ಅಕ್ಟೋಬರ್ 15 ರಿಂದ ಕಾಲೇಜು ಆರಂಭ; ವ್ಯವಸ್ಥೆಯಲ್ಲಿ ಕೆಲ ಬದಲಾವಣೆ

Published : Aug 07, 2020, 04:56 PM IST
ಅಕ್ಟೋಬರ್ 15 ರಿಂದ ಕಾಲೇಜು ಆರಂಭ; ವ್ಯವಸ್ಥೆಯಲ್ಲಿ ಕೆಲ ಬದಲಾವಣೆ

ಸಾರಾಂಶ

ಅಕ್ಟೋಬರ್ 15  ರಿಂದ ಕಾಲೇಜುಗಳು ಆರಂಭ/ ಕಾಲೇಜು ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಆಂಧ್ರ ಪ್ರದೇಶ/ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಜಗನ್ ಮೋಹನ್ ರೆಡ್ಡಿ

ಅಮರಾವತಿ(ಆ.  07) ಆಂಧ್ರಪ್ರದೇಶದಲ್ಲಿ ಅಕ್ಟೋಬರ್ 15 ರಿಂದ ಕಾಲೇಜುಗಳು ತೆರೆಯಲಿವೆ.  ಸಭೆ ನಡೆಸಿದ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ  ಒಂದು ಮಾರ್ಗದರ್ಶಿ ಸೂತ್ರ ಸಿದ್ಧಮಾಡಿದ್ದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಂದಲೂ ಅಭಿಪ್ರಾಯ ಕೇಳಿದ್ದಾರೆ.

ಕೊರೋನಾ ಕಾರಣಕ್ಕೆ ಶಾಲೆ, ಕಾಲೇಜು ಸೇರಿ ಎಲ್ಲ ಶಿಕ್ಷಣ ಸಂಸ್ಥೆಗಳು ಈ ವರ್ಷದ ಮಾರ್ಚ್ ನಿಂದಲೇ ಬಂದ್ ಆಗಿವೆ. ದಾಖಲಾತಿ ಸಂಖ್ಯೆಉನ್ನು ಶೇ.  90ಕ್ಕೆ ಹೆಚ್ಚಳ ಮಾಡಬೇಕು ಎಂದಿರುವ ರೆಡ್ಡಿ ಯುನಿವರ್ಸಿಟಿಗಳಲ್ಲಿನ ಅಸಿಸ್ಟಂಟ್ ಪ್ರೊಫೆಸರ್ ನೇಮಕಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ವಿವಿಧ ಹುದ್ದೆಗಳಿಗೆ ಕೆಪಿಎಸ್ಸಿ ನೇಮಕಾತಿ, ವಿವರ

ಮೂರು ಅಥವಾ ನಾಲ್ಕು ವರ್ಷದ ಕೋರ್ಸಗೆ ಜಾಯಿನ್ ಆಗುವ ವಿದ್ಯಾರ್ಥಿಗಳು ಹತ್ತು ತಿಂಗಳ ಅಪ್ರೆಂಟಿಸ್‌ಶಿಪ್ ಗೂ ಜಾಯಿನ್ ಆಗಬೇಕು ಎಂದು ತಿಳಿಸಿದ್ದಾರೆ. 

ಅಪ್ರೆಂಟಿಸ್‌ಶಿಪ್ ಮುಗಿದ ಮೇಲೆ ಜೌದ್ಯಮಿಕ ಮತ್ತು ಕೌಶಲ್ಯಾಭಿವೃದ್ಧಿ ಕೋರ್ಸ್ ಗೆ ದಾಖಲು ಮಾಡಿಕೊಳ್ಳಬೇಕು ಎಂದು ಹೇಳಿದ್ದು ಈ ಕುರಿತು ಘಟಕ ಒಂದನ್ನು ರಚಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. 

ಬಿಎ,  ಬಿಕಾಂ ಮತ್ತು ಬಿಎಸ್‌ಸಿ ಗೆ ದಾಖಲಾಗುವ ಸಮಯದಲ್ಲಿಯೇ ವಿದ್ಯಾರ್ಥಿ ಮುಂದೆ ಆಯ್ಕೆ ಇಡಲಾಗುತ್ತಿದ್ದು ಜನರಲ್ ಡಿಗ್ರಿ ಅಥವಾ ಗೌರವ ಪದಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಬದಲಾವಣೆಯನ್ನು ಮುಂದೆ ಇಟ್ಟಿದ್ದಾರೆ.

ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿರುವ ಜಗನ್ ಪಡೆರುನಲಲ್ಲಿ ಬುಡಕಟ್ಟು  ಜನಾಂಗಕ್ಕೆ ಕಾಲೇಜು ತೆರೆಯಲು ಅನುಮತಿ ನೀಡಿದ್ದಾರೆ. 

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ