ಕೊರೋನಾ: ಶೇ.37ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಯಿಂದ ದೂರ

By Kannadaprabha News  |  First Published Sep 8, 2021, 9:31 AM IST
  • ಕೊರೋನಾ ಕಾರಣದಿಂದಾಗಿ ದೀರ್ಘಕಾಲದಿಂದ ಶಾಲೆಗಳು ಬಾಗಿಲು ಮುಚ್ಚಿರುವುದು ದುರಂತ
  • ಗ್ರಾಮೀಣ ಭಾಗಗಳ ಶೇ.37ರಷ್ಟುವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ಮಾಡಿಲ್ಲ

ನವದೆಹಲಿ (ಸೆ.08): ಕೊರೋನಾ ಕಾರಣದಿಂದಾಗಿ ದೀರ್ಘಕಾಲದಿಂದ ಶಾಲೆಗಳು ಬಾಗಿಲು ಮುಚ್ಚಿರುವುದು ದುರಂತಮಯ ಪರಿಣಾಮಗಳಿಗೆ ಕಾರಣವಾಗಿದೆ. ಗ್ರಾಮೀಣ ಭಾಗಗಳ ಶೇ.37ರಷ್ಟುವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ಮಾಡಿಲ್ಲ. ಶೇ.48ರಷ್ಟುವಿದ್ಯಾರ್ಥಿಗಳು ಸರಳವಾದ ವಾಕ್ಯಗಳನ್ನು ಓದಬಲ್ಲ ಸಾಮರ್ಥ್ಯವನ್ನು ಕೂಡ ಹೊಂದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.

ವಿದ್ಯಾರ್ಥಿಗಳ ಆನ್‌ಲೈನ್‌ - ಆಫ್‌ಲೈನ್‌ ಕಲಿಕೆ (ಸ್ಕೂಲ್‌)ಗೆ ಸಂಬಂಧಿಸಿದಂತೆ ಆಗಸ್ಟ್‌ನಲ್ಲಿ 15 ರಾಜ್ಯಗಳ ಹಿಂದುಳಿದ ಮತ್ತು ಬಡ ಕುಟುಂಬಗಳ 1,400 ವಿದ್ಯಾರ್ಥಿಗಳನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ. ಸರ್ಕಾರಿ ಶಾಲೆಗಳಿಗೆ ತೆರಳುವ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಸಮೀಕ್ಷೆಯ ವರದಿಯನ್ನು ಸೋಮವಾರ ಪ್ರಕಟಿಸಲಾಗಿದೆ.

Tap to resize

Latest Videos

ಕೋವಿಡ್‌ ನಂತರ ಶಿಕ್ಷಕರ ವೃತ್ತಿ, ಬದುಕು ಹೇಗೆ ಬದಲಾಗಿದೆ? ಇವರು ಯಾವ ಯೋಧರಿಗೂ ಕಮ್ಮಿಯಿಲ್ಲ!

ಸಮೀಕ್ಷೆ ಹೇಳಿದ್ದೇನು? 

ಗ್ರಾಮೀಣ ಭಾಗಗಳ ಶೇ.28ರಷ್ಟುಮತ್ತು ನಗರ ಪ್ರದೇಶಗಳ ಶೇ.47ರಷ್ಟುವಿದ್ಯಾರ್ಥಿಗಳು ಮಾತ್ರವೇ ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಶೇ.37ರಷ್ಟುಮತ್ತು ನಗರ ಪ್ರದೇಶದ ಶೇ.19ರಷ್ಟುಮಂದಿ ವಿದ್ಯಾಭ್ಯಾಸವನ್ನೇ ಮಾಡಿಲ್ಲ. ಅರ್ಧದಷ್ಟುವಿದ್ಯಾರ್ಥಿಗಳು ಸರಳ ವಾಕ್ಯ ಓದುವ ಸಾಮರ್ಥ್ಯ ಹೊಂದಿಲ್ಲ

ನಗರ ಪ್ರದೇಶಗಳ ಶೇ.42ರಷ್ಟುವಿದ್ಯಾರ್ಥಿಗಳು ಕೆಲವು ಪದಗಳಿಗಿಂತ ಹೆಚ್ಚು ಓದಬಲ್ಲ ಸಾಮರ್ಥ್ಯವನ್ನು ಹೊಂದಿಲ್ಲ.

ಆನ್‌ಲೈನ್‌ನಲ್ಲಿ ನಿಯಮಿತವಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಪಾತ ನಗರದಲ್ಲಿ ಶೇ.24ರಷ್ಟು, ಗ್ರಾಮೀಣ ಭಾಗದಲ್ಲಿ ಕೇವಲ ಶೇ.8ರಷ್ಟುಮಾತ್ರವೇ ಇದೆ.

ಕಾರಣ ಏನು?:  ಇಂಟರ್‌ನೆಟ್‌ ಸೌಲಭ್ಯ, ಸ್ಮಾರ್ಟ್‌ಫೋನ್‌ಗಳ ಅಲಭ್ಯತೆ, ಬಡತನ ಆನ್‌ಲೈನ್‌ ತರಗತಿಗಳು ವಿದ್ಯಾರ್ಥಿಗಳು ಅತ್ಯಲ್ಪ ಪ್ರಮಾಣದಲ್ಲಿ ತಲುಪುತ್ತಿರುವುದಕ್ಕೆ ಪ್ರಮಖ ಕಾರಣ.

ಕೆಲವು ಮನೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಇದ್ದರು ಕೂಡ ಅದನ್ನು ಕೆಲಸದ ಅವಧಿಯಲ್ಲಿ ಹಿರಿಯರೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ.

click me!