ಉತ್ತರ ಪ್ರದೇಶ ಜೈಲಿನಲ್ಲಿ ಶಿಕ್ಷಣ ಕ್ರಾಂತಿ!

By Suvarna News  |  First Published Nov 15, 2022, 10:53 AM IST

*ಉ.ಪ್ರ ಶಹಜಹಾನ್‌ಪುರ ಜೈಲಿನ ಕೈದಿಗಳು ಶಿಕ್ಷಣದ ಮೂಲಕ ಹೊಸ ಜೀವನವನ್ನು ಕಟ್ಟಿಕೊಳ್ಳಲಿದ್ದಾರೆ
*ಜೈಲಿನಲ್ಲಿದ್ದುಕೊಂಡೇ 10 ಮತ್ತು 12ನೇ ತರಗತಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದ ಕೈದಿ
*ಶಿಕ್ಷೆ ಅನುಭವಿಸುತ್ತಿರುವ ಶಿಕ್ಷಕರಿಂದ ಜೈಲಿನ ಇತರ ಕೈದಿಗಳ ಅಧ್ಯಯನಕ್ಕೆ ನೆರವು
 


ಶಿಕ್ಷಣ (Education) ಎಲ್ಲರಿಗೂ ಅತ್ಯಂತ ಮುಖ್ಯ. ವಿದ್ಯೆಗೆ ಯಾವುದೇ ಮೇಲು-ಕೀಳೆಂಬ ಬೇಧವಿಲ್ಲ. ಯಾರೂ ಬೇಕಾದರೂ, ಯಾವ ವಯಸ್ಸಿನಲ್ಲಾದ್ರೂ ಕಲಿಯಬಹುದು. ಓದಬೇಕೆಂಬ ಆಸೆ ಇದ್ದರೆ ಸಾಕು, ಆ ಕನಸನ್ನು ಎಲ್ಲಿದ್ರೂ ನೆರವೇರಿಸಿಕೊಳ್ಳಬಹುದು. ಉತ್ತಮ ನಡೆ-ನುಡಿ ರೂಢಿಸಿಕೊಳ್ಳುವುದರ ಜೊತೆಗೆ  ಭವಿಷ್ಯ ಕಟ್ಟಿಕೊಳ್ಳಲು ಶಿಕ್ಷಣ ನೆರವಾಗುತ್ತದೆ ಅನ್ನೋದಕ್ಕೆ ಇದು ಉತ್ತಮ ನಿದರ್ಶನ. ಉತ್ತರ ಪ್ರದೇಶ(Uttar Pradesh)ದ ಶಹಜಹಾನ್‌ಪುರ ಜೈಲಿನ ಕೈದಿಗಳು ಶಿಕ್ಷಣದ ಮೂಲಕ ಹೊಸ ಜೀವನವನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. 6 ಮಂದಿ ಕೈದಿಗಳು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ (IGNOU) ಮೂಲಕ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಈ ಜೈಲಿನಲ್ಲಿ ಬಂಧಿಯಾಗಿರುವ ಕೈದಿಗಳಿಗೆ  ಓದಲು ಮತ್ತು ಬರೆಯಲು ಕಲಿಯುವ ಅವಕಾಶವನ್ನು ಒದಗಿಸಲಾಗಿದೆ. ಇದನ್ನ ಕೈದಿಗಳು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವ 30 ವರ್ಷದ ಕೊಲೆ ಅಪರಾಧಿ ಮನೋಜ್ (Manoj), ತನ್ನ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 84 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಇದೀಗ 12 ನೇ ತರಗತಿ ಸೇರಲು ಸಜ್ಜಾಗಿದ್ದು, ಇನ್ನು ಉತ್ತಮ ಅಂಕವನ್ನು ಗಳಿಸುವ ಯೋಚನೆ ಹೊಂದಿದ್ದಾನೆ.

ಅಂದಹಾಗೇ 2014ರಲ್ಲಿ ಕೊಲೆ ಪ್ರಕರಣವೊಂದರಲ್ಲಿ  ಕೆಳ ನ್ಯಾಯಾಲಯವು ಮನೋಜ್‌ಗೆ ಮರಣದಂಡನೆ ವಿಧಿಸಿದೆ. ಕಳೆದ ಆರು ವರ್ಷಗಳ ಶಿಕ್ಷಣವು ಅವನಿಗೆ ಕಠೋರ ಜೈಲು ಸನ್ನಿವೇಶದಲ್ಲಿ ಬದುಕಿನ ನೈಜತೆಯ ಪಾಠವನ್ನು ಕಲಿಸಿಕೊಟ್ಟಿದೆ. ಇದೀಗ ಕೈದಿ ಮನೋಜ್‌ಗೆ ಉನ್ನತ ನ್ಯಾಯಾಲಯವು ಹೇಗಾದರೂ ಕರುಣೆ ತೋರಿಸಬಹುದೆಂಬ ಸಣ್ಣ ಭರವಸೆ ಮೂಡಿದೆ ಅಂತಾರೆ ಜೈಲು ಅಧೀಕ್ಷಕ ಮಿಜಾಜಿ ಲಾಲ್. 

Tap to resize

Latest Videos

ಕೆಲವು ಹಣದ ವ್ಯವಹಾರದ ವಿಚಾರದಲ್ಲಿ ಜೈಲು ಪಾಲಾಗಿರುವ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ನಿರುಪಮಾ ಮಹಂತ್, ಮಹಿಳಾ ಕೈದಿಗಳ ಅಧ್ಯಯನಕ್ಕೆ ಸಹಾಯ ಮಾಡುತ್ತಾರೆ. ಈ ಕಾರ್ಯಕ್ಕೆ ಬೆಂಬಲವಾಗಿ ನಿಂತಿರೋದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ M.Sc B.Ed ಪದವೀಧರ ಕಾಮರಾಜ್ ಆರ್ಯ.

ವಿದ್ಯಾರ್ಥಿಗಳಿಗೆ ಸಂಸ್ಕೃತ ಭೋದಿಸುತ್ತಿರುವ ಕೇರಳದ ಇಸ್ಲಾಮಿಕ್ ವಿದ್ಯಾಸಂಸ್ಥೆ
 
ಈ ಜೈಲಿನಲ್ಲಿ 58 ಮಹಿಳೆಯರು ಸೇರಿದಂತೆ 1,500 ಕೈದಿಗಳ ಪೈಕಿ 250 ಕ್ಕೂ ಹೆಚ್ಚು ಜನರು ನಿಯಮಿತವಾಗಿ ಅಧ್ಯಯನ ಮಾಡುತ್ತಾರೆ. ಆರು ಜೈಲು ಕೈದಿಗಳು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರಿದ್ದಾರೆ. ಇದರಿಂದ ಅವರು ಸಮಾಜದ ಮುಖ್ಯವಾಹಿನಿಗೆ ಮರಳಿದ ನಂತರ ಜೀವನೋಪಾಯವನ್ನು ಗಳಿಸಲು ನೆರವಾಗುತ್ತದೆ.

ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳು ಮುಂಚೂಣಿ: ಓಪನ್ ಡೋರ್ಸ್ ವರದಿ

ಶಿಕ್ಷಣ ಮಾತ್ರವಲ್ಲದೆ, ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಕೈದಿಗಳಿಗೆ ಯೋಗ ತರಗತಿಗಳನ್ನು ಏರ್ಪಡಿಸಲಾಗಿದೆ. ಸಣ್ಣಪುಟ್ಟ ಕಾಯಿಲೆಗಳನ್ನು ಎದುರಿಸಲು ಆವರಣದಲ್ಲಿ ಆಯುರ್ವೇದ ಸಸ್ಯಗಳನ್ನು ಬೆಳೆನಡೆಯುತ್ತವೆ.ೆ. ಮತ್ತು ಮಹಿಳಾ ಕೈದಿಗಳಿಗೆ ಶಹಜಹಾನ್‌ಪುರದ ಪ್ರಸಿದ್ಧ ಜರ್ಡೋಜಿ ಕಸೂತಿ ಕೆಲಸದಲ್ಲಿ ತರಬೇತಿ ನೀಡಲಾಗುತ್ತಿದೆ. ಕಸೂತಿ ತರಬೇತಿ‌ ಕಲಿತ ಮಹಿಳೆಯರು ತಮ್ಮ ಕೆಲಸದ ಮೂಲಕ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಲಾಲ್ ಹೇಳುತ್ತಾರೆ. ಜೈಲಿನಲ್ಲಿರೋ ಸುಮಾರು 50 ಪುರುಷ ಮತ್ತು ಮಹಿಳಾ ಕೈದಿಗಳು, ಹೊಲಿಗೆ ಮತ್ತು ಕಸೂತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ದಿನಕ್ಕೆ 40 ರೂ. ಗಳಿಸುತ್ತಿದ್ದಾರೆ. ಕೋಮಲ್ (25) ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಆಕೆಯ ಪತಿ ಬರೇಲಿ ಜೈಲಿನಲ್ಲಿದ್ದಾನೆ. ಜೈಲಿನಲ್ಲಿ ಹೊಲಿಗೆ ಕೆಲಸದ ಮೂಲಕ ತಿಂಗಳಿಗೆ 1200 ರೂ. ಸಂಪಾದಿಸುತ್ತಾಳೆ.  ಪತಿಯನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮತ್ತೊಬ್ಬ ಮಹಿಳಾ ಕೈದಿ ರಾಮನ್ (27),ಜೈಲು ಅಧೀಕ್ಷಕರಿಗೆ ಈ ‘ಭಾಯ್ ದೂಜ್’ ತಿಲಕ ಇಡುವ ಅವಕಾಶ ಸಿಕ್ಕಿದ್ದರಿಂದ  ಹೊಸ ಸೂಟನ್ನು ಉಡುಗೊರೆಯಾಗಿ ಪಡೆದು ಖುಷಿಯಿಂದ ಇದ್ದಾಳೆ.

click me!