UGC NET, UPSC ಪರೀಕ್ಷೆ ಮುಂದೂಡಿಕೆ

Published : Apr 20, 2021, 04:40 PM ISTUpdated : Apr 20, 2021, 04:42 PM IST
UGC NET, UPSC  ಪರೀಕ್ಷೆ ಮುಂದೂಡಿಕೆ

ಸಾರಾಂಶ

ದೇಶದಲ್ಲಿ ಕೊರೋನಾ ಎರಡನೇ ಅಲೆ ಅಟ್ಟಹಾಸ ಶುರುವಾಗಿದ್ದು, ಅದು ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ.

ನವದೆಹಲಿ, (ಏ.20): ದೇಶಾದ್ಯಂತ ಕೊರೋನಾ 2ನೇ ಅಲೆಯ ಅಬ್ಬರದಿಂದಾಗಿ ಮೇ 2ರಿಂದ ಮೇ.17ರವರೆಗೆ ನಿಗದಿಯಾಗಿದ್ದಂತ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ.

ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು (ಮಂಗಳವಾರ) ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. 

1ರಿಂದ 9ನೇ ತರಗತಿ ಪರೀಕ್ಷೆ: ಕೊನೆಗೂ ಅಂತಿಮ ನಿರ್ಧಾರ ಪ್ರಕಟಿಸಿದ ಸರ್ಕಾರ

 ಮೇ 2ರಿಂದ ಆರಂಭಗೊಂಡು, ಮೇ.17ಕ್ಕೆ ಮುಕ್ತಾಯಗೊಳ್ಳಬೇಕಿದ್ದಂತ ಯುಜಿಸಿ ನೆಟ್ ಪರೀಕ್ಷೆಯನ್ನು ಕೊರೋನಾ ಸೋಂಕಿನ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿದ್ದು,  ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಯುಪಿಎಸ್​​ಸಿ ಪರೀಕ್ಷೆ ಮುಂದಕ್ಕೆ
ದೇಶದಲ್ಲಿ ಕೋವಿಡ್ - 19 ಪ್ರಕರಣಗಳು ಶೀಘ್ರವಾಗಿ ಏರುತ್ತಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿದ್ದ ಹಲವಾರು ಪರೀಕ್ಷೆಗಳನ್ನು ಕೇಂದ್ರ ನಾಗರಿಕ ಸೇವಾ ಮಂಡಳಿ (ಯುಪಿಎಸ್‌ಸಿ) ಮುಂದೂಡಿದೆ.

 ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪರೀಕ್ಷೆ 2020, ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್‌ಇ) 2020 ಸಂದರ್ಶನಗಳು ಮತ್ತು ಹಲವಾರು ನೇಮಕಾತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆರೋಗ್ಯ ಪರಿಗಣನೆಗಳು, ಲಾಕ್‌ಡೌನ್ ನಿರ್ಬಂಧಗಳು ಮತ್ತು ಸಾಮಾಜಿಕ ಅಂತರವಿಡುವ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಸದ್ಯಕ್ಕೆ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ನಡೆಸದಿರಲು ನಿರ್ಧರಿಸಿದೆ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ