ಸಾಮಾಜಿಕ ಅಂತರ ಕಾಪಾಡುವಲ್ಲಿ PUC ವಿದ್ಯಾರ್ಥಿಗಳನ್ನು ಮೀರಿಸಿದ SSLC ಮಕ್ಕಳು!

By Suvarna News  |  First Published Jun 27, 2020, 11:36 AM IST

ಕೊರೋನಾ ಸೋಂಕು ಹರಡುವ ಆತಂಕ, ಭೀತಿಯ ನಡುವೆ ಗುರುವಾರದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಿರೀಕ್ಷೆಗೂ ಮೀರಿ ಶೇ.98.3ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದು, ಮಾಸ್ಕ್‌ ಧರಿಸುವಿಕೆಯ ಸಣ್ಣ ಕಿರಿ-ಕಿರಿಯ ನಡುವೆ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸುಸೂತ್ರವಾಗಿ ಪರೀಕ್ಷೆ ಬರೆದಿದ್ದಾರೆ. 


ಬೆಂಗಳೂರು (ಜೂ. 27): ಕೊರೋನಾ ಸೋಂಕು ಹರಡುವ ಆತಂಕ, ಭೀತಿಯ ನಡುವೆ ಗುರುವಾರದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಿರೀಕ್ಷೆಗೂ ಮೀರಿ ಶೇ.98.3ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದು, ಮಾಸ್ಕ್‌ ಧರಿಸುವಿಕೆಯ ಸಣ್ಣ ಕಿರಿ-ಕಿರಿಯ ನಡುವೆ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸುಸೂತ್ರವಾಗಿ ಪರೀಕ್ಷೆ ಬರೆದಿದ್ದಾರೆ. 

ಕೊರೋನಾ ಭೀತಿಯ ನಡುವೆಯೂ ಇಷ್ಟುವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದರೊಂದಿಗೆ ಮೊದಲ ದಿನದ ಪರೀಕ್ಷೆಯಲ್ಲಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಭರ್ಜರಿ ಯಶಸ್ಸು ಕಂಡಂತಾಗಿದೆ.

Tap to resize

Latest Videos

undefined

ರಾಜ್ಯಾದ್ಯಂತ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ಕೊಠಡಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್‌ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ, ಮಾಸ್ಕ್‌ ಧರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಪರೀಕ್ಷಾ ಕೊಠಡಿಗೆ ಪ್ರವೇಶ ಕಲ್ಪಿಸಲಾಗಿದೆ. 

ಮಂಗಳೂರಿನ ಚಿತ್ರಣ ನೋಡುವುದಾದರೆ ವಿದ್ಯಾರ್ಥಿಗಳೆಲ್ಲರೂ ನಹಳ ಶಿಸ್ತಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮಾಸ್ಕ್ ಧರಿಸಿ, ಸುರಕ್ಷಿತಾ ಕ್ರಮಗಳೊಂದಿಗೆ ಪರೀಕ್ಷೆ ಬರೆಯುತ್ತಿದ್ದಾರೆ. ಕೇರಳದ ವಿದ್ಯಾರ್ಥಿಗಳೂ ಇಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ. ಪಿಯುಸಿ ಪರೀಕ್ಷಾ ವೇಳೆಯಲ್ಲಿ ಆದ ಅವಾಂತರಗಳಿಂದ ಪಾಠ ಕಲಿತಿದ್ದು ವಿದ್ಯಾರ್ಥಿಗಳು ಎಚ್ಚೆತ್ತುಕೊಂಡಿದ್ದಾರೆ. 

"

ಬಳ್ಳಾರಿಯ ಚಿತ್ರಣ ನೋಡುವುದಾದರೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಬಹಳ ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಸಾಮಾಜಾಕಿ ಅಂತರವಿರಲಿ, ಮಾಸ್ಕ್ ಇರಲಿ ಎಲ್ಲವನ್ನೂ ಸರ್ಕಾರದ ನಿಯಮದಂತೆ ಪಾಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸುತ್ತಿದ್ದಾರೆ.

ಬೆಂಗಳೂರಿನ ಚಿತ್ರಣ ನೋಡುವುದಾರೆ ಇಲ್ಲಿಯೂ ಕೂಡಾ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಮಕ್ಕಳು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುತ್ತಿದ್ದಾರೆ. 

"

"

ಇಂದು ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಶಾಲೆಗಳಿಗೆ 7115 ಧರ್ಮಲ್ ಸ್ಕ್ಯಾನರ್ ಒದಗಿಸಿದೆ. ವಿದ್ಯಾರ್ಥಿಗಳು ನಿಯಮಗಳನ್ನು ಪಾಲಿಸುತ್ತಿದ್ದಾರೆ. 

"

ರಾಜ್ಯದ 2879 ಕೇಂದ್ರಗಳಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ವಿದ್ಯಾರ್ಥಿಗಳಿಗೆ 12 674 ಉಚಿತ ಬಸ್‌ ವ್ಯವಸ್ಥೆ ಕೂಡಾ ಮಾಡಿದೆ. 

"

ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಜ್ವರ, ಕೆಮ್ಮು, ನೆಗಡಿ ಇದ್ದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. 

"

ರಾಜಾಜಿನಗರದ ಪರೀಕ್ಷಾ ಕೇಂದ್ರದಲ್ಲಿ ಸಿದ್ಧತೆ ಹೇಗಿದೆ ಎಂಬುದರ ಬಗ್ಗೆ ವರದಿ ಇಲ್ಲಿದೆ ನೋಡಿ..!

 

 

 

click me!