
ಬೆಂಗಳೂರು: ಜಾತ್ಯತೀತರ ಅಪ್ಪ-ಅಮ್ಮ ಯಾರು ಎಂದು ಪ್ರಶ್ನಿಸುವವರು ಮೊದಲಿಗೆ ಸೀತೆಯ ಅಪ್ಪ-ಅಮ್ಮ ಯಾರು, ಆಕೆಯ ಜಾತಿ ಯಾವುದು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಬುಧವಾರ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಮತ್ತು ನೌಕರರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಜಾತ್ಯತೀತರ ಕುರಿತು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆದರ್ಶದ ಕಾರಣ ಕ್ಕಾಗಿ ಸೀತೆಯನ್ನು ಗೌರವಿಸಲಾಗುತ್ತದೆ. ಆ ಆದರ್ಶಗಳ ದಿಕ್ಕಿನಲ್ಲಿ ಸಮಾಜ ಮುನ್ನಡೆಯಬೇಕಿದೆ. ಸೀತೆಯನ್ನು ಆದರ್ಶ ನಾರಿ ಎಂದು ಹೇಳುತ್ತೇವೆ. ಆಕೆಯ ಅಪ್ಪ-ಅಮ್ಮ ಯಾರು ಅಂತ ಯಾರಿಗೂ ಗೊತ್ತಿಲ್ಲ. ಜನಕ ಮಹಾರಾಜ ಆಕೆಯನ್ನು ಸಾಕಿದ್ದು ಎನ್ನುವುದು ಗೊತ್ತು. ಕೆಲವರು ಮಾತನಾಡುವಾಗ ಅಪ್ಪ- ಅಮ್ಮನ ರಕ್ತದ ಪರಿಚಯ ಇಲ್ಲದವರು ಜಾತ್ಯತೀತರು ಎಂದು ಹೇಳುತ್ತಾರೆ. ಈಗ ಅವರಿಗೆ ನಾನು ಕೇಳುತ್ತೇನೆ, ಸೀತೆಯ ಅಪ್ಪ-ಅಮ್ಮ ಯಾರು ಎಂದರು.
ಪೋಕ್ಸೋ ಕಾಯ್ದೆ ಪ್ರಕಾರ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ಮಾಹಿತಿ ಬಹಿರಂಗಪಡಿಸುವಂತಿಲ್ಲ. ಆದರೆ, ವಿಜಯಪುರ ಘಟನೆಯಲ್ಲಿ ಬಹಿರಂಗಪಡಿಸಲಾಗಿದೆ ಎಂದರು.