Breaking: ಕೆಪಿಎಸ್‌ ಮರು ಪರೀಕ್ಷೆಗೆ ಸಿಎಂ ಸೂಚನೆ, ಕೊನೆಗೂ ಹೋರಾಟಕ್ಕೆ ಸಂದ ಜಯ

By Gowthami K  |  First Published Sep 2, 2024, 12:45 PM IST

ಕೆಪಿಎಸ್‌ ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ  ಸೂಚನೆ ನೀಡಿದ್ದಾರೆ.


ಬೆಂಗಳೂರು (ಸೆ.2): ಕೆಪಿಎಸ್‌ಸಿ ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ  ಸೂಚನೆ ನೀಡಿದ್ದಾರೆ. ಎರಡು ತಿಂಗಳೊಳಗೆ ಮರು ಪರೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಭಾಷಾಂತರದಲ್ಲಿ ಎಡವಟ್ಟು, ವಾಸ್ತವಾಂಶಗಳ ತಪ್ಪುಗಳಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಸಾಹಿತಿಗಳು, ಚಿಂತಕರು ಸೇರಿದಂತೆ ಅನೇಕರು ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಪ್ರತಿಭಟನೆಗೆ ಮಣಿದು ಸರ್ಕಾರ ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿಗೆ ಸೂಚನೆ ನೀಡಿದೆ. ಈಗ ನಡೆದ ಪರೀಕ್ಷೆಯ ಎಡವಟ್ಟಿನಲ್ಲಿ ಕೆಪಿಎಸ್‌ಸಿಯದ್ದೇ ಲೋಪ ಇರುವ ಕಾರಣ ಅಭ್ಯರ್ಥಿಗಳಿಂದ ಮತ್ತೊಮ್ಮ ಶುಲ್ಕ ಸಂಗ್ರಹಿಸುವಂತಿಲ್ಲ. ಕೆಪಿಎಸ್‌ಸಿಯೇ ವೆಚ್ಚ ಭರಿಸಬೇಕು. ಆದರೆ, ಪ್ರತಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಶುಲ್ಕ ಸಂಗ್ರಹದಿಂದಲೇ ನಡೆಸುವ ಕಾರಣ ಕೆಪಿಎಸ್‌ಸಿಗೆ ಸಂಪನ್ಮೂಲ ಕ್ರೋಢಿಕರಣದ ಸವಾಲು ಎದುರಾಗಲಿದೆ.

Latest Videos

undefined

ಬೆಂಗಳೂರಿನಲ್ಲಿ ನಿಷೇಧಿತ ಪಿಓಪಿ ಗಣೇಶ ಮೂರ್ತಿ ಭರ್ಜರಿ ಮಾರಾಟ, ಕ್ರಿಮಿನಲ್‌ ಕೇಸ್ ಎಚ್ಚರಿಕೆ ಲೆಕ್ಕಕ್ಕೇ ಇಲ್ಲ!

ಪರೀಕ್ಷೆ ನಡೆದ ಬೆನ್ನಲ್ಲೇ ಭಾಷಾಂತರ ದೋಷ, ವಾಸ್ತವಾಂಶಗಳ ತಪ್ಪು ಸೇರಿ ಪತ್ರಿಕೆ -1 ಮತ್ತು ಪತ್ರಿಕೆ -2 ರಲ್ಲಿ 50ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಲೋಪ-ದೋಷಗಳನ್ನು ವಿದ್ಯಾರ್ಥಿ ಸಂಘಟನೆಗಳು, ಉಪನ್ಯಾಸಕರು, ಕೋಚಿಂಗ್ ಸೆಂಟರ್‌ಗಳು ಪತ್ತೆ ಹಚ್ಚಿತ್ತು.

ಮರು ಪರೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತ್ತು. ಪರೀಕ್ಷೆಯಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಭಾರಿ ಅನ್ಯಾಯವಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ 58 ಪ್ರಶ್ನೆಗಳು ಲೋಪ ದೋಷಗಳಿಂದ ಕೂಡಿರುವ ಕಾರಣ 116 ಕೃಪಾಂಕ ನೀಡಲು ಸಾಧ್ಯವಿಲ್ಲ. ಹೀಗಾಗಿ, ಪರೀಕ್ಷೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳು, ತಜ್ಞರ ಸಮಿತಿ, ಭಾಷಾಂತರಕಾರರು ಸೇರಿದಂತೆ ಸಂಬಂಧಪಟ್ಟ ಎಲ್ಲರ ವಿರುದ್ಧ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕಾಂಕ್ಷಿಗಳ ಸಂಘ ಆಗ್ರಹಿಸಿತ್ತು.

ವಿಶ್ವದ ಅತ್ಯಂತ ಸುಂದರ ಸರೋವರಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸರೋವರವಿದು, ವಿಶೇಷತೆ ಇಲ್ಲಿದೆ

ಕೀ ಉತ್ತರಗಳಿಗೆ ಅಭ್ಯರ್ಥಿಗಳಿಂದ ಬರುವ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕವೇ ತಜ್ಞರ ಸಮಿತಿಯಿಂದ ಅಭಿಪ್ರಾಯ ಸಂಗ್ರಹಿಸುವುದಾಗಿ ಕೆಪಿಎಸ್‌ಸಿ ತಿಳಿಸಿತ್ತು. ಸೆ.4ರ ಸಂಜೆವರೆಗೆ ಕಾಲಾವಕಾಶ ಕೊಡಲಾಗಿತ್ತು. ಇದೀಗ ಸಿದ್ದರಾಮಯ್ಯ ಮರು ಪರೀಕ್ಷೆಗೆ ಸೂಚನೆ ನೀಡಿರುವುದರಿಂದ ಕೆಪಿಎಸ್‌ಸಿ ಎರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸಲೇಬೇಕಿದೆ.

click me!