ಡಿಸಿ ಕಾಲಿಗೆ ಬಿದ್ದು ಬೇಡಿಕೊಂಡ್ರು, ಬಾಯಿ ಬಡಿದುಕೊಂಡು ಲಬೋ ಲಬೋ ಅಂದ್ರು

Published : Nov 30, 2016, 03:09 PM ISTUpdated : Apr 11, 2018, 12:55 PM IST
ಡಿಸಿ ಕಾಲಿಗೆ ಬಿದ್ದು ಬೇಡಿಕೊಂಡ್ರು, ಬಾಯಿ ಬಡಿದುಕೊಂಡು ಲಬೋ ಲಬೋ ಅಂದ್ರು

ಸಾರಾಂಶ

ಬುಧವಾರ ಮಧ್ಯಾಹ್ನ ಮಂಗಳಮುಖಿಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೋಧಿಸಿದ ಪರಿಯಿದು. ವಸತಿ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆಗಿಳಿದಿದ್ದ ಅವರುಗಳು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಮನವಿ ಸ್ವೀಕರಿಸಲು ಆಗಮಿಸಿದಾಗ ಸತ್ತವರ ಮನೆಯಲ್ಲಿ ಗೋಳಾಡುವಂತೆ ಬಾಯಿ ಬಡಿದುಕೊಂಡರು. ಕಾಲಿಗೆ ಬಿದ್ದು ರೋಧಿಸಿದರು. ಮನೆ ಕೊಡ್ತೀವಿ ಅನ್ನೋ ವರೆಗೂ ಕಾಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.

ದಾವಣಗೆರೆ (ನ.30): ಯಪ್ಪೋ ನಾವು ಮನುಷ್ಯರೇ. ಎಲ್ರಿಗೂ ನಿಲ್ಲೋಕೆ, ಕೂರೋಕೆ, ಮಲಗೋಕೆ ಜಾಗ ಐತಿ, ನಮಗ್ಯಾಕೆ ಇಲ್ಲ. ಎಷ್ಟು ದಿನ ಅಂತಾ ಬಸ್ ಸ್ಟ್ಯಾಂಡ್, ರೇಲ್ವೆ ಸ್ಟೇಷನ್‌ನಲ್ಲಿ ಮಲಗಿಕೊಳ್ಳಬೇಕು. ನಮಗೂ ಅಂತ ಮನೆ ಮಾಡಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ...

ಬುಧವಾರ ಮಧ್ಯಾಹ್ನ ಮಂಗಳಮುಖಿಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೋಧಿಸಿದ ಪರಿಯಿದು. ವಸತಿ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆಗಿಳಿದಿದ್ದ ಅವರುಗಳು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಮನವಿ ಸ್ವೀಕರಿಸಲು ಆಗಮಿಸಿದಾಗ ಸತ್ತವರ ಮನೆಯಲ್ಲಿ ಗೋಳಾಡುವಂತೆ ಬಾಯಿ ಬಡಿದುಕೊಂಡರು. ಕಾಲಿಗೆ ಬಿದ್ದು ರೋಧಿಸಿದರು. ಮನೆ ಕೊಡ್ತೀವಿ ಅನ್ನೋ ವರೆಗೂ ಕಾಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.

ಮಂಗಳಮುಖಿಯರ ಪ್ರತಿಭಟನೆ ದಿಢೀರ್ ಪರಿವರ್ತನೆಯಾದುದ ಕಂಡು ಜಿಲ್ಲಾಧಿಕಾರಿ ರಮೇಶ್ ಕೆಲಕಾಲ ಅವಕ್ಕಾದರು. ತಕ್ಷಣವೇ ಅಲ್ಲಿದ್ದ ಪೊಲೀಸರು ಜಿಲ್ಲಾಧಿಕಾರಿಗಳಿಂದ ಮಂಗಳಮುಖಿಯರ ಬೇರ್ಪಡಿಸಿ ಸಮಸ್ಯೆ ನಿವೇದಿಸುವವಂತೆ ಕೋರಿದರು.

ಮಂಗಳಮುಖಿ ಜೋಯಾ ಮಾತನಾಡಿ, ದಾವಣಗೆರೆಯಲ್ಲಿ ನಾವು ಐವತ್ತಕ್ಕೂ ಹೆಚ್ಚು ಮಂದಿಯಿದ್ದು ಯಾವುದಾದರೂ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ಕಳೆದ ೫ ವರ್ಷಗಳಿಂದಲೂ ಮಂಗಳಮುಖಿಯರಿಗೆ ಸೂರು ಕಲ್ಪಿಸುವಂತೆ ಆಗ್ರಹಿಸಿಕೊಂಡು ಬಂದಿದೇವೆ. ಆದರೆ ನಮ್ಮ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ನಾವು ಮನುಷ್ಯರು ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರ ಸಹಾಯ ಹಸ್ತ ನೀಡಬೇಕು. ಸಮಾಜದಿಂದ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ಸರ್ಕಾರ ಮನಸ್ಸಿನಿ ಯೋಜನೆಯಡಿ ನೆರವು ನೀಡುವ ಭರವಸೆ ನೀಡಿದ್ದು ಇದುವರೆಗೂ ಈಡೇರಿಸಿಲ್ಲ. ಬೀದಿಯಲ್ಲಿ ಮಲಗಿ ಸಮಾಜದ ಕೆಂಗಣ್ಣಿಗೆ ತುತ್ತಾಗಿ ಸಾಕಾಗಿ ಹೋಗಿದೆ ಎಂದು ಅವವತ್ತುಕೊಂಡರು.

ರೇಲ್ವೆ ಸ್ಟೇಷನ್ ಹಾಗೂ ಬಸ್ ನಿಲ್ದಾಣದಲ್ಲಿ ಮಲಗಿದರೆ ಲೈಂಗಿಕ ಕಾರ್ಯಕರ್ತರು ಅಂತ ಪೊಲೀಸರು ತೊಂದರೆ ಕೊಡುತ್ತಾರೆ. ಎಲ್ಲರೂ ನೆಮ್ಮದಿಯಲ್ಲಿರುವಾಗ ನಮಗೇಕೆ ಈ ಶಿಕ್ಷೆ, ಬೂದಿಹಾಳದಲ್ಲಿ ಸರ್ಕಾರದ ಭೂಮಿಯಿದೆ. ಹೊಸ ಕ್ಯಾಂಪ್‌ನಲ್ಲಿಯೂ ಕೂಡಾ ಜಾಗವಿದೆ. ಅಲ್ಲಿ ನಿವೇಶನ ಕೊಟ್ಟರೆ ಮನೆ ಕಟ್ಟಿಕೊಳ್ಳುವುದಾಗಿ ಹೇಳಿದರು.

ಮನವಿ ಆಲಿಸಿದ ಜಿಲ್ಲಾಧಿಕಾರಿ ರಮೇಶ್ ಬೂದಿಹಾಳದಲ್ಲಿ ನಿವೇಶನ ಕೊಡಲು ಬರುವುದಿಲ್ಲ. ಪೌರಕಾರ್ಮಿಕರಿಗೆಂದು ಅಲ್ಲಿ ಜಾಗ ಕಾಯ್ದಿರಿಸಲಾಗಿದೆ ಬೇರೆ ಎಲ್ಲಿಯಾದರೂ ಹುಡುಕಲಾಗುವುದು ಎಂದರು.

ಹರಪನಹಳ್ಳಿ ರಸ್ತೆಯಲ್ಲಿ ಜಾಗವಿದ್ದು ಅಲ್ಲಿ ಹೋಗುವಿರಾ ಎಂಬ ಕೋರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಮಂಗಳಮುಖಿಯರು ಊರ ಹತ್ತಿರ ಜಾಗ ಕೊಡಿ. ನಮ್ಮನ್ಯಾಕೆ ಊರು ಬಿಟ್ಟು ದೂರ ಓಡಿಸುತ್ತೀರಿ ಎಂದರು. ಶೀಘ್ರ ಜಾಗ ಹುಡುಕಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಮಂಗಳಮುಖಿಯರು ನಿರ್ಗಮಿಸಿದರು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ