ಇನ್ನೆರೆಡು ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪ್ರಕಟವಾಗುವ ಸಾಧ್ಯತೆಗಳಿದ್ದು, ರಿಸಲ್ಟ್ ಏನಾಗುತ್ತೋ ಎನ್ನುವ ತಳಮಳ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಎಸ್ಎಸ್‌ಎಲ್‌ಸಿ ಫಲಿತಾಂಶವನ್ನು ನೋಡುವುದೇಗೆ? ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.
ಬೆಂಗಳೂರು, (ಆ.05): ಕೊರೋನಾ ಭೀತಿ ನಡುವೆಯೇ ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಜು.25ರಿಂದ ಆರಂಭಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವುದೇ ಅಡಚಣೆಯಿಲ್ಲದೆ ಸುಸೂತ್ರವಾಗಿ ನಡೆದಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದಾರೆ.
1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ..!
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಹಿಂದೆ ಹೇಳಿದಂತೆ ಆಗಸ್ಟ್ 10ರೊಳಗೆ ಎಸ್‌ಎಸ್‌ಲ್‌ಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.
ಅವರು ಹೇಳಿದಂತೆ ಇನ್ನೆರೆಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆಗಳಿದ್ದು, ರಿಸಲ್ಟ್ ಏನಾಗುತ್ತೋ ಎನ್ನುವ ತಳಮಳ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಎಸ್ಎಸ್‌ಎಲ್‌ಸಿ ಫಲಿತಾಂಶವನ್ನು ನೋಡುವುದೇಗೆ? ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.
ಪರೀಕ್ಷಾ ಫಲಿತಾಂಶ ನೋಡೋದು ಹೇಗೆ?:
ಸ್ಟೆಪ್ 1: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ವೆಬ್‌ಸೈಟ್ http://kseeb.kar.nic.in/ ಅಥವಾ http://karresults.nic.in./ ಗೆ ಹೋಗಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಮೂಡುವ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
ಸ್ಟೆಪ್ 3: ಆ ನೋಟಿಫಿಕೇಶನ್‌ನಲ್ಲಿ ಕರ್ನಾಟಕ ಎಸ್ಎಸ್‌ಎಲ್‌ಸಿ ಫಲಿತಾಂಶ 2019ರ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಲ್ಲಿ ಕೇಳಿರುವ ಜಾಗದಲ್ಲಿ ನಿಮ್ಮ ರೋಲ್ ನಂಬರ್, ಜನ್ಮ ದಿನಾಂಕ ಹಾಗೂ ಇನ್ನಿತರೆ ಕೇಳಲಾಗಿರುವ ಮಾಹಿತಿಗಳನ್ನು ನಮೂದಿಸಿ ಸ್ಟೆಪ್ 5: ನಂತರ Submit Button ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6: ರಿಸಲ್ಟ್ ಪ್ರತಿಯನ್ನು ಪ್ರಿಂಟೌಟ್ ತೆಗೆದುಕೊಳ್ಳಿ