'ಅನಂತಕುಮಾರ್ ಹೆಗಡೆ ನಾಲಿಗೆ ಕಟ್ ಮಾಡಿದವರಿಗೆ ಬಹುಮಾನ'

By Web Desk  |  First Published Mar 9, 2019, 5:15 PM IST

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಸಂವಿಧಾನ ಬದಲಾಯಿಸುವ ಸಂಬಂಧ ಹೇಳಿಕೆ ನೀಡಿ ವಿಪರೀತ ಟೀಕೆಗೆ ಗುರಿಯಾಗಿದ್ದರು. ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಆದರೂ ಅದರ ಬಿಸಿ ಇನ್ನೂ ಆರಿಲ್ಲ. ಅವರ ನಾಲಿಗೆಯನ್ನು ಕಟ್ ಮಾಡುವ ಬಗ್ಗೆ ಇದೀಗ ಮಾತನಾಡಿದ್ದಾರೆ.


ಬೆಳಗಾವಿ: 'ಸಂವಿಧಾನ ಬದಲಾವಣೆ ಮಾಡಬೇಕೆಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ನಾಲಿಗೆ ಕಟ್ಟು ಮಾಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು,' ಎಂದು ಎಐಎಂಐಎಂ ಜಿಲ್ಲಾಧ್ಯಕ್ಷ ಪತ್ತೆದಾರ ಘೋಷಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೋಷಿತ ಹಿಂದುಳಿದ ವರ್ಗ, ಅಲ್ಪ‌ ಸಂಖ್ಯಾತರ ಭಾರತೀಯ ರಿಪಬ್ಲಿಕ್ ಪಾರ್ಟಿ ಹಾಗೂ ಎಐಎಂಐಎಂ ಒಕ್ಕೂಟ ಆಯೋಜಿಸಿದ್ದ  ವಿಚಾರವಂತ ವೇದಿಕೆಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

Tap to resize

Latest Videos

ದೇಶದ ಹಿತಕ್ಕಾಗಿ ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಪ್ರಚಾರಕ್ಕಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾತುಗಳನ್ನು ಹೇಳಿದ್ದು, ಅವರ ನಾಲಿಗೆಯನ್ನು ಕಟ್ಟು ಮಾಡಿ ತಂದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.

click me!