ಕೆಲಸದಲ್ಲಿಯೂ ಸೈ.. ಓದಿನಲ್ಲೂ ಜೈ..: ಕಾಲೇಜಿಗೆ ಹೋಗದೆ ರ್ಯಾಂಕ್ ಪಡೆದ ಕುಮಾರ

Published : May 12, 2017, 03:18 AM ISTUpdated : Apr 11, 2018, 01:12 PM IST
ಕೆಲಸದಲ್ಲಿಯೂ ಸೈ.. ಓದಿನಲ್ಲೂ ಜೈ..: ಕಾಲೇಜಿಗೆ ಹೋಗದೆ ರ್ಯಾಂಕ್ ಪಡೆದ ಕುಮಾರ

ಸಾರಾಂಶ

ಮದುವೆಯಾದರೆ ಸಾಕು, ಮುಂದೆ ಓದಲು ಆಗುವುದಿಲ್ಲ ಎನ್ನುವವರೇ ಹೆಚ್ಚು. ಆದರೆ ಇಲ್ಲೊಬ್ಬ ಇದನ್ನು ಸುಳ್ಳು ಮಾಡಿದ್ದಾನೆ. ಹುಬ್ಬಳ್ಳಿಯ ಉಣಕಲ್ ಕ್ರಾಸ್ ನಿವಾಸಿ ಕುಮಾರ ಮುತಗಾರ್ ಎಂಬಾತ ಕಾಲೇಜಿಗೆ ಹೋಗದೆ ಟಿಂಬರ್ ಯಾರ್ಡ್ ನಲ್ಲಿಯೇ ಕೆಲಸ ಮಾಡಿಕೊಂಡು, ಪಿಯುಸಿಯ ಕಲಾವಿಭಾಗದ ದಲ್ಲಿ ಶೇಕಡ. 87 ರಷ್ಟು ಅಂಕಪಡೆದಿದ್ದಾನೆ.

ಹುಬ್ಬಳ್ಳಿ(ಮೇ.12): ಮದುವೆಯಾದರೆ ಸಾಕು, ಮುಂದೆ ಓದಲು ಆಗುವುದಿಲ್ಲ ಎನ್ನುವವರೇ ಹೆಚ್ಚು. ಆದರೆ ಇಲ್ಲೊಬ್ಬ ಇದನ್ನು ಸುಳ್ಳು ಮಾಡಿದ್ದಾನೆ. ಹುಬ್ಬಳ್ಳಿಯ ಉಣಕಲ್ ಕ್ರಾಸ್ ನಿವಾಸಿ ಕುಮಾರ ಮುತಗಾರ್ ಎಂಬಾತ ಕಾಲೇಜಿಗೆ ಹೋಗದೆ ಟಿಂಬರ್ ಯಾರ್ಡ್ ನಲ್ಲಿಯೇ ಕೆಲಸ ಮಾಡಿಕೊಂಡು, ಪಿಯುಸಿಯ ಕಲಾವಿಭಾಗದ ದಲ್ಲಿ ಶೇಕಡ. 87 ರಷ್ಟು ಅಂಕಪಡೆದಿದ್ದಾನೆ.

ಕುಮಾರ ಮುತಗಾರ್'ಗೆ ಮದುವೆ ಆಗಿದ್ದು  ಇಬ್ಬರು ಮಕ್ಕಳಿದ್ದಾರೆ. ಕುಮಾರ ದುಡಿಯದಿದ್ದರೆ ಮನೆ ನಡೆಸುವುದೇ ಕಷ್ಟ. ಆದರೂ ಕುಮಾರ, ಕೆಲಸದ ಮಧ್ಯೆಯೇ ಬಾಹ್ಯವಾಗಿ ಪಿಯುಸಿ ಪರೀಕ್ಷೆ ಎದುರಿಸಿ  600 ಅಂಕಕ್ಕೆ 522 ಮಾರ್ಕ್ಸ್ ಪಡೆದು ಇತರರಿಗೆ ಸ್ಫೂರ್ತಿಯಾಗಿದ್ದಾನೆ.

2000 ಇಸವಿಯಲ್ಲಿ  ಎಸ್ಎಸ್ಎಲ್ಸಿ ಪಾಸಾಗಿದ್ದ ಕುಮಾರನಿಗೆ ಬಡತನದಿಂದ ಮುಂದೆ ಓದಲು ಸಾಧ್ಯವಾಗಿರಲಿಲ್ಲ.  ಆದರೆ ತಾಯಿ ಹಾಗೂ ಪತ್ನಿಯ ಸಹಕಾರ, ಪ್ರೋತ್ಸಾಹದಿಂದ ಪಿಯುಸಿ ಎಕ್ಸಾಂ ಬರೆದು, ಆ ಹುಬ್ಬಳ್ಳಿ ನಗರಕ್ಕೆ ಕೀರ್ತಿ ತಂದಿದ್ದಾನೆ.

ಕುಮಾರ ಮುತಾಗರ್'ಗೆ ಪದವಿ ಓದುವ ಆಸೆಕೂಡಾ ಇದ್ದು, ಇದಕ್ಕೆ ಕುಟುಂಬಸ್ಥರ ಸಹಕಾರವೂ ಇದೆ. ಒಟ್ಟಿನಲ್ಲಿ  ಕಷ್ಟದ ನಡುವೆಯೂ ಓದಿ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾನೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ