ಚಿತ್ರದುರ್ಗ ಜಿಲ್ಲೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆ ಊಟದಲ್ಲಿ ಅವ್ಯವಹಾರ..!

By Sathish Kumar KH  |  First Published Aug 12, 2023, 7:23 PM IST

ಚಿತ್ರದುರ್ಗ ಜಿಲ್ಲೆಯ ಬೊಮ್ಮನಕಟ್ಟೆ ವಸತಿ ಶಾಲೆಯಲ್ಲಿ ಹುಳು ಹಿಡಿದ ದವಸ ಹಾಗೂ ಕೊಳೆತ ತರಕಾರಿಗಳಿಂದ ಅಡುಗೆ ತಯಾರಿಸಿ ಮಕ್ಕಳಿಗೆ ಊಟ ಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.12):  ಬಡ ಮಕ್ಕಳು‌ ಚಿಕ್ಕಂದಿನಲ್ಲೇ ಶಿಕ್ಷಣ ದಿಂದ ವಂಚಿತರಾಗದಿರಲಿ ಅಂತ ಸರ್ಕಾರ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆದಿದೆ‌. ಆದ್ರೆ ಇಲ್ಲೊಂದು ವಸತಿ ಶಾಲೆಯ ಆಹಾರ ವ್ಯವಸ್ಥೆ ವಿದ್ಯಾರ್ಥಿಗಳನ್ನು ಸಂಕಷ್ಟದ ಕೂಪಕ್ಕೆ ತಳ್ಳುತ್ತಿದೆ. ಹೀಗಾಗಿ ಆತಂಕಗೊಂಡಿರೋ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಸಮರ ಸಾರಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

Latest Videos

undefined

ನೋಡಿ ಹೀಗೆ ಕೊಳೆತು ಹೋಗಿರೊ‌, ತರಕಾರಿ, ಹುಳಹಿಡಿದ ಆಹಾರ ಪದಾರ್ಥ. ಈ ದೃಶ್ಯಗಳು ಕಂಡು ಬಂದಿದ್ದು,ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಕಟ್ಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ. ಹೌದು, ಈ ಶಾಲೆಯಲ್ಲಿ ಪ್ರೌಢಶಾಲೆ ಹಾಗು ಪಿಯು ಕಾಲೇಜು ವಿದ್ಯಾರ್ಥಿಗಳು ಸೇರಿ 500 ಅಧಿಕ ಜನ ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಿದ್ದಾರೆ. ಆದ್ರೆ ಇಷ್ಟು ವಿಧ್ಯಾರ್ಥಿಗಳಿಗೆ ಒಬ್ರೇ ಪ್ರಿನ್ಸಿಪಲ್ ಹಾಗೂ ವಾರ್ಡನ್ ಆಗಿರುವ ಮಂಜಣ್ಣ ಅನ್ನೋ ಆಸಾಮಿ, ವಿದ್ಯಾರ್ಥಿಗಳಿಗೆ ಸರ್ಕಾರ ಕೊಡುವ ತರಕಾರಿ ಹಾಗು ದವಸ ಧಾನ್ಯದಲ್ಲೂ ಗೋಲ್ಮಾಲ್ ಮಾಡ್ತಾ ಕಳಪೆ‌ ಆಹಾರ ‌ಕೊಡ್ತಾರಂತೆ. 

NCERT ಪಠ್ಯಪುಸ್ತಕ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್‌ ಮಹದೇವನ್‌ಗೆ ಸ್ಥಾನ

ಹುಳು ಹಿಡಿದ ದವಸ, ಕೊಳೆತು ಹೋದ ತರಕಾರಿಯಿಂದ ಅಡುಗೆ ತಯಾರಿ: ಅಲ್ಲದೇ ತರಕಾರಿ ಹುಳು ಹಿಡಿದಿದ್ರು ಸಹ ಅವುಗಳನ್ನು ಬಿಸಾಡದೇ ಕೊಳೆತ ತರಕಾರಿ ಹಾಗು ನಿರುಪಯುಕ್ತ ದವಸಧಾನ್ಯ ಬಳಸಿ ವಿದ್ಯಾರ್ಥಿಗಳಿಗೆ ನೀಡ್ತಾರಂತೆ. ಅಗತ್ಯ ಒದಾರ್ಥಗಳನ್ನು ಒದಗಿಸದೇ ಅಡ್ಜಸ್ಟ್ ಮಾಡಿಕೊಂಡು ಅಡುಗೆ ಮಾಡುವಂತೆ ಸೂಚಿಸ್ತಾರೆಂತೆ‌ ಹೀಗಾಗಿ ಹಲವು ಬಾರಿ ಈ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರುವಂತಾಗಿದೆ. ಆದರೂ ಸರ್ಕಾರದ ಹಣ ಕಬಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ವಿತರಿಸಿ ಮುಗ್ದ ಮಕ್ಕಳ ಜೀವದ ಜೊತೆ ಪ್ರಾಚಾರ್ಯ ಮಂಜಣ್ಣ ಚೆಲ್ಲಾಟವಾಡ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಿದ್ರೆ,‌ ನಿಮ್ಮ ಶಿಕ್ಷಕರ ಹೇಳಿಕೊಟ್ಟು ನಿಮ್ಮಿಂದ ಹೀಗೆ ಮಾತನಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹೀಗೆ ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದು ಅವಾಜ್ ಹಾಕ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಅಡುಗೆ ಸಿಬ್ಬಂದಿಗೆ ಅಡುಗೆ ಮಾಡೋಕೆ ಬರಲ್ವಂತೆ: ಇನ್ನು ಈ ವಿಚಾರವನ್ನು ಹಲವು ಬಾರಿ ಸಮಾಜ ಕಲ್ಯಾಣ ಇಲಾಖೆ  ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ವಂತೆ. ಈ ಅವಾಂತರದ ಬಗ್ಗೆ ಪ್ರಾಚಾರ್ಯ ಮಂಜಣ್ಣನನ್ನು ನಾವು  ಕೇಳಿದಾಗ ವಸತಿ ಶಾಲೆಯ ಅಸಲಿ ಸತ್ಯ ಒಂದೊಂದೆ ಹೊರಬಿದ್ದಿದೆ. ಈ ವಸತಿ ಶಾಲೆಯಲ್ಲಿ  ಕರ್ತವ್ಯ‌ ನಿರ್ವಹಿಸುವ ಅಡುಗೆ ಸಿಬ್ಬಂದಿಗಳಲ್ಲಿ ಯಾರೊಬ್ಬರಿಗೂ ಅಡಿಗೆ ಮಾಡಲು ಬರುವುದಿಲ್ವಂತೆ. ಅವರೆಲ್ಲರು ಗುತ್ತಿಗೆ ಆಧಾರದ ಸಿಬ್ಬಂದಿಗಳಾಗಿದ್ದು,ಕೇವಲ ಅವರ ಜೀವನೋಪಾಯಕ್ಕಾಗಿ  ಸಂಬಳದ ಆಸೆಗಾಗಿ ಈ ಮುಗ್ದ  ವಿದ್ಯಾರ್ಥಿಗಳಿಗೆ ಕಾಟಾಚಾರದ ಅಡಿಗೆ ಬೇಯಿಸಿ ಹಾಕ್ತಾರೆಂದು‌ ಬೇಜಾವಬ್ದಾರಿ‌ ಉತ್ತರ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಧಾರವಾಡ ಜಿಲ್ಲಾಸ್ಪತ್ರೆ ಪರಿಶೀಲನೆ: ಟೆಲಿಮನಸ್‌ ಸೇವೆಗೆ ಫುಲ್‌ ಖುಷ್‌

ಶಿಕ್ಷಣ ಸಚಿವರೇ ಎದ್ದೇಳಿ, ಮಕ್ಕಳನ್ನು ಕಾಪಾಡಿ: ಒಟ್ಟಾರೆ ಬೊಮ್ಮನಕಟ್ಟೆ ಮೊರಾರ್ಜಿ ವಸತಿ ಶಾಲೆಯ  ಕರ್ಮಕಾಂಡ ಹೇಳತೀರದ್ದಾಗಿದೆ. ವಿದ್ಯಾರ್ಥಿಗಳು ಕೊಳೆತ ತರಕಾರಿ ಹಾಗೂ ಹುಳ ಹಿಡಿದ ಆಹಾರ ಸೇವಿಸಿ ಅನಾರೋಗ್ಯದಿಂದ‌ ನರಕಯಾತನೆ ಅನುಭವಿಸ್ತಿದ್ದಾರೆ.‌ ಇನ್ನಾದ್ರು ಸಂಬಂಧಪಟ್ಟವರ ವಿರುದ್ಧ ಅಗತ್ಯ ಕ್ರಮ ಕೈಗೊಂಡು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಬೇಕು. ಈ ಬಗ್ಗೆ ಶಿಕ್ಷಣ ಸಚಿವರಿಗೆ ಮಕ್ಕಳು ಪತ್ರ ಬರೆಯುವ ನಿರ್ಧಾರ ಮಾಡಿದ್ದಾರೆ. ಈ ಸುದ್ದಿಯನ್ನು ನೋಡಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚೆತ್ತುಕೊಳ್ತಾರಾ ನೋಡಬೇಕು.

click me!