
ಹಾವೇರಿ, (ಆ.10): ಫೇಲಾದ್ರೆ SSLCನೇ ಕೊನೆ ಅಲ್ಲ. ಇನ್ನೂ ಕಿಡ್ನಿ, ಹಾರ್ಟ್ ಎಲ್ಲಾ ಇದಾವಲ್ಲ ಅವು ಫೇಲಾಗೋ ವರೆಗೂ ದುಡಿಮೆಗೆ ಸಾವಿರ ದಾರಿ ಇವೆ ದೈರ್ಯವಾಗಿರಿ ಎಂದು ಹೇಳುತ್ತಾ.
ಇಂದು (ಸೋಮವಾರ) ಪ್ರಕಟವಾದ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಫೇಲ್ ಆಗಿದ್ದಕ್ಕೆ ಹಾವೇರಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರಗಳು: ಇವರೇ ಕರ್ನಾಟಕ SSLC ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು
ಹಾವೇರಿ ನಗರದ ದ್ಯಾಮವ್ವನಗುಡಿ ಓಣಿಯ ವೈಷ್ಣವಿ ರಿತ್ತಿ (16) ಬ್ಯಾಡಗಿ ತಾಲ್ಲೂಕಿನ ಕಾಶಂಬಿ ಗ್ರಾಮದ ಭಾರತಿ ಕೋಟಿ (16) ಆತ್ಮಹತ್ಯೆಗೆ ಶರಣಾಗಿದ್ದಾರೆ
ನಗರದ ದ್ಯಾಮವ್ವನ ಗುಡಿ ಓಣಿಯಲ್ಲಿ ವಿದ್ಯಾರ್ಥಿನಿ ವೈಷ್ಣವಿ ರಿತ್ತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿನಿ ಬ್ಯಾಡಗಿ ತಾಲೂಕು ಕಾಶಂಬಿ ಗ್ರಾಮದವಳಾಗಿದ್ದು ಕಡಿಮೆ ಅಂಕ ಬಂದಿದೆ ಎಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಗಣಿತ ವಿಷಯಲ್ಲಿ ಫೇಲಾಗಿದ್ದಳು ಎನ್ನಲಾಗಿದ್ದು. ಇದರಿಂದ ಮನನೊಂದ ವಿದ್ಯಾರ್ಥಿನಿ ದ್ಯಾಮವ್ವನ ಗುಡಿ ಓಣಿಯಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಬಾಲಕಿ ಒದ್ದಾಟವನ್ನು ಗಮನಿಸಿದ ಸ್ಥಳೀಯರು ಬಾಲಕಿಯನ್ನು ರಕ್ಷಿಸಿ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.
ಕೇವಲ ಅಂಕಗಳೇ ಪ್ರತಿಭೆಯ ಮಾನದಂಡವಲ್ಲ. ಧೃತಿಗೆಡದೆ ಸಕಾರಾತ್ಮಕವಾಗಿ ಮುಂದಿನ ಹೆಜ್ಜೆಯಿಡಿ.