NEET ಹಾಗೂ JEE ಪರೀಕ್ಷೆ ಬಗ್ಗೆ ಹುಟ್ಟಿಕೊಂಡಿರುವ ಗೊಂದಲಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸ್ಪಷ್ಟನೆ ಕೊಟ್ಟಿದೆ.
ನವದೆಹಲಿ, (ಆ.23) : ನಿಗದಿಯಂತೆ ಕೊರೋನಾ ಸಂಕಷ್ಟದ ನಡುವೆಯೂ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ NEET ಹಾಗೂ JEE ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಕೊರೋನಾ ಕಾರಣದಿಂದಾಗಿ ಮುಂದೂಡಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸ್ಪಷ್ಟಪಡಿಸಿದೆ.
ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಪ್ರವೇಶಕ್ಕಾಗಿ ನಡೆಸುವಂತ ಎನ್‌ಇಇಟಿ ಪರೀಕ್ಷೆ ಇದೇ ಸೆಪ್ಟೆಂಬರ್.13ಕ್ಕೆ ನಡೆಯಲಿದೆ. ಸೆಪ್ಟೆಂಬರ್.1 ರಿಂದ 6ರವರೆಗೆ ಜೆಇಇ (ಮೈನ್) ಪರೀಕ್ಷೆಗಳು ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ.
undefined
ನೀಟ್, ಜೆಇಇ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ: ಪರೀಕ್ಷೆಗಳು ನಡೆಯಲಿವೆ ಯಥಾ ಪ್ರಕಾರ
ಈ ಹಿಂದೆ ಮೇ, ಜುಲೈ ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳು ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈ ಬಳಿಕವೂ ಪರೀಕ್ಷೆ ಮುಂದೂಡುವಂತೆ ವಿವಿಧ ರಾಜ್ಯಗಳ 11 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ಆಗಸ್ಟ್ 17ರಂದು ನ್ಯಾಯಪೀಠ ತಿರಸ್ಕರಿಸಿತ್ತು. ಈ ಬಳಿಕ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತೆ ಮುಂದೂಡಲ್ಲ ಎಂದು ತಿಳಿಸಿದೆ.