ಸಿಬಿಎಸ್ಇ 10ನೇ ತರಗತಿ ಪರೀಕ್ಷೆ : 500ಕ್ಕೆ 500 ಅಂಕ ಪಡೆದು ವಿದ್ಯಾರ್ಥಿಗಳ ಅದ್ಭುತ ಸಾಧನೆ

Published : May 14, 2025, 12:43 PM ISTUpdated : May 14, 2025, 01:12 PM IST
ಸಿಬಿಎಸ್ಇ 10ನೇ ತರಗತಿ ಪರೀಕ್ಷೆ : 500ಕ್ಕೆ 500 ಅಂಕ ಪಡೆದು ವಿದ್ಯಾರ್ಥಿಗಳ ಅದ್ಭುತ ಸಾಧನೆ

ಸಾರಾಂಶ

ಸಿಬಿಎಸ್‌ಇ 10 ನೇ ತರಗತಿಯಲ್ಲಿ ಶೇ.93.66  ಫಲಿತಾಂಶ ದಾಖಲಾಗಿದೆ. ತಿರುವನಂತಪುರ, ವಿಜಯವಾಡ ಮೊದಲೆರಡು ಸ್ಥಾನ ಗಳಿಸಿವೆ. ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಆರವ್ ಮಲ್ಹೋತ್ರಾ ಮತ್ತು ಸೃಷ್ಟಿ 500ಕ್ಕೆ 500 ಅಂಕ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಆರವ್ ಕೃತಕ ಬುದ್ಧಿಮತ್ತೆಯಲ್ಲಿ ಶೇ.100 ಅಂಕ ಗಳಿಸಿದ್ದಾರೆ.

ಮಕ್ಕಳು ಹತ್ತನೇ ತರಗತಿ ಮತ್ತು 12ನೇ ತರಗತಿಯಲ್ಲಿ ಪಾಸ್ ಆದ್ರೆ ಸಾಕು ಎನ್ನುವ ಕಾಲ ಇತ್ತು. ಆದ್ರೀಗ ಮಕ್ಕಳು ಅತೀ ಬುದ್ಧಿವಂತರಾಗಿದ್ದಾರೆ. ಮಕ್ಕಳ ಮಧ್ಯೆ ಸ್ಪರ್ಧೆ ಹೆಚ್ಚಾಗಿದೆ. ಬೆರಳೆಣಿಕೆಯಲ್ಲಿ ಮಕ್ಕಳು ಫೇಲ್ ಆಗ್ತಾರೆ. ಅವರಿಗೂ ಮೂರ್ನಾಲ್ಕು ಅವಕಾಶ ಸಿಗೋದ್ರಿಂದ ಪಾಸ್ ಆಗೋದು ಕಷ್ಟವೇನಲ್ಲ. ಈಗ ಪ್ರತಿಯೊಬ್ಬ ವಿದ್ಯಾರ್ಥಿ ಪರ್ಸಂಟೇಜ್ 90ರ ಮೇಲಿರುತ್ತೆ. 500 ಅಂಕಕ್ಕೆ 499 ಅಂಕ ಪಡೆಯುವ ಕಾಲ ಈಗ ಹೋದಂತಿದೆ.  ಮಕ್ಕಳು 500ಕ್ಕೆ 500 ಅಂಕ ಪಡೆಯುವ ಪ್ರಯತ್ನ ನಡೆಸ್ತಿದ್ದಾರೆ. ಈ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. 10ನೇ ತರಗತಿ ಪರೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ ನೀಡಿದ್ದಾರೆ. 

ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ (cbse 10th class exam) ಫಲಿತಾಂಶ ನಿನ್ನೆ ಹೊರಬಿದ್ದಿದೆ. ಈ ವರ್ಷದ 10ನೇ ತರಗತಿಯಲ್ಲಿ   ಶೇ. 93.66 ಫಲಿತಾಂಶ ದಾಖಲಾಗಿದೆ.  ತಿರುವನಂತಪುರ ಮತ್ತು ವಿಜಯವಾಡ ಪ್ರದೇಶಗಳು ಶೇಕಡಾ 99.79 ಉತ್ತೀರ್ಣದೊಂದಿಗೆ ಅಗ್ರಸ್ಥಾನದಲ್ಲಿವೆ. ಶೇಕಡಾ 98ಕ್ಕಿಂತ ಹೆಚ್ಚು ಉತ್ತೀರ್ಣತೆಯೊಂದಿಗೆ ಬೆಂಗಳೂರು  ಮೂರನೇ ಸ್ಥಾನ ಮತ್ತು ಚೆನ್ನೈ ಶೇಕಡಾ 98.71 ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.  ಪರೀಕ್ಷೆ ಫಲಿತಾಂಶ ಹೊರ ಬರ್ತಿದ್ದಂತೆ ಯಾವ ವಿದ್ಯಾರ್ಥಿ ಹೆಚ್ಚು ಅಂಕ ಪಡೆದಿದ್ದಾರೆ, ಯಾವ ವಿಷ್ಯಕ್ಕೆ ಔಟ್ ಆಫ್ ಔಟ್ ಬಂದಿದೆ ಎನ್ನುವ ಚರ್ಚೆ ಶುರುವಾಗುತ್ತದೆ.  ಈ ಬಾರಿ  500ಕ್ಕೆ 500 ಅಂಕ ಪಡೆದು ಇಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.

ಗ್ರೇಟರ್ ನೋಯ್ಡಾ (Greater Noida) ಪಶ್ಚಿಮದ ವಿದ್ಯಾರ್ಥಿ ಆರವ್  ಅತ್ಯುತ್ತಮ ಅಂಕಗಳಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಆರವ್ ಮಲ್ಹೋತ್ರಾ ಈ ವರ್ಷ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ 500ಕ್ಕೆ 500 ಅಂಕ ಪಡೆದು ನೂರಕ್ಕೆ ನೂರು ಪರ್ಸಂಟೇಜ್ ಮಾಡಿದ ವಿದ್ಯಾರ್ಥಿಯಾಗಿದ್ದಾನೆ.

ಆರವ್ ಮಲ್ಹೋತ್ರಾ ಪಡೆದ ಅಂಕ ಎಷ್ಟು?  : ಆರವ್ ಮಲ್ಹೋತ್ರಾ ಗಣಿತ, ಇಂಗ್ಲಿಷ್, ವಿಜ್ಞಾನ, ಫ್ರೆಂಚ್ ಮತ್ತು ಹೆಚ್ಚುವರಿ ವಿಷಯವಾದ ಕೃತಕ ಬುದ್ಧಿಮತ್ತೆಯಲ್ಲಿ  100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಆದರೆ ಸಮಾಜ ವಿಜ್ಞಾನದಲ್ಲಿ 100ಕ್ಕೆ 98 ಅಂಕ ಮಾತ್ರ ಬಂದಿದೆ. ಆದಾಗ್ಯೂ, ಅವನ ಟಾಪ್ 5 ವಿಷಯಗಳನ್ನು ಸೇರಿಸಿದಾಗ, ಅವನಿಗೆ ಪೂರ್ಣ 500 ಅಂಕಗಳು ಬಂದಿವೆ. ತನ್ನ ಅಂಕದ ಜೊತೆ ವಿದ್ಯಾರ್ಥಿಗಳಿಗೆ ಆರವ್ ಸ್ಪೂರ್ತಿಯಾಗಿದ್ದಾನೆ. ಇಡೀ ಕುಟುಂಬ, ಸ್ನೇಹಿತರು, ಶಾಲೆ ಆರವ್ ಸಾಧನೆಗೆ ಖುಷಿಯಾಗಿದೆ. ಆರವ್ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆರವ್ ಗೆ ಶುಭಾಶಯಗಳ ಸುರಿಮಳೆಯಾಗ್ತಿದೆ. 

ಆರವ್ ಎನ್ಸಿಆರ್ ಪ್ರದೇಶದ ಗ್ರೇಟರ್ ನೋಯ್ಡಾ ಪಶ್ಚಿಮದಲ್ಲಿರುವ ಡೆಲ್ಲಿ ಪಬ್ಲಿಕ್ ಶಾಲೆಯ ನಾಲೆಡ್ಜ್ ಪಾರ್ಕ್-ವಿ ವಿದ್ಯಾರ್ಥಿ. ಆರವ್ ಕೇವಲ ಅಧ್ಯಯನದಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ವಿಶೇಷವೆಂದರೆ ಅವನು ಕೃತಕ ಬುದ್ಧಿಮತ್ತೆಯನ್ನು ಹೆಚ್ಚುವರಿ ವಿಷಯವಾಗಿ ಆರಿಸಿಕೊಂಡು ಅದರಲ್ಲಿ ನೂರಕ್ಕೆ ನೂರು ಅಂಕ  ಗಳಿಸಿದ್ದಾನೆ.  ಇದು ಡೆವಲಪ್ ಸಬ್ಜೆಕ್ಟ್ ಆಗಿರುವ ಕಾರಣ ಇದ್ರಲ್ಲಿ ನೂರುಕ್ಕೆ ನೂರು ಅಂಕ ಗಳಿಸುವುದು ಎಲ್ಲ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ. 

500ಕ್ಕೆ 500 ಅಂಕ ಪಡೆದ ವಿದ್ಯಾರ್ಥಿನಿ ಸೃಷ್ಟಿ : ಆರವ್ ನಂತೆ ಹರಿಯಾಣದ ಪಂಚಕುಲದ ಸೆಕ್ಟರ್ 15 ರಲ್ಲಿ ಭವನ್ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ 500 ಕ್ಕೆ 500 ಅಂಕ ಪಡೆಯಲು ಯಶಸ್ವಿಯಾಗಿದ್ದಾಳೆ. ತಾನು 24 ಗಂಟೆಗಳಲ್ಲಿ 17 ಗಂಟೆಗಳ ಕಾಲ ನಿರಂತರವಾಗಿ ಅಧ್ಯಯನ ಮಾಡುತ್ತೇನೆ ಮತ್ತು ಕೆಲವೊಮ್ಮೆ 20 ಗಂಟೆಗಳ ಕಾಲವೂ  ಅಧ್ಯಯನ ಮಾಡುತ್ತೇನೆ ಎಂದು ಸೃಷ್ಟಿ ಹೇಳಿದ್ದಾಳೆ. 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ