
ಬೆಂಗಳೂರು: ಇಲ್ಲಿನ ಜಯನಗರ ಟಿ ಬ್ಲಾಕ್‌ನಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಹಲವು ದಿನಗಳ ಹಿಂದೆ ಭಾರಿ ಕಳ್ಳತನವಾಗಿದ್ದು, ಇದೀಗ ಬೆಳಕಿಗೆ ಬಂದಿದೆ.
ದೇವಸ್ಥಾನದ ಖಜಾಂಚಿ ಪೊಲೀಸರಿಗೆ ದೂರು ನೀಡಿದ್ದು, ಮೂರೂವರೆ ಕೆ.ಜಿ.ಚಿನ್ನಾಭರಣ, 21 ಸಾವಿರ ರೂ. ನಗದು ಕಳ್ಳತನವಾಗಿದೆ. ಮಠದ ಸಿಬ್ಬಂದಿಯಿಂದಲೇ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದ್ದು, ಕದ್ದ ಆಭರಣದಲ್ಲಿ ಎರಡೂವರೆ ಕೆ.ಜಿ.ಚಿನ್ನ ನೀರಿನ ಟ್ಯಾಂಕಿನಲ್ಲಿ ಪತ್ತೆಯಾಗಿದೆ.
ಮಠದ ಸೆಕ್ಯುರಿಟಿ ಗಾರ್ಡ್ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.