22ನೇ ವಯಸ್ಸಿಗೆ ಯುಪಿಎಸ್ಸಿ ಪಾಸಾದ ಯಶಸ್ವಿನಿ; ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಬಿಎ ಪದವೀಧರೆ!

By Sathish Kumar KHFirst Published Apr 17, 2024, 11:50 PM IST
Highlights

ಬೆಂಗಳೂರಿನ ಬಸವೇಶ್ವರ ನಗರದ 22 ವರ್ಷದ ಬಿಎ ಪದವೀಧರೆ ಯಶಸ್ವಿನಿ, ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ 379ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಬೆಂಗಳೂರು (ಏ.17): ಬೆಂಗಳೂರಿನ ಬಸವೇಶ್ವರ ನಗರದ ಯಶಸ್ವಿನಿ, ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ 379ನೇ ರ್ಯಾಂಕ್ ಪಡೆದಿದ್ದಾರೆ. ಕೇವಲ 22 ವರ್ಷದ ಯಶಸ್ವಿನಿ ಬಿಎ ಪದವೀಧರೆ. ಜೊತೆಗೆ ಈಗ ಇಂದಿರಾಗಾಂಧಿ ಮುಕ್ತ ವಿವಿಯಲ್ಲಿ ಮಾನವಶಾಸ್ತ್ರದಲ್ಲಿ ಎಂಎ ಓದುತ್ತಿದ್ದಾರೆ.

ಕೆಲಕಾಲ ಇನ್ಸೈಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು ಬಿಟ್ಟರೆ ಆಕೆಯ ಶ್ರಮ ಮತ್ತು ಆಸಕ್ತಿಯಿಂದ ಮೊದಲ ಯತ್ನದಲ್ಲೇ ಗೆದ್ದಿದ್ದಾರೆ. ಇನ್ನು ಅವಕಾಶಗಳು ಇರುವುದರಿಂದ ಐಎಎಸ್ ಸಿಗುವಷ್ಟು ರ್ಯಾಂಕ್ ಗಳಿಸಲು ಮತ್ತೆ ಪರೀಕ್ಷೆ ಬರೆಯುವರು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಶಾಖಾಧಿಕಾರಿ ಆಗಿರುವ ತಾಯಿ ಪ್ರಮೀಳ ವಿವರಿಸಿದ್ದಾರೆ. ತಾಯಿಯೇ ಯಶಸ್ವಿನಿಯ ಈ ಸಾಧನೆಗೆ ಪ್ರೇರಣೆ. ತಾಯಿ ಕೆಎಎಸ್ ಪರೀಕ್ಷೆಯ ಕೊನೆ ಹಂತದವರೆಗೂ ಹೋಗಿ ವಿಫಲರಾಗಿದ್ದರು. ನನಗಾಗಿದ್ದ ನಿರಾಸೆಯನ್ನ ಈ ಪರೀಕ್ಷೆ ಪಾಸು ಮಾಡುವ ಮೂಲಕ ಮಗಳು ನಿವಾರಿಸಿದ್ದಾಳೆ. ಎಂದು ಪ್ರಮೀಳಾ ಖುಷಿ ಹಂಚಿಕೊಂಡಿದ್ದಾರೆ.

‘ಶೌಚಾಲಯ’ ಅಭಿಯಾನ ನಡೆಸಿದ್ದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಶಾಂತಪ್ಪಗೆ ಯುಪಿಎಸ್‌ಸಿಯಲ್ಲಿ 644ನೇ ರ್‍ಯಾಂಕ್‌!

ಬೆಂಗಳೂರಿನ ಹುಡುಗಿ ಹಂಸಶ್ರೀಗೆ 2ನೇ ಪ್ರಯತ್ನದಲ್ಲೇ ಯುಪಿಎಸ್ಸಿಯಲ್ಲಿ ಯಶಸ್ಸು!
ಬೆಂಗಳೂರು (ಏ.17):
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲೇ ಬೆಂಗಳೂರಿನ ಹಂಸಶ್ರೀ ಅವರು 866ನೇ ರ್ಯಾಂಕ್‌ ಪಡೆದಿದ್ದಾರೆ ನಗರದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಉತ್ತೀರ್ಣರಾಗಿರುವ ಹಂಸಶ್ರೀ ತಂದೆ-ತಾಯಿ ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಐಎಎಸ್ ಮಾಡಬೇಕು ಪಾಲಕರು ಹುರಿದುಂಬಿಸುತ್ತಿದ್ದರು. ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಯುಪಿಎಸ್‌ಸಿ ಬಗ್ಗೆ ಆಸಕ್ತಿ ಬಂತು. ಮೊದಲ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆ ಮತ್ತು ಸಂದರ್ಶನಕ್ಕೆ ಅರ್ಹತೆ ಸಿಗಲಿಲ್ಲ. ಆದರೆ, ಪರೀಕ್ಷೆಯ ಸ್ವರೂಪ ಅರ್ಥವಾಯಿತು. 

UPSC Results: ಕೋಚಿಂಗ್‌ ಇಲ್ಲದೆ ಯುಪಿಎಸ್ಸಿಯಲ್ಲಿ 101ನೇ ರ‍್ಯಾಂಕ್ ಪಡೆದ ಸೌಭಾಗ್ಯ!

ನಂತರ ಎರಡು ವರ್ಷಗಳಿಂದ ಕೋಚಿಂಗ್ ಕ್ಲಾಸ್‌ಗಳ ಜೊತೆಗೆ ದಿನಕ್ಕೆ 8 ರಿಂದ ಗರಿಷ್ಠ 12 ತಾಸು ಓದುತ್ತಿದ್ದೆ. ದೇಶ ಪ್ರಗತಿ, ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಸಮಾಜ ಸೇವೆ ಮಾಡಬೇಕು ಎಂಬ ಆಸಕ್ತಿಯಿಂದ ಯುಪಿಎಸ್‌ಸಿ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೆ ಎಂದು ಹಂಸಶ್ರೀ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ದೊಡ್ಡ ಸಂಖ್ಯೆಯಲ್ಲಿ ಜನ ಪರೀಕ್ಷೆ ಬರೆಯುತ್ತಾರೆ. ಆದರೆ, ಪರೀಕ್ಷೆ ತೆಗೆದುಕೊಳ್ಳುವವರು ಅಧ್ಯಯನದ ಜೊತೆಗೆ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ತಾನು ಓದಿನ ಜೊತೆಗೆ ಸಂಗೀತ ನೃತ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು ಹಂಸಶ್ರೀ ಹೇಳಿದರು. 866ನೇ ರ‍್ಯಾಂಕ್‌ ಬಂದಿದ್ದರೂ ಐಎಎಸ್‌ಗಾಗಿ ಮತ್ತಷ್ಟು ಪ್ರಯತ್ನಗಳನ್ನು ಮಾಡುತ್ತೇನೆ ಎಂದರು.

click me!