ಸರಕಾರ ರದ್ದುಗೊಳಿಸಿದರೂ ಕ್ರೈಸ್ಟ್ ವಿವಿಯಿಂದ ಪರೀಕ್ಷೆ: ವಿದ್ಯಾರ್ಥಿಗಳ ಆಕ್ರೋಶ

By Suvarna NewsFirst Published Jul 11, 2020, 7:22 PM IST
Highlights

ಕೊರೋನಾ ವೈರಸ್ ಕಾರಣ ಕರ್ನಾಟಕದಲ್ಲಿ ಪದವಿ, ಡಿಪ್ಲೋಮಾ ಉನ್ನತ ವ್ಯಾಸಂಗ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿತ್ತು. ಅಂತಿಮ ವರ್ಷ ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ ಎಂದಿತ್ತು. ಇದೀಗ ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಸರ್ಕಾರದ ಆದೇಶ ದಿಕ್ಕಿಸಿದ ಕಾಲೇಜಿನ ವಿರುದ್ಧ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಜು.11): ಡಿಗ್ರಿ, ಡಿಪ್ಲೋಮಾ, ಎಂಜಿನಿಯರಿಂಗ್, ಉನ್ನತ ವ್ಯಾಸಾಂಗ ಸೇರಿದಂತೆ ಕೊರೋನಾದಿಂದ ಬಾಕಿ ಉಳಿದಿದ ವಿದ್ಯಾರ್ಥಿಗಳ ಪರೀಕ್ಷೆ ಕುರಿತು ಕರ್ನಾಟಕ ಸರ್ಕಾರ ಶುಕ್ರವಾರ(ಜು.10) ಮಹತ್ವದ ಆದೇಶ ನೀಡಲಾಗಿತ್ತು. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಇನ್ನುಳಿದವರಿಗೆ ಪರೀಕ್ಷೆ ಇಲ್ಲ ಎಂದಿತ್ತು. ಆದರೆ ಸರ್ಕಾರದ ಆದೇಶದ ಬೆನ್ನಲ್ಲೇ ಕ್ರೈಸ್ಟ್ ಯುನಿವರ್ಸಿಟಿ ಬೆಂಗಳೂರು ಪರೀಕ್ಷೆ ನಡೆಸಲು ಮುಂದಾಗಿದೆ. ಇದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಕ್ಯಾನ್ಸಲ್, ಡೈರೆಕ್ಟ್ ಪಾಸ್: ಆದೇಶ ಹೊರಡಿಸಿದ ಸರ್ಕಾರ..!.

ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಮುಗಿಸಲು ಸರ್ಕಾರ ಆದೇಶ ನೀಡಿದೆ. ಆದರೆ ಕ್ರೈಸ್ಟ್ ಯುನಿವರ್ಸಿಟಿ ಇದೀಗ ಜುಲೈ 13 ರಿಂದ ಆನ್‌ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಇದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ಇನ್ನು ಎರಡು ದಿನ ಮಾತ್ರ ಇರುವುದು. ಆದೇಶ ದಿಕ್ಕರಿಸಿ ಪರೀಕ್ಷೆ ನಡೆಸುವುದು ಸಮಂಜಸವಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಕ್ರೈಸ್ಟ್ ಕಾಲೇಜಿನಲ್ಲಿ ದೇಶ ವಿದೇಶದ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಇವರಲ್ಲಿ ಹಲವರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇನ್ನು ಹಲವು ವಿದ್ಯಾರ್ಥಿಗಳ ಪೋಷಕರಿಗೆ ಕೊರೋನಾ ತಗುಲಿದೆ. ಸದ್ಯ ಪರೀಕ್ಷೆ ನಡೆಸುವ ಪೂರಕ ವಾತಾವರಣವಿಲ್ಲ ಎಂದು ವಿದ್ಯಾರ್ಥಿಗಳು ಕ್ರೈಸ್ಟ್ ನಿರ್ಧಾರದ ವಿರುದ್ಧ ಗರಂ ಆಗಿದ್ದಾರೆ. ಹೀಗಾಗಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೊರೋನಾ ಕಾಟ: 'ಅಗ್ರಿಕಲ್ಚರಲ್ ಪಿಹೆಚ್‌ಡಿ, ಎಂಎಸ್‌ಸಿ, ಡಾಕ್ಟರೇಟ್‌ ಪರೀಕ್ಷೆ ಮುಂದೂಡಿಕೆ

ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದವರಿಗೆ ಆತಂರಿಕ ಅಂಕ 50:50 ಹಾಗೂ ಹಿಂದಿನ ಸೆಮಿಸ್ಟರ್ ಪರೀಕ್ಷೆಯ ಸರಾಸರಿ ಅಂಕದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಸರ್ಕಾರ ಸೂಚಿಸಿತ್ತು. ಆದರೆ ಕ್ರೈಸ್ಟ್ ಯುನಿವರ್ಸಿಟಿ ಸರ್ಕಾರದ ಈ ಆದೇಶ ಪಾಲಿಸುತ್ತಿಲ್ಲ. ಇದರ ಬದಲು ಆನ್‌ಲೈನ್ ಎಕ್ಸಾಂ ನಡೆಸುತ್ತಿದೆ ದಿಢೀರ್ ಪರೀಕ್ಷೆ ದಿನಾಂಕ ಪ್ರಕಟಿಟಿಸಿ ವಿದ್ಯಾರ್ಥಿಗಳಲ್ಲಿ ಕಾಲೇಜು ಆತಂಕ ಸೃಷ್ಟಿಸಿದೆ. ಆದೇಶ ಪಾಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

4ನೇ ಸೆಮಿಸ್ಟರ್ ಪರೀಕ್ಷೆ ಮಾರ್ಚ್ ತಿಂಗಳಲ್ಲಿ ನಡೆಯಬೇಕಿತ್ತು. ಲಾಕ್‌ಡೌನ್ ಕಾರಣ ಮೇ ತಿಂಗಳಿಗೆ ಮುಂಗೂಡಲಾಗಿತ್ತು. ಬಳಿಕ ಜೂನ್ ಇದೀಗ ಸರ್ಕಾರದ ಆದೇಶ ಬಂದ ಮರುದಿನ ಜುಲೈ 13 ರಿಂದ ಪರೀಕ್ಷೆ ಎಂದು ಕ್ರೈಸ್ಟ್ ಯುನಿವರ್ಸಿಟಿ ಘೋಷಿಸಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ವಿದ್ಯಾರ್ಥಿಗಳು ಬೇರೆ ಬೇರೆ ಭಾಗಗಳಲಿ ಸಿಲುಕಿಕೊಂಡಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸಲು ಪುಸ್ತಕಗಳು ಒಂದೊಂದು ಕಡೆ ಇವೆ. ಹೀಗಾಗಿ ಪರೀಕ್ಷೆ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕ್ರೈಸ್ಟ್ ವಿವಿಯೂ ಸ್ವಾಯತ್ತ ಸಂಸ್ಥೆಯಾಗಿದ್ದು, ಸರಕಾರ ನೀಡಿದ ಆದೇಶದಲ್ಲಿ ಡೀಮಡ್ ವಿವಿಗೂ ಅನ್ವಯವಾಗುತ್ತದೆ, ಎಂದು ಸ್ಪಷ್ಟಪಡಿಸಲಾಗಿದೆ. ಬಹಳಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನೀಡಲು ಸಮಂಜಸವಾದ ವಾತವಾರಣವಿಲ್ಲ. ಅಲ್ಲದೇ ಹಲವು ಮಂದಿ ಸಾಕಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿಕೊಂಡಿದ್ದು, ಇಂಥ ಸಂದರ್ಭದಲ್ಲಿಯೂ ಕಾಲೇಜು ಆಡಳಿತ ಮಂಡಳಿ ತೆಗೆದುಕೊಂಡು ನಿರ್ಧಾರ ಸರಿ ಇಲ್ಲ ಎಂಬುವುದು ವಿದ್ಯಾರ್ಥಿಗಳು, ಪೋಷಕರ ಆಕ್ರೋಶ. 

click me!