ತಮ್ಮ ಪ್ರಥಮ ಬಹುಮಾನದ ಪೈಕಿ ಅರ್ಧದಷ್ಟು ಮೊತ್ತವನ್ನು ಸಹ ಸ್ಪರ್ಧಿಗಳಿಗೆ ನೀಡುವುದಾಗಿ ಘೋಷಿಸಿದ ಶಿಕ್ಷಕಗೆ ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಸಲಾಂ ಹೇಳಿದ್ದಾರೆ.
ಬೆಂಗಳೂರು, (ಡಿ.4): ಶಿಕ್ಷಕ ರಣಜಿತ್‌ಸಿನ್ಹ್ ದಿಸಾಲೆ ಅವರಿಗೆ ಬರೋಬ್ಬರಿ 7.5 ಕೋಟಿ ರುಪಾಯಿ ನಗದು ಬಹುಮಾನ ಹೊಂದಿರುವ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಮಾಸ್ಟರ್‌ಗೆ ಸಿಎಂ ಬಿಎಸ್ ಯಡಿಯೂರಪ್ಪ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಗ್ಲೋಬಲ್ ಟೀಚರ್ ಪುರಸ್ಕಾರ ಭಾಜನರಾದ ರಂಜಿತ್ ಸಿಂಹ ದಿಸಾಳೆಯವರಿಗೆ ಅಭಿನಂದನೆಗಳು. ಮಹಾರಾಷ್ಟ್ರದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಂಜಿತ್ ಸಿಂಹ ದಿಸಾಳೆ, ಪುರಸ್ಕಾರದ ಮೊತ್ತದಲ್ಲಿ ಅರ್ಧದಷ್ಟನ್ನು ಅಂತಿಮ ಸುತ್ತಿನ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳುವ ಹೃದಯವೈಶಾಲ್ಯ ವ್ಯಕ್ತಪಡಿಸಿರುವುದು ಶ್ಲಾಘನೀಯ ಎಂದು ಮಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.
undefined
7.5 ಕೋಟಿ ರುಪಾಯಿ ಜಾಗತಿಕ ಪ್ರಶಸ್ತಿ ಗೆದ್ದ ಮಹಾರಾಷ್ಟ್ರ ಶಿಕ್ಷಕ ರಣಜಿತ್‌ಸಿನ್ಹ್ ದಿಸಾಲೆ..
ಗ್ಲೋಬಲ್ ಟೀಚರ್ ಪುರಸ್ಕಾರ ಭಾಜನರಾದ ಶ್ರೀ ರಂಜಿತ್ ಸಿಂಹ ದಿಸಾಳೆಯವರಿಗೆ ಅಭಿನಂದನೆಗಳು. ಮಹಾರಾಷ್ಟ್ರದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ , ಪುರಸ್ಕಾರದ ಮೊತ್ತದಲ್ಲಿ ಅರ್ಧದಷ್ಟನ್ನು ಅಂತಿಮ ಸುತ್ತಿನ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳುವ ಹೃದಯವೈಶಾಲ್ಯ ವ್ಯಕ್ತಪಡಿಸಿರುವುದು ಶ್ಲಾಘನೀಯ. pic.twitter.com/CeLzxM8SaM
— B.S. Yediyurappa (@BSYBJP)ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸಿ, ಮಹಾರಾಷ್ಟ್ರದಲ್ಲಿ ಕ್ಯುಆರ್ ಕೋಡ್ ಆಧರಿತ ಪಠ್ಯ ಪರಿಚಯಿಸಿದ ರಣಜಿತ್‌ಸಿನ್ಹ್ ದಿಸಾಲೆ ಅವರು ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ.
2014ರಲ್ಲಿ ವಾರ್ಕಿ ಫೌಂಡೇಷನ್ ಸ್ಥಾಪಿಸಿದ್ದ ಜಾಗತಿಕ ಶಿಕ್ಷಕ ಪ್ರಶಸ್ತಿಯ ಅಂತಿಮ ಸುತ್ತಿಗೆ ವಿಶ್ವದ ವಿವಿಧೆಡೆಯ 10 ಮಂದಿ ಪ್ರವೇಶಿಸಿದ್ದರು. ಆ ಪೈಕಿ ರಣಜಿತ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಹುಮಾನದ ಪೈಕಿ ಅರ್ಧದಷ್ಟು ಮೊತ್ತವನ್ನು ಸಹ ಸ್ಪರ್ಧಿಗಳಿಗೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ 9 ಮಂದಿ ಸ್ಪರ್ಧಿಗಳಿಗೆ ತಲಾ 40 ಲಕ್ಷ ರು. ಲಭಿಸಲಿದೆ.