ಕೊರೋನಾ ಪಾಸಿಟಿವ್ ಆದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ಎಡವಟ್ಟು ಮಾಡಿಕೊಂಡ ಬಿಮ್ಸ್ ಕಾಲೇಜು ಆಡಳಿತ ಮಂಡಳಿ| ಸಾರ್ವಜನಿಕ ಸಾರಿಗೆಯಲ್ಲಿ ಸೋಂಕಿತರ ಪ್ರಯಾಣ| ವಿದ್ಯಾರ್ಥಿಗಳ ಕುಟುಂಬದವರು ಮಾತ್ರವಲ್ಲದೆ ಇತರರಿಗೂ ಸೋಂಕು ಹರಡುವ ಆತಂಕ|
ಬೆಳಗಾವಿ(ಏ.22): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಕೊರೋನಾ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪ್ರಕರಣಗಳಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್ ಕಾಲೇಜು ಆಡಳಿತ ಮಂಡಳಿ ಕೊರೋನಾ ಪಾಸಿಟಿವ್ ಆದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ಇದೀಗ ಎಡವಟ್ಟು ಮಾಡಿದೆ.
ಕಾಲೇಜಿನ ಹಾಸ್ಟೆಲ್‌ನಲ್ಲಿರುವ 14 ಮೆಡಿಕಲ್ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು, ಈ ವಿದ್ಯಾರ್ಥಿಗಳನ್ನು ತಕ್ಷಣ ಮನೆಗೆ ಹೋಗುವಂತೆ ಬ್ರಿಮ್ಸ್ ಆಡಳಿತ ಮಂಡಳಿ ಸೂಚಿಸಿದೆ. ಅದರಂತೆ ಪಾಸಿಟಿವ್ ವಿದ್ಯಾರ್ಥಿಗಳು ಕಾರು, ಬಸ್ಸುಗಳ ಮೂಲಕ ಮನೆಗೆ ತೆರಳಿದ್ದು, ಇವರಿಂದ ಬೇರೆಯವರಿಗೂ ಸೋಂಕು ಹರಡುವ ಆತಂಕ ಮನೆ ಮಾಡಿದೆ.
ಇದು ಕೊರೋನಾ ಕಾಲದ ಮಹಾ ಕರ್ಮಕಾಂಡ : ಇಲ್ಲಿದೆ ಶಾಕಿಂಗ್ ಸತ್ಯ !
ಕಾಲೇಜು ಹಾಸ್ಟೆಲ್‌ನಲ್ಲಿ ಇನ್ನೂ 200 ವಿದ್ಯಾರ್ಥಿಗಳಿದ್ದು ಅವರಿಗೆ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದ್ದರೂ ಸೋಂಕಿತರು ಸಾರ್ವಜನಿಕ ಸಾರಿಗೆಯಲ್ಲಿ ವಿದ್ಯಾರ್ಥಿಗಳು ಮನೆ ತಲುಪಿರುವುದು ಅವರ ಕುಟುಂಬದವರು ಮಾತ್ರವಲ್ಲದೆ ಇತರರಿಗೂ ಸೋಂಕು ಹರಡುವ ಆತಂಕ ಮೂಡಿಸಿದೆ.