ICSE 10 ನೇ ತರಗತಿ ಪರೀಕ್ಷೆ ರದ್ದು.. 12 ನೇ ಕ್ಲಾಸ್ ಕತೆ ಏನು?

By Suvarna NewsFirst Published Apr 20, 2021, 6:20 PM IST
Highlights

ಐಸಿಎಸ್‌ಇ ಹತ್ತಲೇ ತರಗತಿ ಪರೀಕ್ಷೆ ರದ್ದು/ ಆಡಳಿತದಿಂದ ಅಧಿಕೃತ ಆದೇಶ/ ದೇಶದಲ್ಲಿ ಕೊರೋನಾ ಎರಡನೇ ಅಲೆ ರಣಕೇಕೆ/ 12 ನೇ ತರಗತಿ ಪರೀಕ್ಷೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ನವದೆಹಲಿ(ಏ. 20)  ದೇಶದಲ್ಲಿ ಕೊರೋನಾ ಎರಡನೇ ಅಲೆ ಭೀಕರತೆ ಸೃಷ್ಟಿ ಮಾಡಿದೆ. ಪರೀಕ್ಷೆಗಳನ್ನು ಮುಂದೆ ಹಾಕಿದ್ದ ಆಡಳಿತ ಈಗ ಸಂಪೂರ್ಣವಾಗಿ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ.

ಈಗ ಐಸಿಎಸ್‌ಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್) ಕೂಡ 10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿ ಸೋಮವಾರ ಆದೇಶ ಹೊರಡಿಸಿದೆ.

ಆದರೆ ಐಸಿಎಸ್ಇ(Indian School Certificate Examinations) 12 ನೇ ತರಗತಿ ಪರೀಕ್ಷೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನದಲ್ಲಿ ತಿಳಿಸಲಾಗುವುದು ಎಂದು  ಹೇಳಲಾಗಿದೆ.

ಮುಂದೂಡಿಕೆಯಾದ ಪರೀಕ್ಷೆಗಳು ಯಾವವು?

ಸಿಐಎಎಸ್‌ಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ , ದೇಶದಲ್ಲಿ ಸಾಂಕ್ರಾಮಿಕ ರೋಗದ ಪ್ರಸ್ತುತ ಹದಗೆಟ್ಟಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಐಸಿಎಸ್ಇ (ವರ್ಗ 10) 2021 ಪರೀಕ್ಷೆ ರದ್ದು ಮಾಡಲಾಗಿದೆ.  ನಮ್ಮ ವಿದ್ಯಾರ್ಥಿಗಳು ಮತ್ತು  ಅಧ್ಯಾಪಕರ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

ಕೊರೋನಾ ಕಾಟ ವಿಪರೀತವಾಗಿದ್ದು  ನೀಟ್ ಪರೀಕ್ಷೆಗಳನ್ನು  ಮುಂದಕ್ಕೆ ಹಾಕಲಾಗಿದೆ. ದೆಹಲಿಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದ್ದರೆ ಮುಂಬೈ ಮತ್ತು ಪುಣೆಯಲ್ಲಿ ಅಘೋಷಿತ  ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣ ಆಗಿದೆ.  ದಿನವೊಂದಕ್ಕೆ ದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿರುವುದು ಆತಂಕ ಹೆಚ್ಚಿಸಿದೆ. ದಯವಿಟ್ಟು ಮಾಸ್ಕ್ ಧರಿಸಿ.. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.. 

click me!