ಅ.10ರ ಮೊದಲು CBSE ಪೂರಕ ಪರೀಕ್ಷೆ ಫಲಿತಾಂಶ

By Suvarna NewsFirst Published Sep 25, 2020, 12:18 PM IST
Highlights

ಅಕ್ಟೋಬರ್‌ 10ರ ಒಳಗಾಗಿ 10 ಮತ್ತು 12ನೇ ತರಗತಿಯ ಪೂರಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಲಿದೆ.

ನವದೆಹಲಿ(ಸೆ.25): ಅಕ್ಟೋಬರ್‌ 10ರ ಒಳಗಾಗಿ 10 ಮತ್ತು 12ನೇ ತರಗತಿಯ ಪೂರಕ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸುವುದಾಗಿ ಸಿಬಿಎಸ್‌ಇ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ. ಆ ಮೂಲಕ ಪರೀಕ್ಷೆ ಬರೆದಿದ್ದ 2 ಲಕ್ಷ ವಿದ್ಯಾರ್ಥಿಗಳಿಗೆ ರಿಲೀಫ್‌ ಸಿಕ್ಕಂತಾಗಿದೆ.

ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ದಾಖಲಾತಿ ಅ.31ಕ್ಕೆ ಕೊನೆಯಾಗುತ್ತದೆ ಎಂದು ಯುಜಿಸಿ ಕೌನ್ಸೆಲ್ ನ್ಯಾ. ಎಎಂ ಖನ್ವಿಲ್ಕರ್ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು.

ಅಬ್ಬಬ್ಬಾ..! 10,12ನೇ ತರಗತಿಯ ಟಾಪರ್‌ಗಳಿಗೆ ಕಾರು ಗಿಫ್ಟ್: ಮುಂದಿನ ಸಲವೂ ಇದೆ ಆಫರ್

ಅರ್ಜಿಯಲ್ಲಿ ಪೂರಕ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ತರಗತಿಗಳಿಗೆ ಪ್ರವೇಶ ಸಾಧ್ಯವಾಗುತ್ತಿಲ್ಲ. ವಿಳಂಬದಿಂದ ಒಂದು ವರ್ಷ ನಷ್ಟವಾಗಲಿದೆ ಎಂದು ತಿಳಿಸಲಾಗಿತ್ತು.

ಅರ್ಜಿಯ ವಿಚಾರಣೆ ವೇಳೆ ಉತ್ತರಿಸಿದ ಸಿಬಿಎಸ್ಸಿ ಅ.10ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದೆ. ಇದೇ ವೇಳೆ ಅ.31ರ ಬಳಿಕವೇ ಮೊದಲ ವರ್ಷದ ಪದವಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಆವೇಳೆ ಫಲಿತಾಂಶ ಪ್ರಕಟವಾಗಿರುತ್ತದೆ ಎಂದು ಯುಜಿಸಿ ಸುಪ್ರೀಂಗೆ ತಿಳಿಸಿದೆ.

click me!