ಕೆಲಸದ ಇಂಟರ್‌ವ್ಯೂ ಎಂದರೆ ತಮಾಷೇನಾ?

By Web Desk  |  First Published Jul 7, 2019, 3:24 PM IST

ಕೆಲಸ ಪಡೆಯಲು ಇರುವ ಒಂದು ಮುಖ್ಯ ಸವಾಲೆಂದರೆ ಇಂಟರ್ ವ್ಯೂ ಎದುರಿಸುವುದು. ಹೆಚ್ಚಿನ ಜನ ಎಡವಿ ಬೀಳುವುದೂ ಇಲ್ಲೇ... ಅದಕ್ಕಾಗಿ ಇಂಟರ್ ವ್ಯೂ ಟೆಕ್ನಿಕ್‌ಗಳನ್ನು ನೀವು ತಿಳಿದಿರಬೇಕು. 


ವಿಕಾಸದತ್ತ ಸಾಗುತ್ತಿರುವ ಭಾರತದ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗವಕಾಶಗಳೂ ಹೆಚ್ಚಿವೆ. ಕೆಲಸಕ್ಕೆ ತಕ್ಕಂತೆ ವಿದ್ಯಾಭ್ಯಾಸ ಹೊಂದಿದ್ದು ಇಂಟರ್ ವ್ಯೂ ಉತ್ತಮವಾಗಿ ಮಾಡಿದರೆ ಮಾತ್ರ ಬೇಗ ಕೆಲಸ ಸಿಗುತ್ತದೆ. ಡಿಗ್ರಿ, ಡಬಲ್ ಡಿಗ್ರಿ ಮಾಡಿದರೂ ಕೆಲಸ ಸಿಗದೇ ಇರಲು ಕಾರಣ ಇಂಟರ್‌ ವ್ಯೂ ಚೆನ್ನಾಗಿ ಮಾಡದೇ ಇರುವುದು. 

ಇಲ್ಲಿ ಇಂಟರ್ ವ್ಯೂ ಎದುರಿಸುವ ಮುನ್ನ ಏನೇನು ಮಾಡಬೇಕು? ಯಾವುದನ್ನೂ ನೆನಪು ಮಾಡಬೇಕು ಅನ್ನೋದನ್ನು ಹೇಳುತ್ತೇವೆ... ಇಲ್ ಕೇಳಿ...

Tap to resize

Latest Videos

ಚೆನ್ನಾಗಿ ಮಾತನಾಡೋರಿಗೆ ಈ ಕೆಲಸ ಬೆಸ್ಟ್....

ನಿಮ್ಮನ್ನು ನೀವು ತಿಳ್ಕೊಳಿ 

undefined

ಮೊದಲಿಗೆ ನಿಮ್ಮನ್ನು ನೀವು ಸರಿಯಾಗಿ ತಿಳಿದುಕೊಳ್ಳಿ. ಜೀವನದಿಂದ ನಿಜವಾಗಿ ಬೇಕಾಗಿರೋದು ಏನು? ಯಾವ ರೀತಿಯ ಕೆಲಸ ಮಾಡಲು ನೀವು ಬಯಸುತ್ತೀರಿ? ಯಾವ ಕೆಲಸದ ಇಂಟರ್ ವ್ಯೂಗೆ ಹೋಗುತ್ತೀರಿ ? ಆ ಕೆಲಸಕ್ಕೆ ನೀವು ತಯಾರಾಗಿದ್ದೀರಾ?ಇದೆಲ್ಲಾ ತಯಾರಾಗಿದ್ದು ನಾಳೆ ಇಂಟರ್ ವ್ಯೂ ಗೆ ಹೋಗುತ್ತಿದ್ದರೆ ಗ್ರೂಮಿಂಗ್ ಬಗ್ಗೆ ಗಮನ ಹರಿಸಿ. ಅದಕ್ಕಾಗಿ ಉತ್ತಮ ಡ್ರೆಸ್, ಶೂ, ಧರಿಸಿ. ಒಳ್ಳೆ ಬಾಡಿ ಲಾಂಗ್ವೇಜ್ ಇದ್ದರೆ ಪಾಸಿಟಿವ್ ಅಪಿಯರೆನ್ಸ್ ನಿಮ್ಮದಾಗುತ್ತದೆ. 

ಕಂಪನಿ ಮತ್ತು ಅದರ ಎದುರಾಳಿ ಕಂಪನಿ 

ಇಂಟರ್ ವ್ಯೂಗೆ ಹೋಗೋ ಮುನ್ನ ಕಂಪನಿ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಕಲೆ ಹಾಕಿ. ಜೊತೆಗೆ ಆದರ ಎದುರಾಳಿ ಕಂಪನಿ ಬಗ್ಗೆಯೂ ಮಾಹಿತಿ ಕಲೆ ಹಾಕಿ.  ಇಂಟರ್‌ನೆಟ್ ನಲ್ಲಿ ಎಲ್ಲಾ ಮಾಹಿತಿಯೂ  ಲಭ್ಯವಿರುತ್ತದೆ. ಜೊತೆಗೆ ಕಂಪನಿಯಲ್ಲಿ ಯಾವ ರೀತಿಯ ಕೆಲಸ ಕೊಟ್ಟರೆ ಮಾಡಬಹುದು ಎನ್ನುವುದು ನಿಮಗಿರಲಿ ಸ್ಪಷ್ಟತೆ. 

ಕೆಲಸದಲ್ಲಿ ಏಕಾಗ್ರತೆ ಇಲ್ಲವೇ? ಹೀಗೆ ಮಾಡಿ ನೋಡಿ..

ನಿಮ್ಮ ವಿಶೇಷತೆ ಏನು? 

ಇಂಟರ್‌ವ್ಯೂಗೆ  ನೀವೊಬ್ಬರು ಮಾತ್ರ ಬರೋದಲ್ಲ, ಹಲವರಿರುತ್ತಾರೆ. ಅವರೂ ನಿಮ್ಮಷ್ಟೇ ಅನುಭವ ಮತ್ತು ಓದಿರಬಹುದು. ಹಾಗಾಗಿ ಕೆಲಸ ನಿಮಗೆ ಸಿಗುವ ಖಾತ್ರಿ ಇರೋಲ್ಲ. ಕೆಲಸ ನಿಮಗೆ ಸಿಗಬೇಕಾದರೆ ಮೊದಲಿಗೆ ನಿಮ್ಮ ವಿಶೇಷತೆ ಏನು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನೀವು ಕಂಪನಿಗಾಗಿ ಯಾವ ರೀತಿ ಕೆಲಸ ಮಾಡಬಹುದು? ಹೇಗೆ ಲಾಭ ತಂದು ಕೊಡಬಹುದು ಅನ್ನೋದನ್ನೂ ನೀವು ಅರಿತುಕೊಳ್ಳಬೇಕು. 

ಸೋಷಿಯಲ್ ಮೀಡಿಯಾ 

ಇಂದಿನ ಕಂಪನಿಗಳು ಕೇವಲ ನಿಮ್ಮ ಬಯೋಡೇಟಾ ಮಾತ್ರ ನೋಡಲ್ಲ. ಬದಲಾಗಿ ಸೋಷಿಯಲ್ ಮೀಡಿಯಾ ಚಟುವಟಿಕೆಗಳನ್ನೂ ಗಮನಿಸುತ್ತದೆ. ನಿಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ನಿಮ್ಮ ವ್ಯಕ್ತಿತ್ವ ರಿವೀಲ್ ಆಗುತ್ತೆ ಎಂಬುದನ್ನು ಮರೆಯಬೇಡಿ. ಆದುದರಿಂದ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂಥ ವಿಷಯವಿರದಂತೆ ನೋಡಿಕೊಳ್ಳಿ. 

ಪ್ರಾಣಿ ಪ್ರಿಯರಿಗೊಂದು ಪ್ರಿಯ ಕೆರಿಯರ್...

ಫ್ಲೆಕ್ಸಿಬಲ್ ಆಗಿರಿ

ಇಂಟರ್‌ವ್ಯೂಗೆ ಹೋಗುವಾಗ ಮನಸು ಫ್ರೆಶ್ ಆಗಿರಲಿ. ಕಾನ್ಫಿಡೆಂಟ್ ಆಗಿರಿ.  ಯಾವುದೇ ಊರಲ್ಲಿ ಪೋಸ್ಟಿಂಗ್ ಹಾಕಿದರೂ ಕೆಲಸ ಮಾಡಲು ಅಡ್ಡಿಯಿಲ್ಲವೆಂದು ಹೇಳಿ. ವೇತನ ಕಡಿಮೆ ಎಂದರೂ ಕೆಲಸವನ್ನು ಒಪ್ಪಿಕೊಳ್ಳಿ. ಕೆಲವೊಮ್ಮೆ ಹಣದ ಬಗ್ಗೆ ಅವರು ನಿಮ್ಮ ಮನಸ್ಥಿತಿಯನ್ನು ತಿಳಿಯಲು ಪ್ರಶ್ನೆ ಕೇಳುತ್ತಾರೆ. ಪರಿಸ್ಥಿತಿಯನ್ನು ಅರಿತು ಉತ್ತರಿಸಿ. 

 

click me!