ದ್ವಿತೀಯ ಪಿಯು ಪರೀಕ್ಷೆಯ ಕೀ ಉತ್ತರಗಳು ಪ್ರಕಟ: ಚೆಕ್ ಮಾಡ್ಕೊಳ್ಳಿ

Published : May 07, 2020, 09:37 PM IST
ದ್ವಿತೀಯ ಪಿಯು ಪರೀಕ್ಷೆಯ ಕೀ ಉತ್ತರಗಳು ಪ್ರಕಟ: ಚೆಕ್ ಮಾಡ್ಕೊಳ್ಳಿ

ಸಾರಾಂಶ

ಇನ್ನೂ ಒಂದು ವಿಷಯದ ಪರೀಕ್ಷೆ ಬಾಕಿ ಇರುವಾಗಲೇ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಿದೆ.

ಬೆಂಗಳೂರು, (ಮೇ.07): ಇಂಗ್ಲಿಷ್‌ ಹೊರತುಪಡಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಕೀ ಉತ್ತರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಈ ಉತ್ತರಗಳಲ್ಲಿ ಏನಾದರೂ ಲೋಪದೋಷ ಕಂಡುಬಂದಲ್ಲಿ ವಿದ್ಯಾರ್ಥಿಗಳು ಅಥವಾ ಉಪನ್ಯಾಸಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ದೇಶದಾದ್ಯಂತ CBSE 10ನೇ ತರಗತಿ ಪರೀಕ್ಷೆ ರದ್ದು...!

ಕೊರೋನಾ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಕೊನೆಯದಾಗಿ ಉಳಿದಿದ್ದ ಇಂಗ್ಲಿಷ್‌ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೇ ಈ ಪರೀಕ್ಷೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.  

ರಾಜ್ಯಾದ್ಯಂತ ಮಾ.4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದವು. ಎಲ್ಲಾ ವಿಷಯಗಳ ಪರೀಕ್ಷೆಗಳು ಮುಗಿದ್ದವು. ಕೊನೆಯದಾಗಿ ಇಂಗ್ಲೀಷ್ ಪರೀಕ್ಷೆ ಬಾಕಿ ಇತ್ತು.

ಅಷ್ಟರಲ್ಲೇ  ಕೊರೋನಾ ಲಾಕ್‌ಡೌನ್‌ ಘೋಷಣೆಯಾಯ್ತು. ಈ ಹಿನ್ನೆಲೆಯಲ್ಲಿ ಈ ವಿಷಯವಾನ್ನು ಅನಿವಾರ್ಯವಾಗಿ ಮುಂದೂಡಲಾಗಿದ್ದು, ಇನ್ನೂ ಪರೀಕ್ಷೆಯ ಹೊಸ ದಿನಾಂಕ  ನಿಗದಿಯಾಗಿಲ್ಲ.  

ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಟ್ರಂಪ್‌ 50% ತೆರಿಗೆ: ಸೂರತ್‌ನಲ್ಲಿಅಪ್ಪನಿಗೆ ಕೆಲ್ಸವಿಲ್ಲ, ಶಾಲೆಗೆ ಮಕ್ಳಿಲ್ಲ!
ಹಾಸನದ 7ನೇ ತರಗತಿ ಬಾಲಕ ಏಷ್ಯನ್ ಬುಕ್‌ ಆಫ್ ರೆಕಾರ್ಡ್, ಕಣ್ಣು ಮುಚ್ಚಿಕೊಂಡೇ 1 ನಿಮಿಷದಲ್ಲಿ 8 ಕ್ಯೂಬ್ ಕಮಾಲ್!