
ಭದ್ರಾವತಿ (ನ.08): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದ ನಂತರ ವಿವಿಧ ಧರ್ಮಿಯರ ನಡುವೆ ಕೋಮು ಸಂಘರ್ಷ ಹೆಚ್ಚಾಗಿ ಅಮಾಯಕರ ಹತ್ಯೆ ನಡೆಯುತ್ತಿದ್ದು, ರಾಜ್ಯದಲ್ಲಿ ಜನರು ಆತಂಕದ ನೆರಳಿನಲ್ಲಿ ಬದುಕುವಂತಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ. ಆನಂದಕುಮಾರ್ ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ಟಿಪ್ಪು ಜಯಂತಿ ವಿರೋಸಿ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ನೇತತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನೇತತ್ವ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿ ಇತಿಹಾಸ ವಿರೋಯಾಗಿದೆ. ಅಲ್ಲದೆ ಟಿಪ್ಪುವಿನ ನಿಜವಾದ ಚರಿತ್ರೆಯನ್ನು ತಿಳಿಯದ ನಾಡಿನ ಬುದ್ದಿಜೀವಿಗಳು, ಪ್ರಗತಿಪರರು, ಜಾತ್ಯಾತೀತರು, ತಮ್ಮದೆ ಆದ ತಪ್ಪು ವ್ಯಾಖ್ಯಾನವನ್ನು ನೀಡುವ ಮೂಲಕ ಹಿಂದೂ ವಿರೋ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಆಶಾಂತಿ ಮೂಡಿಸಿ, ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ದೇಶದ ಇತಿಹಾಸವನ್ನು ತಿರುಚಿ ವಿಕತ ಮನೋಭಾವವನ್ನು ಪ್ರದರ್ಶಿಸುತ್ತಿರುವುದು ದೇಶ ದ್ರೋಹದ ಸಂಗತಿಯಾಗಿದೆ. ಅದ್ದರಿಂದ ಈತನ ಜಯಂತಿಯನ್ನು ಸರ್ಕಾರ ಅಚರಿಸುತ್ತಿರುವುದನ್ನು ಕೈ ಬಿಡಬೇಕು ಆ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಗ್ರಾಮಾಂತರ ಘಟಕದ ಅಧ್ಯಕ್ಷ ಮಂಗೋಟೆ ರುದ್ರೇಶ್, ಮುಖಂಡರಾದ ವಿಶ್ವನಾಥ್ ರಾವ್, ಟಿ. ವೆಂಕಟೇಶ್, ಸುನೀತ ನಂಬಿಯಾರ್, ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ಹಾ. ರಾಮಪ್ಪ, ಜಿ. ಧರ್ಮಪ್ರಸಾದ್ ಮಾತನಾಡಿದರು.
ಪ್ರಮುಖರಾದ ಟಿ.ವೆಂಕಟರಮಣ ಶೇಟ್, ಹೆಚ್.ಪಿ. ಶಂಕರ್ ರಾವ್, ಓಂಕಾರಪ್ಪ, ಮುತ್ತು ರಾಮಲಿಂಗಮ್, ರಾಮಮೂರ್ತಿ, ಸುಬ್ರಮಣ್ಯ, ನರಸಿಂಹಾಚಾರ್, ಎಂ.ಮಂಜುನಾಥ, ದೇವು, ಸುನೀಲ್ ರಾವ್ ಗಾಯಕ್ವಾಡ್, ರಾಮನಾಥ್ ಬರ್ಗೆ, ರವೀಶ, ಬಿ.ಎಸ್. ಶ್ರೀನಾಥ್ ಸೇರಿದಂತೆ ನೂರಾರು ಮಂದಿ ಮುಖಂಡರುಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಂತರ ತಹಸೀಲ್ದಾರ್ ಎಂ.ಆರ್. ನಾಗರಾಜ್ ರವರ ಮುಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.