ಮುಬೀನ್ ತಾಜ್'ಗೆ ಮದುವೆ ಆಗಿ 6 ತಿಂಗಳಿಗೆ ತಲಾಕ್!: ತ್ರಿವಳಿ ತಲಾಕ್'ನಿಂದ ಮುಸ್ಲಿಂ ಮಹಿಳೆ ಕಂಗಾಲು

Published : Apr 19, 2017, 03:10 AM ISTUpdated : Apr 11, 2018, 12:44 PM IST
ಮುಬೀನ್ ತಾಜ್'ಗೆ ಮದುವೆ ಆಗಿ 6 ತಿಂಗಳಿಗೆ ತಲಾಕ್!: ತ್ರಿವಳಿ ತಲಾಕ್'ನಿಂದ ಮುಸ್ಲಿಂ ಮಹಿಳೆ ಕಂಗಾಲು

ಸಾರಾಂಶ

ದೇಶಾದ್ಯಂತ ತ್ರಿವಳಿ ತಲಾಕ್ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಿದೆ. ಇಂಥಹ ಸಂದರ್ಭದಲ್ಲಿಯೇ ಗಣಿನಾಡಿನ ಮುಸ್ಲಿಂ ಕುಟುಂಬವೊಂದು ತಲಾಕ್ ಪದ್ಧತಿಯನ್ನು ಮೀರಿ ನ್ಯಾಯಾಲಯದ ಮೊರೆ ಹೋಗಿದೆ. ತಲಾಕ್ ಪದ್ಧತಿ ವಿರುದ್ಧ ಮಹಿಳೆಯೊಬ್ಬರು ತಿರುಗಿ ಬಿದ್ದಿದ್ದಾರೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಬಳ್ಳಾರಿ(ಎ.19): ದೇಶಾದ್ಯಂತ ತ್ರಿವಳಿ ತಲಾಕ್ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಿದೆ. ಇಂಥಹ ಸಂದರ್ಭದಲ್ಲಿಯೇ ಗಣಿನಾಡಿನ ಮುಸ್ಲಿಂ ಕುಟುಂಬವೊಂದು ತಲಾಕ್ ಪದ್ಧತಿಯನ್ನು ಮೀರಿ ನ್ಯಾಯಾಲಯದ ಮೊರೆ ಹೋಗಿದೆ. ತಲಾಕ್ ಪದ್ಧತಿ ವಿರುದ್ಧ ಮಹಿಳೆಯೊಬ್ಬರು ತಿರುಗಿ ಬಿದ್ದಿದ್ದಾರೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ದೇಶದಲ್ಲಿ ಹೆಚ್ಚಾಗಿತ್ತಿರುವ ತ್ರಿವಳಿ ತಲಾಕ್​​ ತಡೆಯಲು ಸುಪ್ರೀಂ ಕೋರ್ಟ್​ ಮತ್ತು ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಲು ಪ್ಲಾನ್​ ಮಾಡಿಕೊಂಡಿವೆ. ಇಂತಹ ವೇಳೆಯಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆ ಹೊಸಪೇಟೆಯ ಮುಸ್ಲಿಂ ಕುಟುಂಬವೊಂದು ತ್ರಿವಳಿ ತಲಾಕ್​'ನಿಂದ ಕಷ್ಟ ಅನುಭವಿಸುತ್ತಿದೆ.

ಹೊಸಪೇಟೆಯ ಜೆಸ್ಕಾಂ ನಿವೃತ್ತ ನೌಕರ ಬಿ. ಅಬ್ದುಲ್ ಹಮೀದ್ ಎಂಬುವರ ಮಗಳು ಮುಬೀನಾ ತಾಜ್'​ಳನ್ನು  ಅಹ್ಮಮ ರಜಾಕ್ ಖಾನ್ ಜೊತೆ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆಗಿ ಆರು ತಿಂಗಳು ಕಳೆದಿಲ್ಲ, ಆಗಲೇ  ಅಹ್ಮಮ ರಜಾಕ್ ಖಾನ್ ಮುಬೀನಾ ತಾಜ್​ಳನ್ನು ವರದಕ್ಷಿಣೆ ಕಿರುಕುಳ ನೀಡಿ ತಲಾಕ್​ ನೀಡಿದ್ದಾನೆ. ಮುಸ್ಲಿಂ ಧರ್ಮದ ಪ್ರತ್ಯೇಕ ಕಾನೂನಿನ ಪ್ರಕಾರ ತಲಾಕ್ ನಿಯಮಾನುಸಾರಿ ಮೂರು ಬಾರಿ ಹೇಳಬೇಕು. ಆದರೆ ಧರ್ಮಗುರುಗಳು ಅವಸರವಾಗಿ ಪಂಚಾಯ್ತಿಯಲ್ಲಿ ಒಂದೇ ಒಂದು ಬಾರಿ ಮೂರು ಸಾರಿ ತಲಾಕ್ ಅಂತ ಹೇಳಿ, ಸಹಿ ಮಾಡಿಸಿಕೊಂಡು ಮದುವೆ ಮುರಿದುಬಿಟ್ಟಿದ್ದಾರೆ ಎಂಬುವುದು ಮುಬೀನ್ ತಂದೆ ಆರೋಪ. ತಲಾಕ್'​ನಿಂದ ನನಗೆ ಅನ್ಯಾಯವಾಗಿದೆ. ನಾನು ಯಾವುದೇ ತಪ್ಪು ಮಾಡದೇ ನನಗೆ ತಲಾಕ್​ ನೀಡಿರುವುದು ಎಷ್ಟು ಸರಿ. ನಾನು ಗಂಡನ ಜೊತೆ ಸಂಸಾರ ಮಾಡುತ್ತೇನೆ. ಮನೆಗೆಲಸ ಮಾಡಿಯಾದರೂ ನನ್ನ ಗಂಡನನ್ನು ನಾನೇ ಸಾಕುತ್ತೇನೆ. ನನಗೆ ನ್ಯಾಯಕೊಡಿಸಿ ಅಂತ ನೊಂದ ಮುಬೀನ್ ತಾಜ್ ಕೋರ್ಟ್​ ಮೊರೆ ಹೋಗಿದ್ದಾಳೆ.

ಒಟ್ಟಿನಲ್ಲಿ ಅದ್ಧೂರಿಯಾಗಿ ಮಗಳ ಮದುವೆ ಮಾಡಿ ಸಂಭ್ರಮಿಸಬೇಕಾದ ಪೋಷಕರು ಅಳಿಯ ನೀಡಿದ ತಲಾಕ್ ​ನಿಂದ ಕಂಗಾಲಾಗಿದ್ದಾರೆ. ಗಂಡನ ಮನೆಯಲ್ಲಿ ಇರಬೇಕಾದ ನೊಂದ ಮುಬೀನ್ ತಾಜ್ ನ್ಯಾಯಕ್ಕಾಗಿ ಕೋರ್ಟ್​​ಗೆ ಅಲೆಯುತ್ತಿದ್ದಾಳೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ