New Normal: ಆನ್‌ಲೈನ್ ಕ್ಲಾಸ್‌ಗಾಗಿ ಬೆಟ್ಟ ಹತ್ತಬೇಕು

By Suvarna News  |  First Published Oct 19, 2020, 4:36 PM IST

ಕೊರೊನಾ ಸಾಂಕ್ರಾಮಿಕ ನ್ಯೂ ನಾರ್ಮಲ್ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹಲವು ಬದಲಾವಣೆಗೆ ಕಾರಣವಾಗಿದೆ. ಆನ್‌ಲೈನ್ ಎಂಬುದು ಇದೀಗ ನಾರ್ಮಲ್ ಆಗಿದ್ದು, ಶಾಲಾ ಮಕ್ಕಳು ಇಂಟರ್ನೆಟ್‌ಕ್ಕಾಗಿ ಅಲೆಯುವಂತಾಗಿದೆ.


ಶಿರಸಿ ತಾಲೂಕಿನ ಬಕ್ಕಳದ ವಿದ್ಯಾರ್ಥಿಯೊಬ್ಬ ಇಂಟರ್ನೆಟ್ ಸಿಗ್ನಲ್‌ಗಾಗಿ ಮರ ಏರಿ ಆನ್‌ಲೈನ್ ಕ್ಲಾಸ್ ಮಾಹಿತಿ ಪಡೆಯುತ್ತಿದ್ದ ಎಂಬ ವರದಿ ಈ ಹಿಂದೆ ಗಮನ ಸೆಳೆದಿತ್ತು. ಇದೀಗ ಅದೇ ರೀತಿಯಲ್ಲಿ ಗೋವಾದ ಮಕ್ಕಳು  ಆನ್‌ಲೈನ್ ಕ್ಲಾಸ್‌ಗೆ ಅಟೆಂಡ್ ಆಗಲು ನಿತ್ಯ ಪರ್ವತ ಪ್ರದೇಶಕ್ಕೆ ಟ್ರೆಕ್ಕಿಂಗ್ ಮಾಡಬೇಕಾದ ಪರಿಸ್ಥಿತಿದೆ. 

ಮೇ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯೂ ವಿಭಾಗದ ವಿದ್ಯಾರ್ಥಿಯಾಗಿದ್ದ ಶ್ರೀರಾಮ ಹೆಗಡೆ ಅವರು ಇಂಟರ್ನೆಟ್ ಸಿಗ್ನಲ್‌ಗಾಗಿ ತಮ್ಮ ಊರಿನ ಮರ ಏರಿದ್ದು ದೊಡ್ಡ ಸುದ್ದಿಯಾಗಿತ್ತು.

Latest Videos

undefined

ಆನ್‌ಲೈನ್‌ ಕ್ಲಾಸ್‌ಗಾಗಿ 15 ಅಡಿ ಎತ್ತರದ ಮರ ಏರುವ ವಿದ್ಯಾರ್ಥಿ! 

ಇದೆಲ್ಲವೂ ಕೊರೊನಾ ಪರಿಣಾಮ ಎಂದು ಹೇಳದೇ ವಿಧಿಯಿಲ್ಲ.  ಕೊರೊನಾ ಸಾಂಕ್ರಮಿಕ ನಮ್ಮಲ್ಲಿ ನ್ಯೂ ನಾರ್ಮಲ್  ಪರಿಸ್ಥಿತಿಯನ್ನು ಸೃಷ್ಟಿಸಿದೆ. ಸೋಂಕಿನಿಂದಾಗಿ ಅನೇಕ ಬದಲಾವಣೆಗಳೂ ಆಗಿವೆ. ಲಾಕ್‌ಡೌನ್ ಜಾರಿಯಾಗ್ತಿದ್ದಂತೆ ಊರು ಬಿಟ್ಟು  ಬಂದಿದ್ದ ಸಹಸ್ರಾರು ಕಾರ್ಮಿಕರು ಮರಳಿ ತಮ್ಮೂರು ಸೇರಿಕೊಂಡ್ರು. ನಗರ, ಪಟ್ಟಣಗಳಲ್ಲಿ ಉದ್ಯೋಗದಲ್ಲಿದ್ದ ಅದೆಷ್ಟೋ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರು. ಇನ್ನು ಐಟಿ-ಬಿಟಿ ಮಂದಿಗೆ ವರ್ಕ್ ಫ್ರಮ್ ಹೋಮ್ ಫಿಕ್ಸ್ ಆಗಿದ್ರೂ, ಗ್ರಾಮೀಣ ಭಾಗದಲ್ಲಿರೋರು ನೆಟ್ ವರ್ಕ್ ಸಮಸ್ಯೆಯಿಂದ ಮರ, ಬೆಟ್ಟ ಗುಡ್ಡ ದಂಥ ಎತ್ತರದ ಪ್ರದೇಶಗಳನ್ನ ಅರಸಿ ಹೋಗುತ್ತಿದ್ದಾರೆ. 

ಕೋವಿಡ್ ಸಮಯದಲ್ಲೂ ತಮ್ಮ ಅಧ್ಯಯನ ಮುಂದುವರೆಸುವ ಮನಸ್ಸು ಮಾಡಿರುವ ವಿದ್ಯಾರ್ಥಿಗಳು, ಪ್ರತಿದಿನ 3 ಕಿ.ಮೀ.ಗೆ ಚಾರಣ ಮಾಡ್ತಿದ್ದಾರೆ.  ದಕ್ಷಿಣ ಗೋವಾ ಜಿಲ್ಲೆಯ ಸಾಂಗುಮ್ ತಾಲ್ಲೂಕಿನಲ್ಲಿ ಬಾಲಕಿಯರು ಸೇರಿದಂತೆ 25 ವಿದ್ಯಾರ್ಥಿಗಳು, ಕಳೆದ ಕೆಲ ತಿಂಗಳಿಂದ ಅಪಾಯವನ್ನು ಲೆಕ್ಕಿಸದೇ ನಿತ್ಯ ಚಾರಣ ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತರ ಗೋವಾ ರಾಜ್ಯದ ಶಾಲೆಗಳನ್ನ ಮುಚ್ಚಿರೋದ್ರಿಂದ ಆನ್ ಲೈನ್ ಶಿಕ್ಷಣವನ್ನ ಒದಗಿಸಲಾಗುತ್ತಿದೆ. ಆನ್ ಲೈನ್ ಕ್ಲಾಸ್ ಗೆ ಸ್ಮಾರ್ಟ್ ಫೋನ್, ಇಂಟರ್ನೆಟ್ ಸಂಪರ್ಕ ಅತ್ಯವಶ್ಯಕ. ಹೀಗಾಗಿ ಪಣಜಿ ಮಕ್ಕಳ ಬಳಿ ಪೋನ್ ಇದ್ದರೂ ಇಂಟರ್ನೆಟ್ ಸಮಸ್ಯೆ ಕಾಡುತ್ತಿದೆ.

ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ

ಪಣಜಿಯಿಂದ ದಕ್ಷಿಣಕ್ಕೆ ಸುಮಾರು 100 ಕಿ.ಮೀ ದೂರದಲ್ಲಿರುವ ಸಾಂಗುಮ್ ತಾಲ್ಲೂಕಿನ ಕುಮಾರಿ ಮತ್ತು ಪತ್ರೆಯಂತಹ ಹಳ್ಳಿಗಳ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳಿಗೆ ಬಲವಾದ ನೆಟ್ ವರ್ಕ್ ಸಂಪರ್ಕ ವನ್ನು‌ ಹುಡುಕುತ್ತಾ ಹೋಗುತ್ತಾರೆ. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ನೇತ್ರಾವಳಿ ವನ್ಯಜೀವಿ ಅಭಯಾರಣ್ಯದೊಳಗಿನ ಕುಮಾರಿ ಬೆಟ್ಟದ ತುದಿಯನ್ನು ತಲುಪಲು ನಿತ್ಯ 3 ಕಿ.ಮೀ. ನಡೆದೇ ಸಾಗುತ್ತಾರೆ.

ನಾವು ದಿನಾ ಬೆಳಗ್ಗೆ 8.10 ರ ಹೊತ್ತಿಗೆ ಇಲ್ಲಿಗೆ ಬಂದು  ತರಗತಿಗಳು ಮುಗಿದ ನಂತರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಮನೆಗೆ ಮರಳುತ್ತೇವೆ ಅಂತಾರೆ ವೆರ್ನಾ ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಿಮಾ ಎಕ್ಡೋ. ವನ್ಯಜೀವಿ ಅಭಯಾರಣ್ಯದ ಒಳಗೆ ಬೆಟ್ಟದ ಬಂಜರು ಪ್ರಸ್ಥಭೂಮಿಯಲ್ಲಿರೋ ಬಂಡೆಗಳ ಮೇಲೆ ಕುಳಿತುಕೊಳ್ಳುತ್ತಾರೆ. ಒಂದು ವೇಳೆ ಮಳೆ ಬಂದ್ರೆ  ಮಾವು ಛತ್ರಿಗಳನ್ನು ಬಳಸುತ್ತೇವೆ. ಆದ್ರೆ ಮತ್ತೆ ಕ್ಲಾಸ್ ಗೆ ಅಟೆಂಟ್ ಆಗಲು ಮಳೆ ನಿಲ್ಲುವವರೆಗೆ ಕಾಯಬೇಕಾಗಿದೆ ಎಂದು ಎಕ್ಡೋ ಹೇಳುತ್ತಾಳೆ.

ಇನ್ನು ಈ ಬೆಟ್ಟದಲ್ಲಿ ನಾವು ಹೆಚ್ಚಾಗಿ ಹಾವುಗಳನ್ನು ನೋಡಿದ್ದೇವೆ ಎಂದು  ಕ್ವಿಪೆಮ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ ಗಾಂವ್ಕರ್ ಹೇಳುತ್ತಾರೆ. ಆದ್ರೆ ನಮಗಿಲ್ಲಿ ಬರದೇ ಬೇರೆ ದಾರಿಯಿಲ್ಲ.ಆನ್ ಲೈನ್ ಕ್ಲಾಸ್ ಮಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತಾರೆ ಪವಿತ್ರಾ. ಜಿಲ್ಲಾಡಳಿತದ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದ್ರೆ,  ಈ ಪ್ರದೇಶದ ಎಲ್ಲಾ ಬಿಎಸ್‌ಎನ್‌ಎಲ್ ಟವರ್ ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿದೇವೆ.ಈಗಾಗಲೇ ವಿದ್ಯಾರ್ಥಿಗಳಿಗೆ ಆಗುತ್ತಿರುವ ಇಂಟರ್ನೆಟ್ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಳ‌ ಸಭೆಯಲ್ಲಿ ಚರ್ಚಿಸಲಾಗಿದೆ ಅಂತ ಹೇಳುತ್ತಾರೆ.

ನಿವೃತ್ತಿಯ ಬಳಿಕವೂ ವಿದ್ಯಾದಾನ ಮಾಡುತ್ತಿರುವ ಪ್ರಿನ್ಸಿಪಾಲ್‌ಗೊಂದು ಸಲಾಂ

click me!