
ಬೆಂಗಳೂರು: ಹಿಂದೆ ಮೈಸೂರು ಅರಸರು ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫೈ ಮಾಡಿದ್ದಾರೆ, ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಅವರು ಆರೋಪಿಸಿದ್ದಾರೆ.
ಮೂರು ಎಕರೆ 39 ಗುಂಟೆ ಜಾಗವನ್ನು ಮುಖ್ಯಮಂತ್ರಿ ಡಿನೋಟಿಫೈ ಮಾಡಿದ್ದಾರೆ, ಎಂದರು.
ಜಗದೀಶ್ ಶೆಟ್ಟರ್ ಅವರ ಸರ್ಕಾರ ಇದ್ದಾಗಲೂ ಈ ಜಾಗವನ್ನು ಡಿನೋಟಿಫೈ ಮಾಡಲು ಆಗ್ರಹಿಸಿ ಅರ್ಜಿ ಬಂದಿತ್ತು, ಆದರೆ, ಶೆಟ್ಟರ್ ಅವರು ಅದನ್ನು ಒಪ್ಪಲಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಉದ್ಯಾನವನ, ಸಾರ್ವಜನಿಕ ಅನುಕೂಲಕ್ಕೆ ಮೀಸಲಿಟ್ಟು ಜಾಗವನ್ನು ಡಿನೋಟಿಫಿಕೇಶನ್ ಮಾಡಿದ್ದು, ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿದೆ, ಎಂದು ಆರೋಪಿಸಿದ್ದಾರೆ.