CBSE ಬೋರ್ಡ್ ನಿಂದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ/ ಕ್ಲಾಸ್ 12 ಪರೀಕ್ಷಾ ವೇಳಾಪಟ್ಟಿ ದಿನಾಂಕ ಪ್ರಕಟಕ್ಕೆ ಸಿದ್ಧತೆ/ ಕೊರೋನಾ ಎರಡನೇ ಅಲೆ ತಣ್ಣಗಾಗಲಿ/ ಕೇಂದ್ರ ಸಚಿವರಿಂದ ಮಾಹಿತಿ
ನವದೆಹಲಿ(ಏ. 28) ಕೊರೋನಾ ಕಾರಣಕ್ಕೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಕೊರೋನಾ ಎರಡನೇ ಅಲೆ ಅಬ್ಬರದ ಬಗ್ಗೆ ಹೊಸಾದಾಗಿ ಹೇಳುವುದು ಏನೂ ಉಳಿದಿಲ್ಲ.
ಈ ನಡುವೆ CBSE ಬೋರ್ಡ್ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದನ್ನು ಕೊಟ್ಟಿದೆ. ಕ್ಲಾಸ್ 10 ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದರೆ ಕ್ಲಾಸ್ 12 ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿತ್ತು.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. CBSE ಕ್ಲಾಸ್ 12 ಪರೀಕ್ಷೆ ದಿನಾಂಕಗಳು ಜೂನ್ 1 ರ ನಂತರ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಪರೀಕ್ಷೆ ಆರಂಭಕ್ಕೂ 15 ದಿನ ಮುನ್ನ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲಾಗುವುದು. ವಿಷಯಕ್ಕೆ ಸಂಬಂಧಿಸಿ ವೇಳಾಪಟ್ಟಿ ಸಿದ್ಧಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಾಕ್ಟಿಕಲ್ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯೂ ಆ ವೇಳೆಯೇ ಪ್ರಕಟವಾಗಲಿದೆ. ನಿಗದಿಯಂತೆ ಮಾರ್ಚ್ ನಲ್ಲಿ ನಡೆಯಬೇಕಿತ್ತು.
ಕೊರೋನಾ ಎರಡನೇ ಅಲೆ ವ್ಯಾಪಿಸುತ್ತಿರುವ ಕಾರಣ ಎಲ್ಲ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.