
ವಿಜಯಪುರ : ಬ್ರಾಹ್ಮಣರು ಪ್ರತ್ಯೇಕ ಧರ್ಮವನ್ನು ಬೇಕಾದರೆ ಪಡೆದುಕೊಳ್ಳಲಿ, ಅವರಿಗೆ ಪ್ರತ್ಯೇಕ ಧರ್ಮವನ್ನು ನೀಡಿದರೆ ತಪ್ಪಿಲ್ಲ ಎಂದು ವಿಜಯಪುರದಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಆದರೆ ಬ್ರಾಹ್ಮಣರು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎನ್ನುವುದನ್ನು ಅವರು ಸಾಬೀತುಪಡಿಸಬೇಕು ಎಂದರು.
ಪ್ರತ್ಯೇಕ ಧರ್ಮ ಬೇಕಾದಲ್ಲಿ ಅವರು ಸೂಕ್ತವಾದ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು. ಲಿಂಗಾಯತರು ಹೇಗೆ ಪ್ರತ್ಯೇಕ ಎಂದು ನಾವು ಸಾಬೀತು ಮಾಡಿದ್ದೇವೆ. ಹಾಗೆ ಬ್ರಾಹ್ಮಣರೂ ಕೂಡ ಸಾಬೀತು ಪಡಿಸಿದಲ್ಲಿ ಅವರಿಗೆ ಪ್ರತ್ಯೇಕ ಧರ್ಮ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಅವರು ಹೇಳಿದರು.