
ಬೆಳಗಾವಿ(ನ.25): ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ 5 ನೇ ದಿನಕ್ಕೆ ಕಾಲಿಟ್ಟದೆ. ಇಂದು ಸಹ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸುವರ್ಣ ಸೌಧದ ಮುಂದೆ ಪ್ರತಿಭಟನೆಗಿಳಿದಿವೆ.
ಧಾರವಾಡದ 'ಟಾಟಾ ಮಾರ್ಕೋಪೋಲೊ' ಹಾಗೂ ಬಳ್ಳಾರಿಯ ಜಿಂದಾಲ್, ಹಾಗೂ ಏಕಾಸ್ ಕಾರ್ಖಾನೆಗಳು ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಕಾರ್ಮಿಕ ಹೋರಾಟದಲ್ಲಿ ಭಾಗಿಯಾದ ಮುಖಂಡರನ್ನು ಸೇವೆಯಿಂದ ವಜಾ
ಮಾಡಲಾಗಿದೆ ಎಂದು ಸಾವಿರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಕಾರ್ಮಿಕ ಮುಖಂಡರ ವಜಾ ಆದೇಶ ರದ್ದಾಗಬೇಕು. ರಾಜ್ಯದ್ಯಂತ ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದಾಗಬೇಕು. ಕಾರ್ಮಿಕರ ಕನಿಷ್ಠ
ವೇತನ 22 ಸಾವಿರ ನಿಗದಿ ಮಾಡಬೇಕು. ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಹಗಲು ರಾತ್ರಿ ಧರಣಿ ಆರಂಭಿಸಿದ್ದಾರೆ.