ಪಿಯು ಕಾಲೇಜಿಗೂ ದಸರಾ ರಜೆ : ಎಷ್ಟು ದಿನ..?

Kannadaprabha News   | Asianet News
Published : Oct 20, 2020, 07:38 AM IST
ಪಿಯು ಕಾಲೇಜಿಗೂ ದಸರಾ ರಜೆ : ಎಷ್ಟು ದಿನ..?

ಸಾರಾಂಶ

ಪ್ರಾಥಮಿಕ ಪ್ರೌಢಶಾಲೆಗಳಂತೆ ಪಿಯು ಕಾಲೇಜುಗಳಿಗೂ ದಸರಾ ರಜೆಯನ್ನು ಘೋಷಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ

ಬೆಂಗಳೂರು (ಅ.20):  ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಘೋಷಿಸಿರುವ ದಸರಾ ರಜೆಯನ್ನು ಪಿಯು ಇಲಾಖೆಗೂ ವಿಸ್ತರಿಸಿದ್ದು, ಅ.21ರಿಂದ 30ರವರೆಗೂ ರಜೆ ನೀಡಿ ಆದೇಶಿಸಿದೆ. 

ಈ ಕುರಿತು ಸೋಮವಾರ ಸುತ್ತೋಲೆ ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಅ.21ರಿಂದ 30ರ ವರೆಗೆ ಮಧ್ಯಂತರ ರಜೆ ಘೋಷಿಸಿದ್ದು, ಅ.31 ಮತ್ತು ನ.1ರಂದು ಎರಡು ದಿನಗಳು ಸಾರ್ವತ್ರಿಕ ರಜೆ ಇರುವುದರಿಂದ ನ.2ರಂದು ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ. 

ರಾಜ್ಯದ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ಗುಡ್‌ ನ್ಯೂಸ್

ಶಾಲೆಗಳಿಗೆ ದಸರಾ ರಜೆ ಘೋಷಿಸಿರುವಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಆರೋಗ್ಯದ ಹಿತದೃಷ್ಟಿಯಿಂದ ಪಿಯು ಕಾಲೇಜಿಗೂ ರಜೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಅ.30ರ ವರೆಗೆ ಘೋಷಿಸುವಂತೆ ಆದೇಶಿಸಿದ್ದಾರೆ.

PREV
click me!

Recommended Stories

ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!
ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!