ಡಿಪ್ಲೋಮಾ ಅಂತಿಮ ಸೆಮಿಸ್ಟರ್ ಪರೀಕ್ಷೆ ದಿನಾಂಕ ಪ್ರಕಟ

Published : Jul 14, 2020, 05:28 PM ISTUpdated : Jul 14, 2020, 05:29 PM IST
ಡಿಪ್ಲೋಮಾ ಅಂತಿಮ ಸೆಮಿಸ್ಟರ್ ಪರೀಕ್ಷೆ ದಿನಾಂಕ ಪ್ರಕಟ

ಸಾರಾಂಶ

ಈಗಾಗಲೇ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಡಿಪ್ಲೋಮಾ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆಸಲು ದಿನಾಂಕವನ್ನು ಘೋಷಣೆ ಮಾಡಿದೆ.

ಬೆಂಗಳೂರು, (ಜುಲೈ.14):  ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಕೆ ಡಿಪ್ಲೋಮಾ ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಸೆಪ್ಟೆಂಬರ್ 7 ರಿಂದ 28ರವರೆಗೂ ನಡೆಸುವುದಾಗಿ ತಿಳಿಸಿದೆ. 

ಬ್ಯಾಕ್‌ಲಾಗ್ ಪರೀಕ್ಷೆಗಳನ್ನೂ ಕೂಡ ಅದೇ ದಿನವೇ ನಡೆಸುವುದಾಗಿಯೂ ಇಲಾಖೆ ತಿಳಿಸಿದೆ. ಪರೀಕ್ಷೆ ಕುರಿತ ವಿವರಗಳನ್ನು ಇಲಾಖೆಯು ವೆಬ್ ಪೋರ್ಟಲ್ ಮತ್ತು www.dtek.karnataka.gov.in, ನಲ್ಲಿ ತಿಳಿಸಿದೆ. 

ಕರ್ನಾಟಕದಲ್ಲಿ ಇಂಜಿನಿಯರಿಂಗ್, ಪದವಿ, ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆ ರದ್ದು

ಪರೀಕ್ಷೆಗಳನ್ನು ಈ ಹಿಂದೆ ಜು.15ರಿಂದ ಆಗಸ್ಟ್ 8ರವರೆಗೂ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಲಾಕ್‌ಡೌನ್ ಪರಿಣಾಮ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಪರೀಕ್ಷೆ ಬರೆಯಲು ಇಲಾಖೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಹತ್ತಿರ ಇರುವ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ. 

ಈಗಾಗಲೇ ಪ್ರಾಕ್ಟಿಕಲ್ ಎಕ್ಸಾಮ್ ಗಳನ್ನು ರದ್ದುಗೊಳಿಸಲಾಗಿದ್ದು, ಒಂದು ವೇಳೆ ಅನಾರೋಗ್ಯದಿಂದಾಗಿ ಅಥವಾ ಕೊರೋನಾ ಲಕ್ಷಣಗಳಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಹೋದಲ್ಲಿ ಮುಂದೆ ಬರೆಯುವ ಪರೀಕ್ಷೆಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಈ ವೇಳೆ ಮೊದಲ ಬಾರಿ ಬರೆದ ಪರೀಕ್ಷೆಯೆಂದೇ ಅದನ್ನು ಪರಿಗಣಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಇಲಾಖೆ ತಿಳಿಸಿದೆ. 

ಕರ್ನಾಟಕದಲ್ಲಿ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

ಈ ನಡುವೆ ಎರಡನೇ ಹಾಗೂ ನಾಲ್ಕನೆ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು, ಹಿಂದಿನ ಸೆಮಿಸ್ಟರ್ ಗಳಲ್ಲಿ ಬರೆದ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತದೆ.

ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ