ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ: ದೇವೇಗೌಡ

By Suvarna Web DeskFirst Published Mar 26, 2018, 1:55 PM IST
Highlights

'ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ,' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.

ಬೆಂಗಳೂರು: 'ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ,' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.

ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು,'ಕಾವೇರಿ ವಿಚಾರವಾಗಿ ಅವರನ್ನು ಭೇಟಿಯಾಗಿದ್ದು, ಇದನ್ನೇ ಕಾಂಗ್ರೆಸ್ ತಪ್ಪಾಗಿ ಅರ್ಥೈಸಿಕೊಂಡಿದೆ,' ಎಂದರು. 

'ಬಿಜೆಪಿ ಪಕ್ಕ ನಿಂತು ಕೆಮ್ಮಿದ್ರೆ ಸಾಕು, ಕಾಂಗ್ರೆಸ್ ಧೂಳಿಪಟವಾಗುತ್ತೆ,' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 'ಮಾಯವತಿ ಜೊತೆ ಮೈತ್ರಿ ಮಾಡಿಕೊಳ್ಳಲು ನಾನು ಮತ್ತು ಕುಮಾರಸ್ವಾಮಿ ಮಾತನಾಡಿದ್ದೇವೆ,' ಎಂದರು.

'ನಾವು ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇವೆ. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡಿದ್ದು, ಒಂದು ನನ್ನ ಟೀಮ್ , ಇನ್ನೊಂದು ಕುಮಾರಸ್ವಾಮಿ ಟೀಮ್,' ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.
 

ಚಿಕ್ಕಪ್ಪ ಹೇಳಿದಂತೆ ಕೇಳ್ತೀನಿ ಎಂದು ಪ್ರಜ್ವಲ್:

'ನನ್ನ ಕುಟುಂಬ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಪ್ರಜ್ವಲ್ ಹೇಳಿದಾನೆ. ನನ್ನ ತಾತ ಕುಟುಂಬದ ಮುಖ್ಯಸ್ಥರು ನನ್ನ ಚಿಕ್ಕಪ್ಪ ಹೇಳಿದಂತೆ ಕೀಳ್ತಿನಿ ಅಂತ ಹೇಳಿದ್ದಾನೆ. ನನ್ನ ನಂತರ ಕುಟುಂಬನ್ನ ಮತ್ತು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಕುಮಾರಸ್ವಾಮಿಯದ್ದು. ರೇವಣ್ಣ ಹಿರಿಯವನಾದರೂ ರಾಜಕೀಯವಾಗಿ ಕುಮಾರಸ್ವಾಮಿ ದೊಡ್ಡವ. ಹೀಗಾಗಿ ಚಿಕ್ಕಪ್ಪನ ನಿರ್ಧಾರವನ್ನು ಪಾಲಿಸ್ತಿನಿ ಅಂತಾ ಪ್ರಜ್ವಲ್ ಹೇಳಿದ್ದಾನೆ,' ಎಂದು ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

click me!