನು ಚುರುಕುಗೊಳಿಸಲು ನೀವು ಹಂದಿ ಮೆದುಳು ತಿನ್ನಬೇಕು ಎಂದು ಸನ್ ಮೊಬೈಲ್ ನಲ್ಲಿಯೇ ಬೈಗುಳ ಶುರು ಮಾಡಿದ್ದಾರೆ.  ಶಿಕ್ಷಕ ಸುನ್ ಈ ಮೆಸ್ಸೇಜ್ ನೋಡಿ ವಿದ್ಯಾರ್ಥಿಗಳು ದಂಗಾಗಿದ್ದಾರೆ. ಹಿಂಗ್ ಹೆಸರಿನ ವಿದ್ಯಾರ್ಥಿಯೊಬ್ಬ, ಸುನ್ ಗೆ ಮರುಪ್ರಶ್ನೆ ಹಾಕಿದ್ದಾನೆ. ನೀವ್ಯಾಕೆ ಹೀಗೆಲ್ಲ ಬೈಯ್ಯುತ್ತಿದ್ದೀರಿ. ಒಬ್ಬ ಶಿಕ್ಷಕನಾಗಿ ನೀವು ಹೀಗೆಲ್ಲ ಬೈಯ್ಯಬಾರದು ಎಂದು ಹೇಳಿದ್ದಾನೆ.

ಇಲ್ಲಿ ಸಾಯೋದು ಅಪರಾಧ, ಕಳೆದ 70 ವರ್ಷಗಳಿಂದ ಯಾರೂ ಸತ್ತೇ ಇಲ್ಲ. ಹೇಗಪ್ಪಾ ಇದು?

ಹಿಂಗ್ ಮೆಸ್ಸೇಜ್ ಗೆ ಮತ್ತಷ್ಟು ಕೋಪಗೊಂಡ ಸುನ್, ಆತನಿಗೆ ನಾಯಿ ಎನ್ನುವವರೆಗೆ ಬೈದಿದ್ದಾರೆ. ಇವರಿಬ್ಬರ ಚಾಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಓದಿದ ಜನರು ಕೋಪಗೊಂಡಿದ್ದಾರೆ. ಈ ಶಿಕ್ಷಕನ ತಲೆ ಸರಿ ಇಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚೀನಾದಲ್ಲಿ ಶಿಕ್ಷಕರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ನಡೆಯುತ್ತದೆ. ಅದು ಸರಿಯಾಗ್ಬೇಕು ಎಂದಿದ್ದಾರೆ. 

ಸುನ್ ವಿರುದ್ಧ ಶಾಲೆಯಲ್ಲೂ ಕ್ರಮತೆಗೆದುಕೊಳ್ಳಲಾಗಿದೆ. ಸುನ್, ವಿದ್ಯಾರ್ಥಿಗಳ ಮುಂದೆ ಕ್ಷಮೆ ಕೇಳ್ಬೇಕು ಹಾಗೆ ಹಿಂಗ್ ಗೆ ಲಿಖಿತ ಕ್ಷಮಾಪಣಾ ಪತ್ರ ನೀಡ್ಬೇಕು ಎನ್ನಲಾಗಿತ್ತು. ಹಾಗೆಯೇ ಸ್ಕೂಲ್ ಮುಖ್ಯಸ್ಥರು ಸಭೆ ಸೇರಿ ಈ ವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ನಂತ್ರ ಸುನ್ ನನ್ನು ಶಾಲೆಯಿಂದ ವಜಾ ಮಾಡಿದ್ದಾರೆ.  

click me!