ಎರಡು ದಿನಗಳಿಂದ ಸುರಿದ‌ ಮಳೆಗೆ 106 ವರ್ಷಗಳ‌ ಇತಿಹಾಸವಿರುವ ಸರ್ಕಾರಿ ಶಾಲೆ ನೆಲಸಮ!

Published : Jun 27, 2023, 04:47 PM IST
ಎರಡು ದಿನಗಳಿಂದ ಸುರಿದ‌ ಮಳೆಗೆ 106 ವರ್ಷಗಳ‌ ಇತಿಹಾಸವಿರುವ ಸರ್ಕಾರಿ ಶಾಲೆ ನೆಲಸಮ!

ಸಾರಾಂಶ

ಶಿಥಿಲಾವಸ್ಥೆಯಲ್ಲಿದ್ದ ತರಗತಿ ಕೊಠಡಿಗಳ ನೆಲಸಮಕ್ಕಾಗಿ ಶಿಕ್ಷಣ ಇಲಾಖೆಗೆ ಸಲ್ಲಿಸಿದ‌ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ಎರಡು ದಿನಗಳಿಂದ ಸುರಿದ ಮಳೆಗೆ ಹೆಮ್ಮಾಡಿ ಸರಕಾರಿ ಶಾಲೆ ನೆಲಸಮವಾಗಿದೆ.

ಉಡುಪಿ (ಜೂ.27): ಶಿಥಿಲಾವಸ್ಥೆಯಲ್ಲಿದ್ದ ತರಗತಿ ಕೊಠಡಿಗಳ ನೆಲಸಮಕ್ಕಾಗಿ ಶಿಕ್ಷಣ ಇಲಾಖೆಗೆ ಸಲ್ಲಿಸಿದ‌ ಮನವಿಗೆ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ. ಘಟನೆ ಘಟಿಸಬೇಕು, ಆ ಬಳಿಕ ಎಚ್ಚೆತ್ತುಕೊಳ್ಳಬೇಕು ಎನ್ನುವುದು ಇಲಾಖೆಯ ನಿಯಮವೋ ಎನ್ನುವಂತೆ ಕಟ್ಟಡ ಕೊನೆಗೂ ಧರಶಾಹಿಯಾಗಿದೆ. ಸಂಭವಿಸಬಹುದಾದ ಘಟನೆ ಶಾಲಾ ಸಮಯದಲ್ಲಿ ಸಂಭವಿಸಿದರೆ ವಿದ್ಯಾರ್ಥಿಗಳ ಜೀವಕ್ಕೆ ಯಾರು ಹೊಣೆ ಎನ್ನುವುದೇ ದೊಡ್ಡ ಪ್ರಶ್ನೆ!

ಇಂತಹುದೊಂದು ಘಟನೆಗೆ ಸಾಕ್ಷಿಯಾಗಿದ್ದು 106 ವರ್ಷಗಳ‌ ಇತಿಹಾಸವಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿ. ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆಮ್ಮಾಡಿ ಪ್ರಾಥಮಿಕ ಶಾಲೆಯ ತರಗತಿ‌ ಕೊಠಡಿಗಳು ನೆಲಸಮಗೊಂಡಿದ್ದು ಅದೃಷ್ಟಾವಶಾತ್ ಸಂಭವಿಸಬಹುದಾದ ಬಹುದೊಡ್ಡ ದುರಂತವೊಂದು ತಪ್ಪಿ ಹೋಗಿದೆ.

BENGALURU-MYSURU EXPRESSWAY ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿ.ಎಲ್ ಕ್ಯಾನ್ಸಲ್: ಎಡಿಜಿಪಿ ಅಲೋಕ್‌

ಶಾಲೆಯ ಮೂರು ಕೊಠಡಿಗಳು ದುಸ್ಥಿತಿಯಲ್ಲಿರುವ ಕುರಿತು ಎಚ್ಚೆತ್ತುಕೊಂಡ ಶಾಲಾಭಿವೃದ್ದಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಿದ್ದಾರೆ. ಅಪಾಯಕಾರಿ ಕಟ್ಟಡಗಳಿಂದ ಉಳಿದ ಕಟ್ಟಡಗಳಿಗೂ ಸಮಸ್ಯೆ ಇದ್ದು, ಶೀಘ್ರವೇ ಅಪಾಯಕಾರಿ ಕಟ್ಟಡಗಳನ್ನು ನೆಲಸಮಗೊಳಿಸಲು ಇಲಾಖೆಗೆ ಮನವಿ ನೀಡಲಾಗಿದೆ.

ಆರಂಭದಲ್ಲಿ ಮನವಿಗೆ ಸ್ಪಂದಿಸಿದ್ದು, ಸ್ಥಳಕ್ಕೆ ಜಿ.ಪಂ ಇಂಜಿನಿಯರ್ ಬಂದು ಪರಿಶೀಲನೆ ನಡೆಸಿ ಒಂದಷ್ಟು ಮಾಹಿತಿಯನ್ನು ಪಡೆದುಕೊಂಡು ಹೋಗಿದ್ದು ಬಿಟ್ಟರೆ ಇದುವರೆಗೂ ಯಾರೂ ಇತ್ತ ಕಡೆ ಮುಖ ಹಾಕಿ ಕಂಡಿಲ್ಲ.ಹೆಮ್ಮಾಡಿ ಸರ್ಕಾರಿ‌ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 106 ವರ್ಷಗಳ ಇತಿಹಾಸವಿದೆ.

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡುವಂತೆ ಕೂಗಿದ‌ ಅಭಿಮಾನಿ, ಆಯ್ತು ಕೊಡ್ತಿನಿ ಕೂತ್ಕೊ ಎಂದ

ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. 1-7 ನೇ ತರಗತಿವರೆಗೆ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದಾರೆ‌. ಬರೋಬ್ಬರಿ 121 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದಾಖಲಾತಿ ಹೆಚ್ಚಿಸಲು  ಎಲ್ ಕೆ ಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು, 42 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಎಲ್ ಕೆಜಿ-ಯುಕೆಜಿ ಸೇರಿಸಿ ಪ್ರಸ್ತುತ ಈ ಶಾಲೆಯಲ್ಲಿ 163 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಎರಡು ದಿನಗಳಿಂದ ಸುರಿದ‌ ಮಳೆಗೆ ಗೋಡೆಗಳು‌ ನೆನೆದು ಕುಸಿದು ಬಿದ್ದಿದ್ದು, ಒಂದು ಕೊಠಡಿ ಸಂಪೂರ್ಣ ಧರಶಾಹಿಯಾಗಿದೆ. ಉಳಿದೆರಡು ಕೊಠಡಿಗಳು ಅರ್ಧಂಬರ್ಧ ನೆಲಸಮಗೊಂಡಿದೆ. ಇದರ ಪರಿಣಾಮ ಪಕ್ಕದ ಕೊಠಡಿಗೂ ವಿಸ್ತರಣೆಯಾಗಿದ್ದು, ಅದರ ಕೆಲವು ಹೆಂಚುಗಳು ಕೂಡ ಕೆಳಗೆ ಬಿದ್ದಿವೆ. ಶನಿವಾರ ತಡರಾತ್ರಿ ಈ ಘಟನೆ ನಡೆದಿರುವುದರಿಂದ‌ ಯಾವುದೇ ಅಪಾಯ ಸಂಭವಿಸದೇ ಶಿಕ್ಷಕರು, ಶಾಲಾಭಿವೃದ್ದಿ‌ ಸಮಿತಿ, ಹಳೆ ವಿದ್ಯಾರ್ಥಿ‌ಸಂಘ, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ