ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: 41.39% ಮಕ್ಕಳು ಪಾಸ್‌, ಬಾಲಕಿಯರು, ಹಳ್ಳಿ ವಿದ್ಯಾರ್ಥಿಗಳ ಮೇಲುಗೈ

By Kannadaprabha NewsFirst Published Jul 1, 2023, 8:02 AM IST
Highlights

ಪರೀಕ್ಷೆ ಬರೆದ 40,647 ವಿದ್ಯಾರ್ಥಿನಿಯರಲ್ಲಿ 18,565(ಶೇ.45.67) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಶೇ.42.66 ಫಲಿತಾಂಶ ದಾಖಲಿಸಿದರೆ, ನಗರದ ವಿದ್ಯಾರ್ಥಿಗಳು ಶೇ. 40.3 ಫಲಿತಾಂಶ ದಾಖಲಿಸಿದ್ದಾರೆ.

ಬೆಂಗಳೂರು(ಜು.01):  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಪರೀಕ್ಷೆ ಬರೆದವರ ಪೈಕಿ ಶೇ.41.39ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿಯ ಪರೀಕ್ಷೆಗೆ 1,11,781 ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆ ಬರೆದಿದ್ದರು. ಈ ಪೈಕಿ 46,270 (ಶೇ.41.39) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆಯಲ್ಲಿ ಶೇಕಡಾವಾರು ಲೆಕ್ಕದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 71,134 ಬಾಲಕರು ಪರೀಕ್ಷೆ ಬರೆದಿದ್ದರೆ, ಅವರಲ್ಲಿ 27,705(ಶೇ.38.95) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 40,647 ವಿದ್ಯಾರ್ಥಿನಿಯರಲ್ಲಿ 18,565(ಶೇ.45.67) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಶೇ.42.66 ಫಲಿತಾಂಶ ದಾಖಲಿಸಿದರೆ, ನಗರದ ವಿದ್ಯಾರ್ಥಿಗಳು ಶೇ. 40.3 ಫಲಿತಾಂಶ ದಾಖಲಿಸಿದ್ದಾರೆ.

ಸವಣೂರು: ಎಸ್ಸೆಸ್ಸೆಲ್ಸಿ 98ನೇ ಬ್ಯಾಚಿನ ವಿದ್ಯಾರ್ಥಿಗಳಿಂದ ಗುರುವಂದನೆ, ಶಿಕ್ಷಕರಿಗೆ ನೆನಪಿನ ಕಾಣಿಕೆ

ಫಲಿತಾಂಶವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ವೆಬ್‌ಸೈಟ್‌ https://karresults.nic.in ನಲ್ಲಿ ಪ್ರಕಟಿಸಲಾಗಿದ್ದು ಮಧ್ಯಾಹ್ನ 12ಕ್ಕೆ ಆಯಾ ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗೆ ಫಲಿತಾಂಶವನ್ನು ಎಸ್‌ಎಂಎಸ್‌ ಮಾಡಲಾಗಿದೆ. ಪ್ರತಿ ಶಾಲೆಗಳ ಎಲ್ಲ ವಿದ್ಯಾರ್ಥಿಗಳ ಕ್ರೋಢೀಕೃತ ಫಲಿತಾಂಶ ಪಟ್ಟಿಮತ್ತು ತಾತ್ಕಾಲಿಕ ಅಂಕಪಟ್ಟಿಯನ್ನು http://kseab.karnataka.gov.in ವೆಬ್‌ಸೈಟ್‌ನ ಶಾಲಾ ಲಾಗಿನ್‌ನಲ್ಲಿ ನೀಡಿ ಶಾಲಾ ಹಂತದಲ್ಲಿ ಮುದ್ರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಜೂನ್‌ 12ರಿಂದ 19ರವರೆಗೆ ರಾಜ್ಯದ 458 ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆದಿದ್ದವು. ರಾಜ್ಯದ 9 ಜಿಲ್ಲೆಗಳಲ್ಲಿ 51 ಮೌಲ್ಯಮಾಪನ ಕೇಂದ್ರಗಳನ್ನು ನಿರ್ಮಾಣ ಮಾಡಿ 9,256 ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಲಾಗಿತ್ತು.

click me!