ಪ್ರಾಣಿ ಪ್ರಿಯರಿಗೊಂದು ಪ್ರಿಯ ಕೆರಿಯರ್...

By Web Desk  |  First Published Jul 7, 2019, 3:10 PM IST

ನೀವು ಪ್ರಾಣಿಪ್ರಿಯರಾಗಿದ್ದರೆ ಇಲ್ಲಿದೆ ನಿಮಗೊಂದು ಬೆಸ್ಟ್ ಅವಕಾಶ. ಪ್ರಾಣಿಗಳೊಂದಿಗೆ ಟೈಮ್ ಕಳೆಯುತ್ತಾ, ಅವುಗಳ ಗ್ರೂಮಿಂಗ್ ಮಾಡುತ್ತಾ ಕೈ ತುಂಬಾ ಹಣವನ್ನೂ ಪಡೆಯಬಹುದು. ಹೇಗೆ? 


ನಿಮಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿಯೇ? ಅವಕ್ಕೆ ಸ್ನಾನ ಮಾಡಿಸುವುದು, ಸ್ವಚ್ಛ ಮಾಡೋದು ನಿಮಗಿಷ್ಟವಾದರೆ ಪೆಟ್ ಗ್ರೂಮಿಂಗ್ ಕ್ಷೇತ್ರ ಸೂಟ್ ಆಗೋವಂಥ ಫೀಲ್ಡ್. ಪ್ರೊಫೆಷನಲ್ ಪೆಟ್ ಗ್ರೂಯರ್ ಆಗಲು ಕೆಲವು ಕೋರ್ಸ್‌ಗಳನ್ನ ಮತ್ತು ಟ್ರೇನಿಂಗ್ ಪಡೆಯೋದು ಬೆಸ್ಟ್. 

ಶೈಕ್ಷಣಿಕ ಅರ್ಹತೆ

Tap to resize

Latest Videos

ಪೆಟ್ ಗ್ರೂಯರ್ ಆಗಲು ವಿಶೇಷ ವಿದ್ಯಾಭ್ಯಾಸ ಪಡೆದಿರಬೇಕೆಂದೇನೂ ಇಲ್ಲ. ಆದರೆ ಈ ಕ್ಷೇತ್ರದಲ್ಲಿ ಬೆಳೆಯಲು ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ, ಕರುಣೆ ಬೇಕು. 

ಕೆಲಸದಲ್ಲಿ ಏಕಾಗ್ರತೆ ಇಲ್ಲವೇ? ಹೀಗೆ ಮಾಡಿ ನೋಡಿ..

ಏನು ಹೇಳಿ ಕೊಡುತ್ತಾರೆ?

ಗ್ರೂಮಿಂಗ್ ಕೋರ್ಸಿನಲ್ಲಿ ನಾಯಿ, ಬೆಕ್ಕು, ಮೊಲ ಮೊದಲಾದ ಸಾಕು ಪ್ರಾಣಿಗಳ ಗ್ರೂಮಿಂಗ್ ವಿಧಾನವನ್ನು ಹೇಳಿ ಕೊಡುತ್ತಾರೆ. ಜೊತೆಗೆ ಅವುಗಳ ಹೇರ್ ಡ್ರೆಸಿಂಗ್ ಆರ್ಟ್ ಕುರಿತೂ ಹೇಳಿ ಕೊಡಲಾಗುತ್ತದೆ. 

ಉದ್ಯೋಗ

ನೀವು ಉತ್ತಮವಾದ ಪೆಟ್ ಗ್ರೂಮಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡಬಹುದು. ಜೊತೆಗೆ ಬಿಜಿನೆಸ್ ಕೂಡ ಮಾಡಬಹುದು. ಇದಕ್ಕಾಗಿ ಟ್ರೈನಿಂಗ್, ಶಾಪ್ ರೆಂಟ್, ಟೂಲ್ಸ್, ಇತರ ಸಾಧನಗಳು ಎಲ್ಲಾ ಸೇರಿ ಸುಮಾರು 4-5 ಲಕ್ಷ ಹಣ ಖರ್ಚಾಗಬಹುದು. ಆದರೆ ಒಂದು ಸಲ ಬಿಜಿನೆಸ್ ಸೆಟಲ್ ಆದರೆ ಆರಾಮವಾಗಿ ಪ್ರತಿ ತಿಂಗಳೂ ಸುಮಾರು 50,000 ರೂ.ವರೆಗೂ ಲಾಭ ಗಳಿಸಬಹುದು. 

ಇತ್ತೀಚಿಗೆ ಪೆಟ್ ಗ್ರೂಮಿಂಗ್‌ಗಾಗಿ ಹಲವು ಕ್ಯಾಂಪೈನ್ ನಡೆಯುತ್ತದೆ. ಅದರಲ್ಲಿ ಪೆಟ್ ಗ್ರೂಮಿಂಗ್, ಕೇರಿಂಗ್ ಮತ್ತು ಮೆಡಿಕಲ್ ಕೇರ್‌ಗಾಗಿ ಟ್ರೇನ್ ಪೆಟ್ ಗ್ರೂಮರ್ ಅಗತ್ಯವಿದೆ. ಅಲ್ಲೂ ನೀವು ಕಾರ್ಯ ನಿರ್ವಹಿಸಬಹುದು. 

ಆಫೀಸಿನಲ್ಲಿ ಮನೆ ರೀತಿ ಇದ್ರೆ ಏನ್ ಚೆಂದ ಹೇಳಿ?

ಪ್ರಮುಖ ಪೆಟ್ ವಿಶ್ವವಿದ್ಯಾಲಯಗಳು 

- ಸ್ಕೂಪಿ ಸ್ಕ್ರಬ್ ದೆಹಲಿ

- ಫಿಜಿ ವಿಜಿ  ಬೆಂಗಳೂರು. 

click me!